ಕೊರಟಗೆರೆ :- ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಟ್ಟಾಳು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕ್ಷೇತ್ರದಲ್ಲಿ ಮನೆ ಮನೆಗೆ ಧಾವಿಸಿ ಗ್ಯಾರಂಟಿ ಕಾರ್ಡ್ಗಳನ್ನು ಹಂಚಿಕೆ ಮಾಡಿದ, ಡಾ.ಜಿ ಪರಮೇಶ್ವರ್ ಹಾಗೂ ಎಸ್ ಪಿ ಮುದ್ದಹನುಮೇಗೌಡ್ಡರ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೆ ಇಡೀ ಕ್ಷೇತ್ರ ಸುತ್ತಿ ಶ್ರಮಿಸಿದ ನಿಷ್ಠಾವಂತ ಕಾಂಗ್ರೆಸ್ ಮುಖಂಡ ನಿವೃತ್ತ ಮುಖ್ಯ ಶಿಕ್ಷಕ ಮಾಜಿ ಪಿಎಲ್‌ಡಿ ಬ್ಯಾಂಕ್ ನ ನಿರ್ದೇಶಕರಾದ ಕೋಡಿತಿಮ್ಮನಹಳ್ಳಿ ಪುಟ್ಟರಾಜು ಅವರಿಗೆ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರು ಕಾಂಗ್ರೆಸ್ ನ ಹಿರಿಯ ಮುಖಂಡ ಪುಟ್ಟರಾಜು ಅವರಿಗೆ ಪಕ್ಷ ಗುರುತಿಸಿ ನಿಗಮ ಮಂಡಳಿಗೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ಗಳ ವಿತರಣಾ ಸಂದರ್ಭದಲ್ಲಿ ತೋವಿನಕೆರೆ ಭಾಗದ ಪ್ರತಿ ಹಳ್ಳಿಗಳಿಗೂ ಮುಖಂಡರೊಂದಿಗೆ ದಾವಿಸಿ ಕಾಂಗ್ರೆಸ್ ಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಲ್ಲದೆ ಗ್ಯಾರಂಟಿ ಕಾರ್ಡ್ಗಳನ್ನ ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸದಲ್ಲಿ ಪ್ರಮುಖ ಪಾತ್ರವಹಿಸಿ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅವಿರತವಾಗಿ ದುಡಿದು ಇಡೀ ಕ್ಷೇತ್ರ ವ್ಯಾಪ್ತಿ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಶ್ರಮವಹಿಸಿದಂತ ಕಾಂಗ್ರೆಸ್ ಮುಖಂಡ ಪುಟ್ಟರಾಜು ಅವರನ್ನ ಗುರುತಿಸಿ ನಿಗಮ ಮಂಡಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರೈಹಿಸಿದ್ದಾರೆ.

ಸ್ಥಳೀಯ ಚುನಾವಣೆಗಳು ಸಮಿಪಿಸುತ್ತೇವೆ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳು ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಸೂಚನೆಗಳು ಕಂಡುಬರುತ್ತಿದ್ದು, ಸ್ಥಳೀಯವಾಗಿ ಮತ್ತಷ್ಟು ಸದೃಢಗೊಳ್ಳಬೇಕಾದರೆ ಪುಟ್ಟರಾಜು ನಂತಹ ನಿಷ್ಠಾವಂತ ಮುಖಂಡರ ಅವಶ್ಯಕತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಅನಿವಾರ್ಯವಾಗಿದ್ದು, ಪುಟ್ಟರಾಜು ಅವರಿಗೆ ದಯಮಾಡಿ ಅತಿತ್ವರಿತವಾಗಿ ನಿಗಮ ಮಂಡಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೊರಟಗೆರೆ ಕ್ಷೇತ್ರದ ಮುಖಂಡರುಗಳು ಪತ್ರಿಕೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ.
ಪುರವಾರ ನರಸಿಂಹರಾಜು ಮಾತನಾಡಿ ಪುರವಾರ, ಹೊಳವನಹಳ್ಳಿ, ತೋವಿನಕೆರೆ , ಕಸಬಾ ಸೇರಿದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲೂ ಹಗಲು ರಾತ್ರಿ ಎನ್ನದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್ ಅವರ ಪರ ಹಾಗೂ ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ ಮುದ್ದಹನುಮೇಗೌಡರ ಪರ ಬಹಳಷ್ಟು ಶ್ರಮವಹಿಸಿದ್ದು , ಕಾರ್ಯಕರ್ತರ ಹಿತದೃಷ್ಟಿಯಿಂದ ತನು ಮನ ಧನ ಅರ್ಪಿಸಿ ಪಕ್ಷ ಸಂಘಟನೆಗೆ ಬಹಳಷ್ಟು ಶ್ರಮ ಪಟ್ಟಿರುವ ಪುಟ್ಟರಾಜು ಅವರನ್ನ ಗುರುತಿಸಿ ನಿಗಮ ಮಂಡಳಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಡಾ.ಜಿ ಪರಮೇಶ್ವರ್ ಅವರನ್ನ ಕೋರಿದ್ದಾರೆ.

ನಿಟ್ರಹಳ್ಳಿ ಗಂಗಣ್ಣ ಮಾತನಾಡಿ ಪುಟ್ಟರಾಜು ಅವರು ತೋವಿನಕೆರೆ ಭಾಗಕ್ಕೆ ಮಾತ್ರ ಸೀಮಿತವಾಗದೆ ಇಡೀ ಕ್ಷೇತ್ರವನ್ನ ಕಾಂಗ್ರೆಸ್ ಪರ ಪ್ರಚಾರ ಮಾಡಿ ಮುಖಂಡರುಗಳ ಹಾಗೂ ಕಾರ್ಯಕರ್ತರ ಜೊತೆ ಒಗ್ಗೂಡಿಸಿಕೊಂಡು ಮನೆ ಮನೆ ಸುತ್ತಿ ಗ್ಯಾರಂಟಿ ಕಾರ್ಡ್ ಹಚ್ಚುವ ಸಂದರ್ಭದಲ್ಲಿ ಬಹಳಷ್ಟು ಶ್ರಮವಹಿಸಿರುವುದಲ್ಲದೆ ಆದಿ ದ್ರಾವಿಡ ಸಮುದಾಯವನ್ನು ಒಗ್ಗೂಡಿಸಿಕೊಂಡು ವಿಧಾನಸಭಾ ಚುನಾವಣೆಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತ್ಯತೀತವಾಗಿ ಎಲ್ಲಾ ಸಮುದಾಯ ಮುಖಂಡರು ಕಾರ್ಯಕರ್ತರೊಡನೆ ಚುನಾವಣಾ ಸಂದರ್ಭದಲ್ಲಿ ಶ್ರಮವಹಿಸಿರುವಂತಹ ಪುಟ್ಟರಾಜು ಅವರಿಗೆ ನಿಗಮ ಮಂಡಳಿಗೆ ಅವಕಾಶ ಕಲ್ಪಿಸ್ಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ .
– ಶ್ರೀನಿವಾಸ್ ಕೊರಟಗೆರೆ