ಕೊರಟಗೆರೆ-ಪಿಎಸ್‌ಐ ತೀರ್ಥೆಶ್ ರಿಂದ ಯುದ್ಧದ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ

ಕೊರಟಗೆರೆ:- ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಅನೇಕ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಅಪರೇಷನ್ ಸಿಂಧೂರ ಮೂಲಕ ದೇಶದ ಸೈನಿಕರು ಈಗಾಗಲೇ ಅನೇಕ ಸಂಖೈಯಲ್ಲಿ ಭಯೋತ್ಪಾದಕರನ್ನು ನೆಲಸಮ ಮಾಡಿ ಪ್ರತೀಕಾರವನ್ನು ತೀರಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಸುಳ್ಳು ಸಂದೇಶಗಳು ಹೆಚ್ಚಾಗಿ ರವಾನೆಯಾಗುತ್ತಿದೆ ಸಾರ್ವಜನಿಕರು ಎಚ್ಚರವಹಿಸುವಂತೆ ಪಿಎಸ್‌ಐ ತೀರ್ಥೆಶ್ ತಿಳಿಸಿದರು.

ಪಟ್ಟಣದ ಎಸ್‌ಎಸ್‌ಆರ್ ವೃತ್ತದಲ್ಲಿ ಕೊರಟಗೆರೆ ಪೋಲಿಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಭಾರತೀಯ ಸೈನಿಕರು ನಮ್ಮ ದೇಶದ ಪ್ರಜೆಗಳಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ರೂಪಿಸಿಕೊಂಡಿದೆ. ಭಯೋತ್ಪಾದಕರ ಕಣ್ಣು ಐಪಿಎಲ್ ಟೂರ್ನಿಯ ಮೇಲೆ ಬಿದ್ದಿತ್ತು ಆದ್ಧರಿಂದ ಬಿಸಿಸಿಐ ನೇರ ಪ್ರಸಾರವನ್ನು ರದ್ದುಗೊಳಿಸಿದೆ. ಭಾರತೀಯ ಸೇನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್‌ನಿಂದ ಸುಳ್ಳು ವಿಚಾರಗಳು ಹರಿಯುತ್ತಿದೆ. ಸಾರ್ವಜನಿಕರು ಸುಳ್ಳು ವಿಷಯಗಳನ್ನು ಶೇರ್ ಮಾಡಿದ್ದು ಕಂಡುಬಂದರೆ ಅಂತವರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಲಾಗುವುದು. ಆದ್ದರಿಂದ ಭಯಬೇಡ ಎಚ್ಚರಿಕೆ ಇರಲಿ ಎಂದು ಅರಿವು ಮೂಡಿಸಿದರು.

ನಂತರ ಮಾತನಾಡಿ, ಸಾರ್ವಜನಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಬಿಸಿಲಿನ ತಾಪ ಎಚ್ಚಾಗಿರುವ ಕಾರಣ ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಚಲಾಯಿಸಬೇಕಿದೆ. ಪೆಟ್ರೋಲ್ ಮತ್ತು ಡಿಸೇಲ್ ಲಿಕೇಜ್‌ನಿಂದ ವಾಹನಗಳು ಹೊತ್ತಿ ಉರಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಚಲಾವಣೆ ಮಾಡಿದ್ದಲ್ಲಿ ಪ್ರಾಣಕ್ಕೆ ಅಪಾಯ ಎದುರಾಗಲಿದೆ. ಇಂತಹ ಸಂದರ್ಭಗಳಲ್ಲಿ ವಾಹನದಿಂದ ದೂರ ಉಳಿದು ಸುರಕ್ಷಿತ ಜಾಗಕ್ಕೆ ಬಂದು ನಿಂತು ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್, ಪಿಎಸ್‌ಐ ಬಸವರಾಜು, ಎಎಸ್‌ಐ ನಾಗರಾಜು, ಪ್ರದೀಪ್‌ಕುಮಾರ್, ಪ್ರಸಾದ್, ಚೆನ್ನಮಲ್ಲಿಕಾರ್ಜುನ್, ರಾಜಣ್ಣ, ದೊಡ್ಡಲಿಂಗಯ್ಯ, ರವಿ ಎಲ್.ಎನ್, ಮೋಹನ್, ರವಿ, ರಂಗನಾಥ್, ದಯಾನಂದ್, ಮಲ್ಲೇಶ್ ಸೇರಿದಂತೆ ಇತರರು ಇದ್ದರು.

  • ಶ್ರೀನಿವಾಸ್‌ ಕೊರಟಗೆರೆ

Leave a Reply

Your email address will not be published. Required fields are marked *