ಕೊರಟಗೆರೆ:ತಾಲೂಕಿನ ಕೋಳಾಲ ಹೋಬಳಿ ನಿಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿ ಗ್ರಾಮದಲ್ಲಿ ಶ್ರೀ ಅಷ್ಟಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನದ 22ನೇ ವರ್ಷದ ವಾರ್ಷಿಕೋತ್ಸವ ಹಾಗೂ ದೀಪೋತ್ಸವದ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಸಂಸ್ಥಾಪಕ ಅಧ್ಯಕ್ಷರಾದ ಆರ್.ಎಸ್. ರಾಜಣ್ಣ ಮಾತನಾಡಿ,22 ವರ್ಷಗಳ ಹಿಂದೆ ಅಷ್ಟ ಸಿದ್ದಿ ವಿನಾಯಕ ದೇವಸ್ಥಾನವನ್ನು ಹಲವಾರು ಭಕ್ತಾದಿಗಳು ಹಾಗೂ ಸ್ಥಳೀಯರ ಸಹಾಯದಿಂದ ನಿರ್ಮಿಸಲಾಯಿತು.ಇಂದು 22ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸಹಾಯದಿಂದ,ಡಾ:ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಮಹಾಸ್ವಾವಿು ರವರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.
ದಿವಂಗತ ಸಿದ್ದಲಿಂಗಪ್ಪನವರ ಧರ್ಮಪತ್ನಿ ಶ್ರೀಮತಿ ಆರ್ ಶಿವಮ್ಮನವರು ಮತ್ತು ಮಕ್ಕಳು,ಶ್ರೀ ಕ್ಷೇತ್ರ ಚಾಮುಂಡಿಗುಡ್ಡ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ರವರ ಕುಟುಂಬದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಂದ ಸಾವಿರಾರು ಭಕ್ತಾದಿಗಳಿಗೆ ಅಚ್ಚುಕಟ್ಟಾಗಿ ಸಿಹಿ ತಿಂಡಿ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
—————–ನರಸಿಂಹಯ್ಯ ಕೋಳಾಲ