ಕೊರಟಗೆರೆ:-ಆಚರಣೆಗಳು ಕೇವಲ ಆಚರಣೆಗಾಗಿ ಮಾಡದೆ ಅದರ ಸತ್ವವನ್ನು ಅರಿತು ಮಾಡಬೇಕು.ಆಗ ಆಚರಣೆಗೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ಎಲೆರಾಂಪುರ ಕಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲವಂಗಲ ಗ್ರಾಮದ ಕಾಲಭೈರವೇಶ್ವರ ದೇವಾಲಯದಲ್ಲಿ ಕಾಲಭೈರವೇಶ್ವರ ಅಷ್ಟಮಿ 69ನೇ ವರ್ಷದ ವಿಶೇಷ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಂಗಳವಾರ ಆಶೀರ್ವಚನ ನೀಡಿದರು.
ಇತ್ತೀಚಿಗೆ ವಿದ್ಯಾವಂತ ಸಮಾಜ ಧಾರ್ಮಿಕ ಆಚರಣೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು,ಮುಂಬರುವಂತಹ ಸಮಾಜಕ್ಕೆ ನಮ್ಮ ಪ್ರತಿಯೊಂದು ಹಿಂದೂ ಸಮಾಜದ ಆಚರಣೆಗಳ ಬಗ್ಗೆ ಮಕ್ಕಳಿಗೆ ಜಾಗೃತಿಯನ್ನು ಮೂಡಿಸುವುದರ ಮೂಲಕ ಸಮಾಜವನ್ನು ಜಾಗೃತಿ ಮಾಡಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಇದೇ ಸಂದರ್ಭದಲ್ಲಿ ದೇವಾಲಯ ಸಮಿತಿಯ ವತಿಯಿಂದ ಹನುಮಂತನಾಥ ಶ್ರೀಗಳನ್ನು ಅಭಿನಂದಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ವಜ್ಜನ ಕುರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಮ್ಮ, ಮಾಜಿ ಅಧ್ಯಕ್ಷ
ರಮೇಶ್,ದೇವಾಲಯ ಸಮಿತಿಯ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ,ಕಾರ್ಯದರ್ಶಿ ಸಿದ್ಧಭೈರಪ್ಪ,ಉಪಾಧ್ಯಕ್ಷ ಕೆಂಪಭೈರಯ್ಯ,ಸದಸ್ಯರಾದ ಜವರೇಗೌಡ ಸೇರಿದಂತೆ ನೂರಾರು ಗ್ರಾಮಸ್ಥರು, ಭಕ್ತಾದಿಗಳು ಹಾಜರಿದ್ದರು.
———–ಶ್ರೀನಿವಾಸ್ ಕೊರಟಗೆರೆ