ಕೊರಟಗೆರೆ -160-ಕೋಟಿ- ರೂ.-ವೆಚ್ಚದಲ್ಲಿ-ನಿರ್ಮಾಣವಾಗುತ್ತಿರುವ- ಇಂಟರ್ನ್ಯಾಷನಲ್-ಕ್ರಿಕೆಟ್-ಸ್ಟೇಡಿಯಂ-ಮುಂದಿನ-ವರ್ಷದೊಳಗೆ-ಉದ್ಘಾಟನೆಯಾಗಲಿದೆ-ಗೃಹ ಸಚಿವ-ಡಾ. ಜಿ ಪರಮೇಶ್ವರ್-ಭರವಸೆ

ಕೊರಟಗೆರೆ :-ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ 160 ಕೋಟಿ ರೂ. ವೆಚ್ಚದಲ್ಲಿ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಭರವಸೆಯಂತೆ ಮುಂದಿನ ವರ್ಷ ನಾವು ನೀವೆಲ್ಲರೂ ಕನಿಷ್ಠ ರಣಜಿ ಕ್ರಿಕೆಟ್ ಟೂರ್ನಮೆಂಟನ್ನ ವೀಕ್ಷಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಭರವಸೆ ನೀಡಿದರು.

ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ 138ನೇ ಜಯಂತೋತ್ಸವ ಪ್ರಯುಕ್ತ ಕೊರಟಗೆರೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲ್ಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಹಾಗೂ “ಡಾ. ಜಿ ಪರಮೇಶ್ವರ್ ಕಪ್ ” ಪಂದ್ಯಾವಳಿ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ ತುಮಕೂರು ವಸಂತ ನರಸಾಪುರದ ಬಳಿ ಮುಂದಿನ ವರ್ಷ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆಗೊಂಡು ರಣಜಿ ಸೇರಿದಂತೆ ಇನ್ನಿತರ ರಾಜ್ಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ ಎಂದರು.

ಕ್ರೀಡಾಪಟುವಾಗಿ ಕ್ರೀಡೆಗೆ ಮೊದಲಿನಿಂದಲೂ ಪ್ರೋತ್ಸಾಹ ಕೊಟ್ಟುಕೊಂಡು ಬಂದಿದ್ದೇನೆ, ನಾನು ಮೊದಲ ಬಾರಿಗೆ ಶಾಸಕರಾದ ಸಂದರ್ಭದಲ್ಲಿ ಜನತೆಗೆ ಭರವಸೆ ನೀಡಿದ್ದೆ ಇಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನ ನಿರ್ಮಾಣಿಸುತ್ತೇನೆ ಎಂದು , ಅದಕ್ಕೆ ಬದ್ಧರಾಗಿ, ಈ ಮೈದಾನವನ್ನ ಸುಸಜ್ಜಿತ ಕ್ರೀಡಾ ಮೈದಾನವಾಗಿ ಮಾರ್ಪಡುವಂತಹ ಎಲ್ಲಾ ತರಹದ ಕಾರ್ಯ ಕೈಗೊಳ್ಳಲಾಗಿದೆ, ಇದೇ ವರ್ಷ ಜಿಲ್ಲಾ ಪಂಚಾಯಿತಿ ಸಿಇಒ 3.5 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮೇಲ್ದರ್ಜೆಗೆರಿಸುವ ಮೂಲಕ ಹೈಟೆಕ್ ಕ್ರೀಡಾ ಮೈದಾನವಾಗಲಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಬಹಳಷ್ಟು ಜನ ಕ್ರೀಡಾಪಟುಗಳಿದ್ದಾರೆ ಫುಟ್ಬಾಲ್ ನಲ್ಲಿದ್ದಾರೆ ಕಬಡ್ಡಿಯಲ್ಲಿದ್ದಾರೆ ಕೊಕ್ಕೋದಲ್ಲಿದ್ದಾರೆ, ಕೊಕ್ಕದಲ್ಲಿ ಅನೇಕ ಸಂದರ್ಭದಲ್ಲಿ ಆಲ್ ಇಂಡಿಯಾ ಚಾಂಪಿಯನ್ ಹಾಗಿದ್ದರೆ ನಮ್ಮ ಟೀಮ್, ಕ್ರಿಕೆಟ್ ಅನ್ನು ಕೂಡ ಶಾಲಾ ಕಾಲೇಜಿನಲ್ಲಿ ಇರುವಂತಹ ಪ್ರತಿಭೆಗಳನ್ನು ಗುರುತಿಸಿ ಅಂತಹ ಪ್ರತಿಭೆಗಳನ್ನು ಹೊರ ತರುವಂತಹ ಕಾರ್ಯ ಮುಂದಿನ ದಿನಗಳಲ್ಲಿ ಸಂಬಂಧಪಟ್ಟಂತ ಇಲಾಖೆ ಹಾಗೂ ಸಂಸ್ಥೆಗಳು ಸೇರಿದಂತೆ ಕ್ರೀಡಾ ಸಂಸ್ಥೆಗಳಿಂದ ಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಕರ್ನಾಟಕವನ್ನು ಮಾದಕ ವಸ್ತುಗಳ ಮುಕ್ತ ಮಾಡಲು ಹೊರಟಿದ್ದೇವೆ, ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿ ಈ ತರಹದ ವಾತಾವರಣ ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ಹೊರಬರಬೇಕಾದರೆ ಶಾಲಾ ಕಾಲೇಜಿನ ಮಕ್ಕಳು ಹೆಚ್ಚೆಚ್ಚು ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜ ಸ್ವಸ್ಥದಿಂದ ಇರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮುಖಂಡಾದ ಅಶೋಕ ರಾಜು ವರ್ಧನ್, ಎಡಿ ಬಲರಾಮಯ್ಯ, ಮಹಾಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಪ. ಪಂ ಸದಸ್ಯ ಕೆ ಆರ್ ಓಬಳರಾಜ್ , ನಂದೀಶ್, ನಾಗರಾಜು, ಮಂಜುನಾಥ್ ಕ್ರಿಕೆಟ್ ಟೂರ್ನಮೆಂಟ್ ನ ಆಯೋಜಕರಾದ ನಂದೀಶ್, ಬೈರೇಶ್, ರಘುವೀರ್ , ಶಿವು , ದೀಪಕ್ , ರಂಜಿತ್ , ಕಿರಣ್ , ಗಗನ್ , ಕಿಶೋರ್, ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು.

– ಶ್ರೀನಿವಾಸ್‌ , ಕೊರಟಗೆರೆ

Leave a Reply

Your email address will not be published. Required fields are marked *

× How can I help you?