ಕೊರಟಗೆರೆ:– ಕರ್ನಾಟಕ ರಾಜ್ಯದ ಗೃಹ ಇಲಾಖೆಯು 2024ರ ಸಾಲಿನ ಮುಖ್ಯಮಂತ್ರಿ ಪದಕ ಪಡೆಯುವವರ ಪಟ್ಟಿಯಲ್ಲಿ, ಒಟ್ಟು 197 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ. ಈ ಮುಖ್ಯಮಂತ್ರಿ ಪದಕವನ್ನು ಅವರ ಕರ್ತವ್ಯ ನಿಷ್ಠೆ ಮತ್ತು ಸೇವೆಯನ್ನು ಗುರುತಿಸುವ ಸಲುವಾಗಿ ಪ್ರದಾನ ಮಾಡಲಾಗುತ್ತದೆ.
ಕೊರಟಗೆರೆ ಪೊಲೀಸ್ ಠಾಣಾ ಸಿಬ್ಬಂದಿಯಾದ ಮೋಹನ್ ಎಂ.ಎಲ್. ರವರ ಕರ್ತವ್ಯ ನಿಷ್ಠೆಗೆ ಈ ಬಾರಿಯ ಮುಖ್ಯಮಂತ್ರಿ ಪದಕ ದೊರೆತಿರುತ್ತದೆ.

ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಬೆನ್ನಟ್ಟಿ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ದಕ್ಷ ಪೊಲೀಸ್ ಸಿಬ್ಬಂದಿ ಎಂದೇ ಗುರುತಿಸಿಕೊಂಡಿರುವ ಮೋಹನ್ ಎಂ.ಎಲ್ ರವರಿಗೆ ಮುಖ್ಯಮಂತ್ರಿ ಪದಕ ದೊರೆತಿದ್ದಕ್ಕೆ ಕೊರಟಗೆರೆ ಠಾಣಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಹಾಗೂ ತಾಲೂಕಿನ ಜನತೆ ಸಂತಸ ವ್ಯಕ್ತಪಡಿಸಿರುತ್ತಾರೆ.

ವರದಿ -ಶ್ರೀನಿವಾಸ್ ಕೊರಟಗೆರೆ