ಕೊರಟಗೆರೆ:-ಸೂಕ್ತ ವಿದ್ಯಾರ್ಹತೆ ಇಲ್ಲದ ಶಿಕ್ಷಕರ ನೇಮಿಸಿಕೊಂಡಿರುವ ಖಾಸಗಿ ಶಾಲೆಗಳು-ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ-ಪ್ರತಿಭಟಿಸಿದ ಕರವೇ

ಕೊರಟಗೆರೆ:-ಖಾಸಗಿ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ಸೂಕ್ತ ವಿದ್ಯಾರ್ಹತೆ ಇಲ್ಲದ ಶಿಕ್ಷಕ,ಶಿಕ್ಷಕಿಯರನ್ನ ನೇಮಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟನ್ನು ಹಾಕಲಾಗುತ್ತಿದೆ.ಜೊತೆಗೆ ವಿದ್ಯಾವಂತ ಶಿಕ್ಷಕರಿಗೆ ನಿಗದಿತ ವೇತನ ನೀಡದೆ ಅನ್ಯಾಯ ಎಸಗಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್.ನಟರಾಜ್ ಆರೋಪಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಖಾಸಗಿ ಶಾಲೆಗಳ ತಾರತಮ್ಯವನ್ನ ವಿರೋಧಿಸಿ ಪ್ರತಿಭಟನೆ ನಡೆಸಿ,ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನ ನೀಡುತ್ತಿಲ್ಲ.ನೀಡಿದರು ಅದನ್ನು ಅವರ ಖಾತೆಗಳಿಗೆ ಹಾಕುತ್ತಿಲ್ಲ.ಶಿಕ್ಷಕರಿಗೆ ಒಂದು ವೇತನ ನೀಡಿ ಸರ್ಕಾರಕ್ಕೆ ಒಂದು ವೇತನದ ದಾಖಲೆಗಳನ್ನ ತೊರಿಸುತ್ತಿರುವುದು ಬೆಳಕಿಗೆ ಬಂದಿದ್ದರೂ ಶಿಕ್ಷಣ ಇಲಾಖೆಯವರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕಗಳನ್ನ ಹೆಚ್ಚಳ ಮಾಡಿ ಷೋಷಕರಿಗೆ ಹೊರೆ ಮಾಡುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕಿದೆ.ಒಂದು ತಿಂಗಳ ಅವಧಿಯಲ್ಲಿ ಎಲ್ಲಾ ಖಾಸಗಿ ಶಾಲೆಗಳು ಎಚ್ಚೆತ್ತುಕೊಂಡು ಆಗಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೆ ಹೋದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ವೆಂಕಟೇಶ್ ಮಾತನಾಡಿ, ಎಷ್ಟೋ ಖಾಸಗಿ ಶಾಲೆಗಳಲ್ಲಿ ಆಟದ ಮೈದಾನ ಇಲ್ಲದೆ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗುತ್ತಿದ್ದಾರೆ.ಸ್ಥಳೀಯ ನಿರುದ್ಯೋಗಿ ಪದವೀಧರರಿಗೆ ಖಾಸಗಿ ಶಾಲೆಗಳಲ್ಲಿ ಉದ್ಯೋಗ ನೀಡದೆ ತಾರತಮ್ಯ ಎಸಗಲಾಗುತ್ತಿದೆ.ಖಾಸಗಿ ಶಾಲೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸರಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಕರವೇ ಕಾರ್ಯಕರ್ತ ಎಂ.ಎಸ್. ಸೈಫುಲ್ಲಾ ಮಾತನಾಡಿ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗಿ ಏನಾದರೂ ಕೇಳಿದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಖಾಸಗಿ ಶಾಲೆಗಳ ಬಗ್ಗೆ ಮಾಹಿತಿ ಕೇಳಿದರೆ ಯಾವುದೆ ದಾಖಲೆಗಳನ್ನ ನೀಡುತ್ತಿಲ್ಲ. ಖಾಸಗಿ ಶಾಲೆಗಳ ಮಾಹಿತಿಯನ್ನ ಶಿಕ್ಷಣ ಇಲಾಖೆಯಲ್ಲಿ ಇಲ್ಲವೇ.ಅಥವಾ ಇದ್ದರೂ ನೀಡುತ್ತಿಲ್ಲವೇ?ಇದರ ಹಿಂದಿನ ಮರ್ಮವೇನು ಎಂಬುದು ತಿಳಿಯಬೇಕಿದೆ.ಶಿಕ್ಷಣ ತಿಳಿಯಬೇಕಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಯ ಪರವಾಗಿ ನಿಂತಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ .ಶಾಲೆಗಳ ಆಟಾಟೋಪಕ್ಕೆ ಕಡಿವಾಣ ಹಾಕುವ ಕೆಲಸಗಳಾಗಬೇಕು.ಒಂದು ವೇಳೆ ತಾಲೂಕು ಆಡಳಿತ ನಮ್ಮ ಮನವಿಗೆ ಸ್ಪಂದಿಸದೆ ಹೋದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಗಳು.

ತಾಲೂಕಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ (ಸಿ.ಬಿ.ಎಸ್.ಸಿ) ಪ್ರವೇಶ ಶುಲ್ಕ ಪ್ರದರ್ಶಿಸಬೇಕು.ವಿದ್ಯಾರ್ಹತೆ ಇಲ್ಲದ ಶಿಕ್ಷಕ,ಶಿಕ್ಷಕಿಯರನ್ನ ನೇಮಿಸಿಕೊಂಡಿದ್ದು ಅವರನ್ನು ಕೆಲಸದಿಂದ ವಜಾ ಗೊಳಿಸಿ ಸ್ಥಳೀಯ ಪ್ರತಿಭಾವಂತರನ್ನು ನೇಮಕಮಾಡಿಕೊಳ್ಳಬೇಕು.ಶಿಕ್ಷಕ, ಶಿಕ್ಷಕಿಯರಿಗೆ ಮತ್ತು ಸಿಬ್ಬಂದಿಗೆ ನಿಗಧಿತ ಕನಿಷ್ಠ ವೇತನವನ್ನ ನೀಡಬೇಕು.ವೇತನವನ್ನು ಬ್ಯಾಂಕ್ ಮುಖೇನ ಪಾವತಿ ಮಾಡಬೇಕು.ಖಾಸಗಿ ಶಾಲೆಗಳಲ್ಲಿ ಪ್ರತಿವರ್ಷದ ಆಯ-ವ್ಯಯ ಮಂಡಿಸಿರುವ ದಾಖಲೆಗಳನ್ನ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಕೊರಿದಾಗ ನೀಡಬೇಕು.ಶಾಲಾ ಮಕ್ಕಳಿಗೆ ಆಟದ ಮೈದಾನ ಕಲ್ಪಿಸುವುದು.ಶಾಲಾ ವಾಹನಗಳಲ್ಲಿ ಸೂಕ್ತ ಭದ್ರತೆಗೆ ಸಿ.ಸಿ ಕ್ಯಾಮರ ಅಳವಡಿಸುವುದು.

———–—-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?