ಕೊರಟಗೆರೆ:-ಮುತ್ತುರಾಜು ಚಿನ್ನಹಳ್ಳಿರವರಿಗೆ ಒಲಿದ ಪ್ರತಿಷ್ಠಿತ ‘ಕಾವ್ಯಶ್ರೀ’ಪ್ರಶಸ್ತಿ-ಕೊರಟಗೆರೆ ತಾಲೂಕಿಗೆ ಕೀರ್ತಿ ದೊರೆತಂತಾಗಿದೆ ಎಂದ ಗಣ್ಯರು

ಕೊರಟಗೆರೆ:-ಡಾ.ಜೀಶೆಂಪ ಸಾಹಿತ್ಯ ವೇದಿಕೆ ಮಂಡ್ಯ,ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವ ಸೇನೆ ಮಂಡ್ಯ- ಕನ್ನಂಬಾಡಿ,ಕಾವೇರಿ ಪ್ರಭ ದಿನಪತ್ರಿಕೆ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ 50 ರ ಸಂಭ್ರಮದ ಅಂಗವಾಗಿ ನಡೆದ ‘ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಮುತ್ತುರಾಜು ಚಿನ್ನಹಳ್ಳಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಗಿದೆ.

ಪ್ರಶಸ್ತಿ ಪೃರಸ್ಕೃತ ಮುತ್ತುರಾಜು ಚಿನ್ನಹಳ್ಳಿರವರು,ಬೆಂಗಳೂರಿನ ಮಲ್ಲೇಶ್ವರಂನ ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಪೇದೆಯಾಗಿ ಕತ೯ವ್ಯ ನಿವ೯ಹಿಸುತಿದ್ದು,ವೃತ್ತಿಯ ಜೊತೆಗೆ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡು ಹಲವಾರು ಕವನಗಳನ್ನು ಬರೆಯುವುದರ ಜೊತೆಗೆ ಕವಿಗೋಷ್ಠಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಉದಯೋನ್ಮುಖ ಕವಿಯಾಗಿ ಗುರುತಿಸಿಕೊಂಡಿದ್ದಾರೆ.

ಮುತ್ತುರಾಜು ಚಿನ್ನಹಳ್ಳಿ ರವರಿಗೆ ಸಾಹಿತ್ಯ ರತ್ನ, ಸಾಹಿತ್ಯ ಸೌರಭ, ಕರ್ನಾಟಕ ಮುಕಟಮಣಿ, ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ಥಿಗಳು ದೊರೆತಿವೆ.

ಸದ್ಯ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಮಂಡ್ಯದ ವಿವಿಧ ಸಂಘಟನೆಗಳು ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಕೊರಟಗೆರೆ ತಾಲೂಕಿಗೆ ಕೀರ್ತಿ ದೊರೆತಂತಾಗಿದೆ.

ಪತ್ರಕರ್ತರುಗಳಾದ ಶ್ರೀಶರ್ಮ,ನರಸಿಂಹಯ್ಯ ಕೋಳಾಲ,ಪ್ರದೀಪ್ ಮಧುಗಿರಿ,ಕೊರಟಗೆರೆ ಶ್ರೀನಿವಾಸ್ ರವರು ಶುಭ ಹಾರೈಸಿದ್ದು ಮುತ್ತುರಾಜು ಚಿನ್ನಹಳ್ಳಿ ಅವರಿಂದ ಇನ್ನು ಹೆಚ್ಚಿನ ಸಾಹಿತ್ಯ ಕೃಷಿ ನಡೆದು ನೂರಾರು ಪ್ರಶಸ್ತಿಗಳು ಅರಸಿ ಬರುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

—————–-ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?