ಕೊರಟಗೆರೆ:ಕುಂಚಟಿಗ ಸಮುದಾಯಕ್ಕೆ ಓ.ಬಿ.ಸಿ ಮೀಸಲಾತಿಯನ್ನು ನೀಡುವಂತೆ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಒತ್ತಾಯಿಸಿದರು.
ವಿಶ್ವ ಕುಂಚಿಟಿಗ ಪರಿಷತ್ ವತಿಯಿಂದ ಭಾನುವಾರ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿರುವ ಸಮುದಾಯ ಭವನದಲ್ಲಿ ನಡೆದ ಕುಂಚಿಟಿಗರ ರತ್ನ,ಕುಂಚಶ್ರೀ,ಆದರ್ಶ ದಂಪತಿ ಪ್ರಶಸ್ತಿ ಪ್ರಧಾನ,ಕುಂಚಿಟಿಗರ ಸಮ್ಮಿಲನ,ಓ.ಬಿ.ಸಿ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಸಮುದಾಯವು ಆರ್ಥಿಕವಾಗಿ,ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಈಗಾಗಲೇ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಶ್ರೀಗಳು ಬೇಸರ ವ್ಯಕ್ತಪಡಿಸಿ,ನಮ್ಮ ಆಳುವ ಜನಪ್ರತಿನಿಧಿಗಳು ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಎಲ್ಲ ಸಮುದಾಯಗಳ ರೀತಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಿಗಬೇಕಾದ ಸೌಲಭ್ಯವನ್ನು ಕಲ್ಪಿಸಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಆಗ್ರಹಿಸಿದರು.
ಕುಂಚಿಟಿಗ ಮಹಾಮಂಡಲದ ಮಾಜಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ಮುರುಳೀಧರ ಹಾಲಪ್ಪ ಮಾತನಾಡಿ,ಸಮುದಾಯ ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದರೂ ಸಹ ಓಬಿಸಿ ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ ಹಲವು ಉನ್ನತ ಹುದ್ದೆ ಮತ್ತು ರಾಜಕೀಯರಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಇದಕ್ಕಾಗಿ ನಾವು ಪಕ್ಷಾತೀತವಾಗಿ ಹೋರಾಟ ಮಾಡುವ ಅನಿವಾರ್ಯತೆ ಇದ್ದು ಕುಂಚುಟಿಗರೆಲ್ಲರೂ ಒಂದುಗೂಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕುಂಚಿಟಿಗರ ರತ್ನ, ಕುಂಚಶ್ರೀ,ಆದರ್ಶ ದಂಪತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಿಶ್ವ ಕುಂಚಿಟಿಗ ಪರಿಷತ್ತಿನ ಅಧ್ಯಕ್ಷ ಅಂಜನಪ್ಪ,ನಿವೃತ್ತ ಡಿ ವೈ ಎಸ್ ಪಿ ರಾಮಾಂಜಿನಪ್ಪ, ಮಡಕ ಸಿರಾ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಅನಂತರ ರಾಜು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಆರ್ ಶಿವರಾಮಯ್ಯ,ಮುಖಂಡರಾದ ಹನುಮಂತಯ್ಯ,ಹುಚ್ಚಯ್ಯ,ಬಿ.ಟಿ ರಾಮಚಂದ್ರ,ಭವ್ಯ ನರಸಿಂಹಮೂರ್ತಿ,ಪೂಜಾರ್ ದೊಡ್ಡ ರಾಜಪ್ಪ,ತುಂಗೋಟಿ ರಾಮಣ್ಣ, ಕಸವನಹಳ್ಳಿ ರಮೇಶ್,ರಾಮಣ್ಣ,ಕೊಂಡವಾಡಿ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.
————————ನರಸಿಂಹಯ್ಯ ಕೊಳಾಲ