ಕೊರಟಗೆರೆ-ಬಿಜೆಪಿ ಯೂಥ್ ಸೋಶಿಯಲ್ ಸರ್ವಿಸ್ ವತಿಯಿಂದ ತುಮಕೂರು ನಗರದ 26ನೇ ವಾರ್ಡಿನ ಬಿಜೆಪಿ ಯುವ ಮುಖಂಡ ವಿನಯ್ ಕುಮಾರ್ ಹಾಗೂ ತಂಡ ಸೇರಿ ಕೊರಟಗೆರೆ ತಾಲ್ಲೂಕಿನ ಎಲೆರಾಂಪುರದಲ್ಲಿರುವ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದ 50 ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
ಮಠದ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ.ಹನುಮಂತನಾಥ ಮಹಾಸ್ವಾಮೀಜಿ ಉಚಿತ ಶಾಲಾ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಿ ಮಾತನಾಡಿ,ಸ್ವಯಂ ಪ್ರೇರಿತ ಸಾಮಾಜಿಕ ಸೇವೆಗಳನ್ನು ನೀಡುತ್ತಿರುವ ಬಿಜೆಪಿ ಯೂಥ್ ಸೋಶಿಯಲ್ ಸರ್ವಿಸ್ ನ ವಿನಯ್ ಕುಮಾರ್ ಅವರನ್ನು ಶ್ಲಾಘಿಸಿದರು.
ಇವರ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮಾದರಿಯಾಗಿದ್ದು,ಇನ್ನು ಹೆಚ್ಚಿನ ಸಾಮಾಜಿಕ ಕೆಲಸಗಳನ್ನು ಮಾಡಲು ಪ್ರೇರೆಪಿಸಿದರು.ಯುವ ಪೀಳಿಗೆಯೇ ದೇಶದ ಬದಲಾವಣೆಯ ಬಹುಮುಖ್ಯ ಮುನ್ನುಡಿಕಾರರು ಹಾಗು ಇನ್ನಷ್ಟು ಸಮಾಜ ಸೇವೆಗೆ ಅವಕಾಶ ದೊರೆಯಲಿ ಎಂದು ಹಿತವಚನಗಳನ್ನು ನೀಡುತ್ತಾ ಭವಿಷ್ಯತ್ ಸಾಮಾಜಿಕ ಸೇವೆಗಳಿಗೆ ಆಶೀರ್ವದಿಸಿ ನಿಮ್ಮಂತಹ ಯುವಜನರು ಸಮಾಜಕ್ಕೆ ಅವಶ್ಯಕ ಎಂದು ಅಭಿನಂದಿಸಿದರು.
ನoತರ ಕುಂಚಿಟಿಗ ಮಹಾಸ್ವಾಮಿಗಳಿಗೆ ಗೌರವದಿಂದ ಸನ್ಮಾನಿಸಿ ಆಶೀರ್ವಾದ ಪಡೆಯಲಾಯಿತು ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಧನ್ಯ ಕುಮಾರ್, ಸಿವಿಲ್ ಇಂಜಿನಿಯರ್ ತ್ರಿಭುವನ್,ಮಂಜುನಾಥ್, ಮಠದ ಸಿಬ್ಬಂದಿ ವರ್ಗ ಮತ್ತಿತರು ಭಾಗಿಯಾಗಿದ್ದರು.