ಕೊರಟಗೆರೆ-ಕೊರಟಗೆರೆ ಮುಂಜಾನೆ ಗೆಳೆಯರ ಬಳಗ ಮತ್ತು ಮಹಿಳಾ ಬಳಗದ ವತಿಯಿಂದ ಬಡ ಮಹಿಳೆಯೊಬ್ಬರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲಾಯಿತು.
ಕೊರಟಗೆರೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾಗಿದ್ದ ಸಿದ್ದಗಿರಿ ನಂಜುಂಡಸ್ವಾಮಿಯವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.ಅವರ ನಿಧನದ ನಂತರ ಪತ್ನಿ ಪದ್ಮಾವತಿಯವರು ತನ್ನ ವಿಕಲಚೇತನ ಮಗಳೊಂದಿಗೆ ಬಹಳ ಕಷ್ಟದಿಂದ ಜೀವನ ನಡೆಸುತ್ತಿದ್ದರು.ಒಂದೊಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಅವರದಾಗಿತ್ತು.
ಇದನ್ನು ಮನಗೊಂಡ ಕೊರಟಗೆರೆ ಮುಂಜಾನೆ ಗೆಳೆಯರ ಬಳಗ ಮತ್ತು ಮಹಿಳಾ ಬಳಗವು ಅವರ ಜೀವನ ನಿರ್ವಹಣೆಗೆ ಹೊಲಿಗೆ ಯಂತ್ರವನ್ನು ಕೊಡುಗೆಯಾಗಿ ನೀಡಿವೆ.
ಈ ಸಂದರ್ಭದಲ್ಲಿ ನೂತನ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ರುದ್ರೇಶ್, ನಿವೃತ್ತ ಜೀವ ವಿಮಾ ಅಧಿಕಾರಿ ಶಂಕರಲಿಂಗೇಗೌಡರನ್ನು ಸನ್ಮಾನಿಸಲಾಯಿತು. ಬಳಗದ ಅದ್ಯಕ್ಷ ಎಲ್.ರಾಜಣ್ಣ, ಮಾಜಿ ಜಿ.ಪಂ ಸದಸ್ಯೆ ದಾಕ್ಷಾಯಿಣಿ, ಪ.ಪಂ.ಸದಸ್ಯ ಕೆ.ಅರ್.ಓಬಳರಾಜು, ಚಂದ್ರಕಲಾ, ಲಕ್ಷ್ಮೀ, ಜ್ಯೋತಿ, ಗಟ್ಲಹಳ್ಳಿ ಕುಮಾರ್, ವಿಜಯನರಸಿಂಹ, ಕೃಷ್ಣಮೂರ್ತಿ, ವಿಶ್ವಣ, ದಿನೇಶ್ ಸೇರಿದಂತೆ ಇತರರು ಹಾಜರಿದ್ದರು.
———————-ನರಸಿಂಹಯ್ಯ ಕೋಳಾಲ