ಕೊರಟಗೆರೆ:-ಎಲೆರಾಂಪುರ,ಗೋಕುಲದಲ್ಲಿರುವ ಶ್ರೀ ಪಂಚಲಿಂಗೇಶ್ವರ ಸ್ವಾಮಿ,ವಿನಾಯಕ ಸ್ವಾಮಿ,ಜುಂಜಪ್ಪಸ್ವಾವಿು ದೇವಾಲಯದಲ್ಲಿ 14 ನೇ ವರ್ಷದ ಕಾರ್ತಿಕ ಲಕ್ಷದೀಪೋತ್ಸವ ಕಾರ್ಯಕ್ರಮ

ಕೊರಟಗೆರೆ:-ಎಲೆರಾಂಪುರ ಗ್ರಾಮದ ಗೋಕುಲದಲ್ಲಿರುವ ಶ್ರೀ ಪಂಚಲಿಂಗೇಶ್ವರ ಸ್ವಾಮಿ,ವಿನಾಯಕ ಸ್ವಾಮಿ, ಜುಂಜಪ್ಪಸ್ವಾವಿು ದೇವಾಲಯದಲ್ಲಿ 14 ನೇ ವರ್ಷದ ಕಾರ್ತಿಕ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಆಚರಿಸಲಾಯಿತು.

ದೀಪ ಹಚ್ಚುವ ಮೂಲಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಹನುಮಂತನಾಥ ಸ್ವಾಮೀಜಿ, ಸ್ವತಂತ್ರ ಬಂದು 75 ವರ್ಷ ಕಳೆದರೂ ಇನ್ನೂ ಹಳ್ಳಿಗಳಲ್ಲಿ ನಮ್ಮ ಧರ್ಮ ಪರಂಪರೆ,ಸಂಸ್ಕೃತಿಯನ್ನು ಜೀವಂತವಾಗಿ ಇಡುವಲ್ಲಿ ದೇವಾಲಯಗಳು ಮಹತ್ವದ ಪಾತ್ರವನ್ನು ವಹಿಸಿಕೊಂಡು ಬರುತ್ತಿವೆ.

ಎಲೆರಾಂಪುರ ಗೋಕುಲದ ಪಾತಲಿಂಗಯ್ಯನವರು ಎಲ್ಲಾ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಪ್ರಶಂಶನೀಯ ಎಂದರು.

ಈ ಗೋಕುಲದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಪಾತಲಿಂಗೇಶ್ವರ ಸ್ವಾಮಿಯ ದೀಪೋತ್ಸವವನ್ನು ಬಹಳ ಅಚ್ಚುಕಟ್ಟಾಗಿ ಆಚರಣೆ ಮಾಡಲಾಗಿದೆ.ದೀಪೋತ್ಸವಕ್ಕೆ ಸಹಕಾರ ಮಾಡಿದ ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವದಿಸಿದರು.

ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಮಾಲಿಂಗಪ್ಪ,ಮಾ,ತಾ,ಪಂ,ಸದಸ್ಯ ಹನುಮಂತರಾಜು. ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ್,ಸದಸ್ಯ ಬಿ.ಪಿ. ಉಮೇಶ್. ಆರ್ ಆರ್ ರಾಜಣ್ಣ‌. ಮಲ್ಲೇಶ್, ರವಿಕುಮಾರ್‌,ಎಲೆರಾಂಪುರ,ಗೋಕುಲದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.

—————––ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?