ಕೊರಟಗೆರೆ:ತುಮಕೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಳಿಂಗ ನಾಯಕ್

ಕೊರಟಗೆರೆ:– ಡಾ. ಕಾಳಿಂಗನಾಯಕ್ ಅವರು ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಪ್ರಸ್ತುತವಾಗಿ ಇವರು ಮಹಾರಾಷ್ಟ್ರದ  ಮುಂಬೈಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ರಸಾಯನ ಶಾಸ್ತ್ರ ವಿಭಾಗದಲ್ಲಿ ” ಡಿಸ್ಕವರಿ ಆಫ್ ಆಂಟಿಮಲೇರಿಯಲ್ಸ್ ಬೇಸ್ಡ್ ಆನ್ ನ್ಯುಕ್ಲಿಯೋಸೈಡ್ ಕಾಂಜುಗೇಟ್ಸ್ ” ಎಂಬ ವಿಷಯದಲ್ಲಿ ಪೋಸ್ಟ್ – ಡಕ್ಟೋರಲ್ ಸಂಶೋಧನಾ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಿ ಎಚ್ ಡಿ ಪೂರ್ಣಗೊಂಡು ಡಾಕ್ಟರೇಟ್ ಪದವಿ ಪಡೆದು ಕಾಳಿಂಗ ನಾಯಕ್ ಈಗ ಡಾ. ಕಾಳಿಂಗ ನಾಯಕ್ ಎಂದು ನಮೂದಿಸುವ ಮೂಲಕ ಶಕುನಿ ತಿಮ್ಮನಹಳ್ಳಿ ಗ್ರಾಮಕ್ಕೆ ಗೌರವಕ್ಕೆ ಬಾಜಿನರಾಗಿ ಇಡೀ ಗ್ರಾಮ ಡಾ. ಕಾಳಿಂಗ ನಾಯಕ್ ಅವರನ್ನು ಹಾಡಿ ಹೊಗಳಿದ್ದಾರೆ ಜೊತೆಗೆ ಈತನ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಶ್ರೀನಿವಾಸ್‌



Leave a Reply

Your email address will not be published. Required fields are marked *

× How can I help you?