ಕೊರಟಗೆರೆ/ಕೋಳಾಲ-ಕೋಡಿ ಬಿದ್ದಿರುವ ಇರಕಸಂದ್ರ ದೊಡ್ಡಕೆರೆ-ರೈತರ ಮೊಗದಲ್ಲಿ ಮಂದಹಾಸ-ಹರಿದು ಬರುತ್ತಿರುವ ಜನಸಾಗರ

ಕೊರಟಗೆರೆ:-ತಾಲೂಕಿನ ಕೋಳಾಲ ಹೋಬಳಿಯ ತಾಲೂಕಿನ ಎರಡನೇ ದೊಡ್ಡ ಕೆರೆ ಎಂದು ಬಿಂಬಿತವಾಗಿರುವ ಇರಕಸಂದ್ರ ಕೆರೆ ಹಾಲಿ ಸುರಿದ ಬಾರಿ ಮಳೆಗೆ ಮೈದುಂಬಿಕೊಂಡು ಕೋಡಿ ಬಿದ್ದಿದೆ.

ಸರ್. ಎಂ. ವಿಶ್ವೇಶ್ವರಯ್ಯನವರು 1957ರಲ್ಲಿ ಈ ಕೆರೆಗೆ ಮೈಲುಗಲ್ಲು ಹಾಕಿದ್ದು, ಹಲವಾರು ಇಂಜಿನಿಯರ್ ಗಳು ಹಾಗೂ ಈ ಭಾಗದ ರೈತರ ಪರಿಶ್ರಮದಿಂದ ಇದನ್ನು ನಿರ್ಮಾಣ ಮಾಡಲಾಗಿದೆ.ಇದೀಗ ಕೆರೆಗೆ 75 ವರ್ಷಗಳು ತುಂಬಿದ್ದು,ಈ ಬಾರಿಯದ್ದು ಸೇರಿದಂತೆ ಒಟ್ಟು ಮೂರು ಬಾರಿ ಈ ಕೆರೆ ಕೋಡಿ ಬಿದ್ದಂತಾಗಿದೆ.

ಇರಕಸಂದ್ರ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಈ ಬಾರಿ ಒಳ್ಳೆಯ ಬೆಳೆಯನ್ನು ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿರುವುದನ್ನು ನೋಡಲು ಅಕ್ಕಪಕ್ಕದ ಹಳ್ಳಿಗಳಿಂದ ಜನಸಾಗರವೇ ಹರಿದು ಬರುತ್ತಿದೆ.

————————–-ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?