ಕೊರಟಗೆರೆ-ಜೆಡಿಎಸ್-ಪಕ್ಷದ-ನೂತನ-ಅಧ್ಯಕ್ಷ-ಕಾಮರಾಜು-ಅಧಿಕಾರ-ಸ್ವೀಕಾರ

ಕೊರಟಗೆರೆ– ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಗುಂಡಿನಪಾಳ್ಯದ ಜಿ.ಎಂ.ಕಾಮರಾಜು ಸೇರಿದಂತೆ ಪಕ್ಷದ ವಿವಿಧ ಘಟಕಗಳ ನೂನತ ಪಧಾದಿಕಾರಿಗಳ ನೇಮಕದೊಂದಿಗೆ ನೂತನ ಪಧಾದಿಕಾರಿಗಳು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಅಧ್ಯಕ್ಷತೆಯಲ್ಲಿ ಅಧಿಕಾರ ಸ್ವೀಕರಿಸಿದರು.

ಪಟ್ಟಣದ ಲಕ್ಷ್ಮಿನರಸಿಂಹ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷ ಏರ್ಪಡಿಸಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ ಪಕ್ಷದ ನೂತನ ಪಧಾದಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್ ಕ್ಷೇತ್ರದಲ್ಲಿ ಖಾಲಿ ಇದ್ದ ಅಧ್ಯಕ್ಷರ ಸ್ಥಾನ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷ ಮತ್ತು ಪಧಾದಿಕಾರಿಗಳ ಸ್ಥಾನಕ್ಕೆ ನೂತನ ಪಧಾದಿಕಾರಿಳನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು ನೂತನ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತ ರೊಂದಿಗೆ ಉತ್ತಮ ಭಾಂದವ್ಯದೊಂದಿಗೆ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವಂತೆ ಸೂಚಿಸಿದರು.

ನೂತನ ಜೆಡಿಎಸ್ ಪಕ್ಷದ ಅಧ್ಯಕ್ಷ ಗುಂಡಿನಪಾಳ್ಯ ಜಿ.ಎಂ.ಕಾಮರಾಜು ಪದಗ್ರಹಣ ನಂತರ ಮಾತನಾಡಿ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಗಳ ಅದೇಶದಂತೆ ನೂತನ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದು ನನ್ನನ್ನು ನೇಮಕ ಮಾಡಿದ ಪಕ್ಷದ ಎಲ್ಲಾ ಹಿರಿಯ ಮುಖಂಡರುಗಳಿಗೆ ಅಭಿನಂದಿಸಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಕಾರ್ಯಕರ್ತರ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಮುಂದಿನ ಜಿ.ಪಂ. ಮತ್ತು ತಾ.ಪಂ, ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸುವುದಾಗಿ ತಿಳಿಸಿದ ಅವರು ಪಕ್ಷದ ವರೀಷ್ಠರ ನಂಬಿಕೆಯಂತೆ ನನ್ನ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು

ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಸಿದ್ದಗಂಗಯ್ಯ, ಪುರವಾರ ಸತೀಶ್, ಕೋಳಾಲ ದೇವರಾಜು, ಸಾಕರಾಜು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ನಿರ್ದೇಶಕರುಗಳಾದ ನಾಗರಾಜು, ನೇತ್ರಾವತಿ, ರಂಗಣ್ಣ, ಪಕ್ಷದ ಮುಖಂಡರುಗಳಾದ ವೀರಕ್ಯಾತರಾಯ, ಸಿದ್ದಮಲ್ಲಪ್ಪ, ಲಕ್ಷ್ಮಿಶ್, ಕೊಡ್ಲಹಳ್ಳಿ ವೆಂಕಟೇಶ್, ಲಕ್ಷ್ಮಣ್, ರಮೇಶ್ ಸೇರಿದಂತೆ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದು

ಪದಗ್ರಹಣಗೊಂಡ ಪಕ್ಷದ ವಿವಿಧ ಘಟಕಗಳ ನೂತನ ಪಧಾದಿಕಾರಿಗಳು

ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ,ಎಂ.ಕಾಮರಾಜು, ಕಾರ್ಯಾಧ್ಯಕ್ಷರಾಗಿ ತುಂಬಾಡಿ ಲಕ್ಷ್ಮೀಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆರೆಯಾಗಲಹಳ್ಳಿ ಕೆ.ಆರ್.ಲಕ್ಷ್ಮಣ್, ಯುವ ಅಧ್ಯಕ್ಷರಾಗಿ ದಮಗಲಯ್ಯನಪಾಳ್ಯದ ವೆಂಕಟೇಶ್, ಎಸ್.ಟಿ.ಘಟಕದ ಅಧ್ಯಕ್ಷರಾಗಿ ಪ.ಪಂ.ಸದಸ್ಯ ಕೆ.ಎನ್. ಲಕ್ಷ್ಮೀನಾರಾಯಣ್, ಕೊರಟಗೆರೆ ಪಟ್ಟಣದ ಎಸ್.ಟಿ.ಘಟಕದ ಅಧ್ಯಕ್ಷರಾಗಿ ರಮೇಶ್, ಪ.ಜಾ ಘಟಕದ ಅಧ್ಯಕ್ಷರಾಗಿ ತೊಗರಿಘಟ್ಟ ಲಕ್ಷ್ಮೀನರಸಯ್ಯ, ಹಿಂದುಳಿದ ವರ್ಗಗಳ ಆಧ್ಯಕ್ಷರಾಗಿ ರಂಗಯ್ಯ, ಕೊರಟಗೆರೆ ಪಟ್ಟಣದ ಯುವ ಘಟಕ ಅಧ್ಯಕ್ಷರಾಗಿ ರಂಗಯ್ಯ, ಪಟ್ಟಣದ ಯುವ ಘಟಕ ಅಧ್ಯಕ್ಷರಾಗಿ ಜಿ.ಎಂ.ಕೌಶಿಕ್, ಹಿಂದುಳಿದ ವರ್ಗಗಳ ಕಾರ್ಯಾಧ್ಯಕ್ಷರಾಗಿ ನಾಗರಾಜು, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಎಂ.ಸಿದ್ದಮಲ್ಲಪ್ಪ, ಪಕ್ಷದ ವಕ್ತಾರರಾಗಿ ಮಾವತ್ತೂರು ಮಂಜುನಾಥ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಹಯತ್‍ಖಾನ್, ಉಪಾಧ್ಯಕ್ಷರಾಗಿ ನಯಾಜ್, ಸಂಚಾಲಕರಾಗಿ ಎಲ್.ವಿ.ಪ್ರಕಾಶ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಆರ್.ನಾಗೇಂದ್ರ, ಜಂಟಿ ಕಾರ್ಯದರ್ಶಿಯಾಗಿ ಕೊಂಡವಾಡಿ ಶಿವರಾಂ, ಸಹಕಾರ್ಯದರ್ಶಿಯಾಗಿ ಕೊಡ್ಲಹಳ್ಳಿ ವೆಂಕಟೇಶ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಿದ್ದರಾಜು, ಕಾರ್ಮಿಕ ಘಟಕ ಅಧ್ಯಕ್ಷರಾಗಿ ಅಳಾಲಸಂದ್ರ ಪಾಂಡು, ಸಂಘಟನ ಕಾರ್ಯದರ್ಶಿಯಾಗಿ ಜ್ಯೋತಿಪ್ರಕಾಶ್, ಕಾನೂನು ಸಲಹೆಗಾರರಾಗಿ ಮಲ್ಲಿಕಾರ್ಜುನ್, ರೈತ ಘಟಕದ ಅಧ್ಯಕ್ಷರಾಗಿ ಬತ್ಸಂದ್ರ ರಾಜಣ್ಣ, ಎಸ್.ಸಿ.ಘಟಕ ಕಾರ್ಯಧ್ಯಕ್ಷರಾಗಿ ಬುಕ್ಕಪ್ಪಟ್ಟಣ ರಾಜು, ನಗರ ಎಸ್.ಟಿ.ಘಟಕದ ಅಧ್ಯಕ್ಷರಾಗಿ ಕೆ.ಪಿ.ನಾಗರಾಜು, ಐ.ಟಿ.ಘಟಕ ಅಧ್ಯಕ್ಷರಾಗಿ ನಂದಕುಮಾರ್ ರೆಡ್ಡಿ, ವಿಧಾನ ಸಭಾ ಕ್ಷೇತ್ರದ ಪಕ್ಷದ ಉಪಾಧ್ಯಕ್ಷರಾಗಿ ಕೆ.ಜಿ.ಶ್ರೀನಿವಾಸಮೂರ್ತಿ, ಅಲ್ಪಸಂಖ್ಯಾತರ ನಗರ ಯುವ ಘಟಕದ ಅಧ್ಯಕ್ಷರಾಗಿ ಫಾರೂಕ್ ಅಹಮದ್ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.

– ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?