ಕೊರಟಗೆರೆ :– ಪಟ್ಟಣದ ಆರಾಧ್ಯದ್ಯವ ಉದ್ಬವಮೂರ್ತಿ ಕಟ್ಟೆಗಣಪತಿ ದೇವಾಲಯದ ಅಭಿವೃದ್ದಿಗೆ ವಡ್ಡಗೆರೆಯ ಸೌಭಾಗ್ಯಮ್ಮ ಮತ್ತು ಕುಟುಂಭದವರಿಂದ 1 ಲಕ್ಷ ರೂ ಗಳ ದೇಣಿಗೆ ನೀಡಲಾಯಿತು.
ಕೊರಟಗೆರೆ ಪಟ್ಟಣದ ಸಾರ್ವಜನಿಕರ ಆರಾದ್ಯದೈವ ಉದ್ಬವಮೂರ್ತಿ ಶ್ರೀ ಕಟ್ಟೆಗಣಪತಿ ದೇವಾಲಯದ ಅಭಿವೃದ್ದಿಗೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ವಿ.ಎನ್. ವಸಂತರಾಜು ರವರ ಸೋದರಿ ಸೌಭಾಗ್ಯಮ್ಮ ಮತ್ತು ಪೂರ್ಣಿಮಾ ರವರು ಶ್ರೀ ಕಟ್ಟೆಗಣಪತಿ ದೇವಾಲಯದ ಹಾಗೂ ಸಮುದಾಯ ಭವನ ಅಭಿವೃದ್ದಿ ಟ್ರಸ್ಟ್ನ ಮಾಜಿ ಕಾರ್ಯದರ್ಶಿ ಎನ್.ಪದ್ಮನಾಭ್ ಮತ್ತು ಖಜಾಂಚಿ ಪುನೀತ್ ರವರಿಗೆ 1 ಲಕ್ಷ ರೂಗಳ ದೇಣಿಗೆ ನೀಡಿದರು, ದೇವಾಲಯದ ಅಭಿವೃದ್ದಿಗೆ ದೇಣಿಗೆ ನೀಡಿದ ಸೌಭಾಗ್ಯಮ್ಮ ಮತ್ತು ಪೂರ್ಣಿಮಾ ರವರಿಗೆ ಟ್ರಸ್ಟ್ ನ ಅಧ್ಯಕ್ಷ ಎ.ಡಿ.ಬಲರಾಮಯ್ಯ ಸೇರಿದಂತೆ ಎಲ್ಲಾ ಪಧಾಧಿಕಾರಿಗಳು ಅಭಿನಂದಿಸಿದ್ದಾರೆ.
ಈ ಸಂರ್ದಭದಲ್ಲಿ ಸಮುದಾಯ ಭವನದ ಮ್ಯಾನೇಜರ್ ಅನಂತರಾಮು, ಗೋಪಾಲ್, ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.