ಕೊರಟಗೆರೆ:– ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಯುವ ಮಡಿವಾಳ ಸಮುದಾಯವನ್ನ ಒಗ್ಗೂಡಿಸುವ ಸಲುವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಮಡಿವಾಳ ಯುವ ವೇದಿಕೆಯನ್ನ ಸ್ಥಾಪನೆ ಮಾಡಲು ಪೂರ್ವಬಾವಿ ಸಭೆಯನ್ನ ಏರ್ಪಡಿಲಾಗಿತ್ತು.
ತಾಲೂಕಿನಲ್ಲಿ ಮಡಿವಾಳ ಸಮುದಾಯದ ಯುವಕರು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮಡಿವಾಳ ಯುವ ವೇದಿಕೆ ಸ್ಥಾಪನೆ ಮಾಡಲು ತಾಲೂಕಿನ ನಾಲ್ಕು ಹೋಬಳಿಯ ಯುವ ಮುಖಂಡರು ಸಭೆ ನಡೆಸಿ ಮೇ.೧೩ ರಂದು ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗುವುದು.
ತಾಲೂಕಿನ ಮಡಿವಾಳ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನ ನೀಡಬಹುದಾಗಿದೆ.
ಸಭೆಯಲ್ಲಿ ಮಡಿವಾಳ ಸಮುದಾಯದ ಮುಖಂಡರಾದ ಕಾಂತರಾಜು, ಪಾಂಡುವರ್ಧನ್, ಆಶ್ವಥ್ ಮಹೇಶ್, ಶರತ್, ತ್ಯಾಗರಾಜು, ಶಿವಕುಮಾರ್, ಕುಶಾಲ್, ಸೇರಿದಂತೆ ಇತರರು ಇದ್ದರು.
-ಶ್ರೀನಿವಾಸ್ ಕೊರಟಗೆರೆ