ಕೊರಟಗೆರೆ-ಕಾಲೇಜು ವಿದ್ಯಾರ್ಥಿಗಳು ಎರಡು ಗೋಡೆಯ ಮದ್ಯೆ ಕಲಿಯುವ ಪಾಠ ಮತ್ತು ವಿದ್ಯೆ ಗಿಂತಲೂ ಹಳ್ಳಿಗಳಲ್ಲಿ ಹಮ್ಮಿಕೊಳ್ಳುವ ಎನ್ ಎಸ್ ಎಸ್ ಶಿಭಿರಗಳಲ್ಲಿ ಪಡೆದುಕೊಳ್ಳುವ ಜ್ಞಾನ ಅವರ ಭವಿಷ್ಯದ ದ್ರಷ್ಟಿಯಿಂದ ಅತೀ ಮುಖ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಂಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಎನ್.ಎಸ್.ಎಸ್ ಕ್ಯಾಂಪ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
2024-25ನೇ ಸಾಲಿನ ಈ ಶಿಬಿರವನ್ನು ಶ್ರೀ ಕ್ಷೇತ್ರ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠ ದಲ್ಲಿ ಶ್ರೀ ಬಸವ ಮಹಾಲಿಂಗ ಮಹಾಸ್ವಾಮೀಜಿಯವರು ಉದ್ಘಾಟಿಸಿದರು.
ಸಂದರ್ಭದಲ್ಲಿ ವಿಶೇಷ ಅಧಿಕಾರಿ ನಾಗಣ್ಣ,ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಕೆ. ಪ್ರಭಾಕರ್ ರೆಡ್ಡಿ,ಎಚ್. ಆಂಜನೇಯ,ಪ್ರಾಂಶುಪಾಲರು,ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ಹನುಮಂತ, ಶ್ರೀರಂಗಪ್ಪ,ಜಯರಾಮ್, ಶಿಕ್ಷಕರು,ಶಿಬಿರ ಅಧಿಕಾರಿಗಳಾದ ನಾಗೇಂದ್ರ. ದುಶ್ಯಂತ್ ಟಿ.ಎನ್,ಸಹ ಶಿಬಿರ ಅಧಿಕಾರಿ ಹಾಗು ಕಾಲೇಜಿನ ಪ್ರಾಚಾರ್ಯರು ಹಾಜರಿದ್ದರು
————–ನರಸಿಂಹಯ್ಯ ಕೋಳಾಲ