ಕೊರಟಗೆರೆ:-ಮನುಷ್ಯನು ಜೀವನದಲ್ಲಿ ವ್ಯಸನಗಳಿಂದಲೇ ಶಾಂತಿ,ನೆಮ್ಮದಿ, ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಅದರಲ್ಲಿ ಮಧ್ಯಪಾನ ಪ್ರಮುಖವಾಗಿದೆ ಎಂದು ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಡಾ. ಶ್ರೀ ಹುನಮಂತನಾಥಸ್ವಾಮಿ ತಿಳಿಸಿದರು.
ಅವರು ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹಾಗೂ ಇತರ ಅಂಗಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 1898 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಎಷ್ಟೋ ಕುಟುಂಬಗಳು ಮಧ್ಯ ಸೇವನೆಯಿಂದ ಹಾಳಾಗುತ್ತಿವೆ.ಅದರಲ್ಲಿ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳೇ ಹೆಚ್ಚಾಗಿದೆ.ಈ ಮಧ್ಯಪಾನದಿಂದ ಕುಟುಂಬದಲ್ಲಿ ದಿನವು ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂದಾಗಿದೆ. ಮಧ್ಯಪಾನದಿಂದ ಬಡ ಕುಟುಂಬಗಳು ಆರ್ಥಿಕ ನಷ್ಠವನ್ನು ಅನುಭವಿಸಿ ಅದು ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಮಧ್ಯ ಸೇವನೆಮಾಡಿ ವಾಹನಗಳಲ್ಲಿ ಸಂಚಾರ ಮಾಡುವಾಗ ಅಪ ಘಾತಗಳು ಉಂಟಾಗಿ ಪ್ರಾಣ ಕಳೆದುಕೊಂಡು ಕುಟುಂಬಗಳು ಬೀದಿಗೆ ಬಂದಿವೆ.
ಇಂತಹ ಮಧ್ಯಪಾನ ವ್ಯಸನವನ್ನು ಬಿಡಿಸಲು ಮದ್ಯವ್ಯರ್ಜನ ಶಿಭಿರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿದ್ದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳ ಬಾಳಲ್ಲಿ ನೆಮ್ಮದಿಯನ್ನು ತಂದಿದೆ.ಮಧ್ಯ ವದರ್ಜನ ಶಿಬಿರಗಳನ್ನು ಇತರ ಖಾಸಗಿ ಸಂಸ್ಥೆಗಳು ಹಣ ಪಡೆದು ನಡೆಸುತ್ತಿದ್ದು ಆ ಶಿಭಿರಗಳಲ್ಲಿ ಮಧ್ಯಪಾನೀಯರಿಗೆ ಹಿಂಸೆ ನೀಡಿ ಹಲವು ರಾಸಾಯಿನ ಮಿಶ್ರಿತ ಪದಾರ್ಥಗಳನ್ನು ಕುಡಿಸಿ ಕುಡಿತ ಬಿಡಿಸುವ ಕೆಲಸ ಮಾಡುತ್ತಾರೆ. ಅದರೆ ಧರ್ಮಸ್ಥಳ ಕ್ಷೇತ್ರದ ಮಧ್ಯವದರ್ಜನ ಶಿಭಿರದಲ್ಲಿ ಯೋಗ, ಧ್ಯಾನ, ಮಾನಸಿಕ ಬಲವರ್ದತೆ, ಭಜನೆ, ದೇವರಕೀರ್ತನೆ, ನಿಜ ಬದುಕಿನ ಸ್ಥಿತಿಗಳ ಅರಿವು ಮೂಡಿಸುವ ಮೂಲಕ ಮಧ್ಯ ಪಾನಿಯರನ್ನು ಮಧ್ಯದಿಂದ ಮುಕ್ತಗೊಳಿಸುವ ಕೆಲಸ ಮಾಡುತ್ತಿರುವುದು ಪವಿತ್ರವಾದ ಕಾರ್ಯವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಲೋಚನೆ ಮತ್ತು ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಇಲ್ಲಿಯವೆರೆಗೂ 1898 ಮಧ್ಯವರ್ಜನ ಶಿಬಿರಗಳನ್ನು ನಡೆಸಿ ಸಾವಿರಾರು ಕುಟುಂಬಗಳಿಗೆ ನೆಮ್ಮದಿಯ ಬದುಕನ್ನು ನೀಡಲಾಗಿದೆ.ಇಂದು ಪೂಜ್ಯ ಹನುಮಂತನಾಥಸ್ವಾಮೀಜಿ ರವರ ಮಾರ್ಗದರ್ಶನದಲ್ಲಿ 8 ದಿನಗಳ ಕಾಲ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಸ್ವಯಂ ಸೇವಕರು ಯೋಗ ಶಿಕ್ಷಣದವರು ಶ್ರಮವಹಿಸಿ ಈ ಮಧ್ಯ ವರ್ಜನ ಶಿಬಿರವನ್ನು ಯಶಸ್ವಿ ಗೊಳಿಸಿ ಈ ಶಿಬಿರದಲ್ಲಿ 63 ಮಂದಿಗೆ ಮಧ್ಯ ವ್ಯಸನವನ್ನು ಬಿಡಿಸಿ ಕುಟುಂಬಗಳಿಗೆ ನೆಮ್ಮದಿ ನೀಡುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಬರದ ಅಧ್ಯಕ್ಷ ಉಮೇಶ್‍ಚಂದ್ರ, ಮಾಜಿ ಜಿ.ಪಂ. ಸದಸ್ಯ ಶಿವರಾಮಯ್ಯ, ಪ.ಪಂ.ಸದಸ್ಯ ಪ್ರದೀಪ್ ಕುಮಾರ್, ಎಲ್.ರಾಜಣ್ಣ, ಆರ್.ಎಸ್.ರಾಜಣ್ಣ, ರಾಮಸ್ವಾಮಿ, ಜಗದೀಶ್, ಮಮತಾ, ದಿನೇಶ್, ಅನಿತಾ, ದೇವಿಪ್ರಸಾದ್, ತಿಮ್ಮನಾಯ್ಕ, ಶೃತಿ, ಉಮೇಶ್,. ವಿರೋಪಾಕ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
————-—–ಪ್ರದೀಪ್ ಮಧುಗಿರಿ