
ಕೊರಟಗೆರೆ:-ಸುಮಾರು ಮೂವತ್ತು ವರ್ಷಗಳ ಹಿಂದೆ ಕೊಡಗು ಹಾಗೂ ಗುಂಡ್ಲುಪೇಟೆ,ಮಡಿಕೇರಿ ಸುತ್ತ ಮುತ್ತ ವಾಸಿಸುವ ಬುಡಕಟ್ಟು ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲಾಗಿದ್ದು,ಇದನ್ನು ರಾಜ್ಯಾದ್ಯಂತ ಇರುವ ಬುಡಕಟ್ಟು ಕುರುಬ ಸಮುದಾಯಕ್ಕೂ ವಿಸ್ತರಿಸುವಂತೆ ಸರಕಾರವನ್ನು ಆಗ್ರಹಿಸುವ ಸಲುವಾಗಿ,ಇದೆ ತಿಂಗಳ 13 ನೇ ತಾರೀಕಿನಿಂದ ಎರಡು ದಿನಗಳ ಕಾಲ ಬೆಂಗಳೂರಿನ ಕನಕ ಚಾರಿಟೇಬಲ್ ಟ್ರಸ್ಟ್ ಸೊಣ್ಣೇನಹಳ್ಳಿಯಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ತಾಲೂಕು ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ಕಾರ್ಯದರ್ಶಿ ನಂಜುಂಡಯ್ಯ .ಜಿ ತಿಳಿಸಿದರು.
ಈ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು,ಈ ಕಾರ್ಯಗಾರದಲ್ಲಿ ಮೂಲ ನಿವಾಸಿಗಳಾದ ಬುಡಕಟ್ಟು ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಸಿಗದೆ ಇರುವುದಕ್ಕೆ ಕಾರಣ,ದೊರೆತರೆ ಅದರಿಂದ ಆಗುವ ಎಲ್ಲಾ ಪ್ರಯೋಜನ,ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು.

ಅಖಂಡ ಕರ್ನಾಟಕದ ಮೂಲ ನಿವಾಸಿಗಳಾದ ಬುಡಕಟ್ಟು ಕುರುಬ ಸಮುದಾಯದ ಯುವಕರು,ಯುವತಿಯರು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನ ಕುರುಬ ಪರ ಸಂಘಟನೆಯ ಎಲ್ಲಾ ಮುಖಂಡರುಗಳು ,ಯುವಕ, ಯುವತಿಯರು ಈ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಜಿ.ಡಿ ನಾಗಭೂಷಣ್ ಸಮಾಜದ ಮುಖಂಡರಾದ, ರಂಗಧಾಮಯ್ಯ, ಉಮಾ ಶಂಕರ್ , ಲಕ್ಷ್ಮೀಪ್ರಸಾದ್, ಶಿವಣ್ಣ, ರವಿಕುಮಾರ್, ಹನುಮಂತರಾಜು ಕೆ ವಿ, ಶ್ರೀನಿವಾಸ್ ಸೇರಿದಂತೆ ಇತರರು ಹಾಜರಿದ್ದರು.
————––ಶ್ರೀನಿವಾಸ್ ಕೊರಟಗೆರೆ