ಕೊರಟಗೆರೆ: ಸಿಬಿಎಸ್‍ಸಿಯಲ್ಲಿ ಜೆಕೆ ಮೆಮೋರಿಯಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಕೊರಟಗೆರೆ:- 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಕೇಂದ್ರಿಯ ಪ್ರೌಢಶಿಕ್ಷಣ ಮಂಡಳಿ ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶದಲ್ಲಿ ಜೆ.ಕೆ ಮೆಮೋರಿಯಲ್ ಸೆಂಟ್ರಲ್ ಸ್ಕೂಲ್‍ಗೆ ಶೇ.100ರಷ್ಟು ಫಲಿತಾಂಶ ಬಂದಿದೆ.

ಕೇಂದ್ರಿಯ ಪ್ರೌಢಶಿಕ್ಷಣ ಮಂಡಳಿ ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಬುಧವಾರ ಪ್ರಕಟಣೆಗೊಂಡಿದೆ. ಪ್ರತಿವರ್ಷದಂತೆ ಈ ವರ್ಷ ಕೊರಟಗೆರೆ ಜೆ.ಕೆ ಮೆಮೋರಿಯಲ್ ಶಾಲೆಗೆ 100ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಕುಳಿತ 29 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

      10ನೇ ತರಗತಿಯ ಸಿಬಿಎಸ್‍ಐ ಫಲಿತಾಂಶದಲ್ಲಿ ಉತ್ತೀರ್ಣಾರಾದ 29ಮಂದಿ ವಿದ್ಯಾರ್ಥಿಗಳಲ್ಲಿ ವಿಶ್ವರಾಧ್ಯ ಆರ್.ವಿ 94.2%, ಕೌಶಿಕ್ 90.8%, ತನುಶ್ರೀ.ಜಿ 90.2% ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆಗೊಂಡು ಶಾಲೆಯ ಟಾಪರ್ ವಿದ್ಯಾರ್ಥಿಗಳ ಸಾಲಿನ ಪಟ್ಟಿಗೆ ಸೇರಿಕೊಂಡಿದ್ದಾರೆ.

ಅಂಕಿತಾ ಎಸ್.ಎಮ್ ಶೇ.83.8%, ಪಿ.ಶ್ರೇಯಾ ಶೇ.82.8%, ಕೀರ್ತನ.ಡಿ ಶೇ. 79.8%, ಮಣಿಶ್ರೀ.ಎಲ್ ಶೇ.78.8%, ಜಯಶ್ರೀ.ಆರ್ ಶೇ.78.2%, ದೃತಿ ಜೈನ್ ವಿ.ಎಂ ಶೇ.76.4%, ಎಸ್.ಕೃತೀಕ ಶೇ.76% ಫಲಿತಾಂಶದೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು,  ಪ್ರಥಮ ಶ್ರೇಣೀಯಲ್ಲಿ ದೃಷ್ಠಿ ಕೆ.ಎಮ್ ಶೇ.74.6%, ತನುಶ್ರೀ ಜಿ.ಪಿ 73.8%, ಹೃತ್ವಿಕ್.ಎಲ್ ಶೇ. 69.4%, ಪಿ.ಆರ್ ಯಧುನಂದನ್ ಶೇ.69.2%, ಗಣೇಶ್.ಎನ್ ಶೇ.68%, ಹರ್ಷಿಣಿ ಜಿ.ಯು ಶೇ.65.8%, ಪ್ರಾರ್ಥನ ಟಿ.ಕೆ ಶೇ.65.4%, ಜನೀತ್ ಬಿ.ವಿ ಶೇ.63.6%, ಜಿ.ಆರ್ ರಂಗಸ್ವಾಮಿ ಶೇ.61.4%, ಯಶ್ವಂತ್ ಕೆ.ಬಿ ಶೇ.61.4%, ಗೌತಮ್ ಜೆ.ಎಮ್ ಶೇ.61.2% ಅಂಕ ಪಡೆದಿದ್ದು, 9ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ.

      ಶಾಲೆಯ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ಜೆಕೆ ಮೆಮೋರಿಯಲ್ ವಿದ್ಯಾ ಸಂಸ್ಥೆ, ಪ್ರೌಢಶಾಲೆ ಮುಖ್ಯಶಿಕ್ಷಕ, ಬೋಧಕ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿ ಶುಭಕೋರಿದ್ದಾರೆ.

  • ಶ್ರೀನಿವಾಸ್‌ ಕೊರಟಗೆರೆ

Leave a Reply

Your email address will not be published. Required fields are marked *