ಕೊರಟಗೆರೆ-ಪ್ರತಿ ಮಳೆಗೂ ಮುಳುಗುವ ಕೊರಟಗೆರೆ-ಗುಂಡಿನಪಾಳ್ಯ-ಕ್ಯಾಮೇನಹಳ್ಳಿ ,ಕೊರಟಗೆರೆ-ವಡ್ಡಗೆರೆ-ಮಲ್ಲಪ್ಪನಹಳ್ಳಿ ಸೇತುವೆಗಳು-ಶಾಶ್ವತ ಪರಿಹಾರಕ್ಕೆ ಆಗ್ರಹ

ಕೊರಟಗೆರೆ:-ಸುರಿಯುತ್ತಿರುವ ಸತತ ಮಳೆಗೆ ತಾಲೂಕಿನ ಹಲವು ಸೇತುವೆಗಳು ಮುಳುಗಡೆಯಾಗಿ ಹಲವಾರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ಪ್ರಮುಖವಾಗಿ ಗಿ ಕೊರಟಗೆರೆ-ಗುಂಡಿನಪಾಳ್ಯ ಕ್ಯಾಮೇನಹಳ್ಳಿ ಸೇತುವೆ,ಕೊರಟಗೆರೆ- ವಡ್ಡಗೆರೆ ಮಧ್ಯ ಭಾಗದಲ್ಲಿ ಬರುವ ಮಲ್ಲಪ್ಪನಹಳ್ಳಿ ಸೇತುವೆಗಳು ಮುಳುಗಡೆಯಾಗಿದ್ದು ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗೆ ಐದಾರು ಕಿಲೋಮೀಟರು ಸುತ್ತಿ ಬಳಸಿ ಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಬಾರಿ ಮಳೆ ಬಂದಾಗಲೂ ಈ ಎರಡು ಸೇತುವೆಗಳು ಮುಳುಗಡೆಯಾಗುತ್ತಿದ್ದು ಸಂಬಂಧ ಪಟ್ಟ ಇಲಾಖೆ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

—————ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?