ಕೊರಟಗೆರೆ- ಪಿಡಬ್ಲ್ಯುಡಿ ಇಲಾಖೆ 8 ಕೋಟಿ ರೂ ಅನುದಾನ ದುರ್ಬಳಕೆ ಆರೋಪ – ಗುತ್ತಿಗೆದಾರ – ಅಧಿಕಾರಿ ಒಳ ಒಪ್ಪಂದದ ಆರೋಪ

ಕೊರಟಗೆರೆ – ಲೋಕೋಪಯೋಗಿ ಇಲಾಖೆಯಲ್ಲಿ ಕಾನೂನುಬಾಹಿರುವಾಗಿ ತುಂಡುಗುತ್ತಿಗೆ ಆಧಾರದಲ್ಲಿ ಗುತ್ತಿಗೆ ನೀಡಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಒಳ ಒಪ್ಪಂದದಲ್ಲಿ ಕಮಿಷನ್ ಹಾಗೂ ಹಣದ ದಾಹಕ್ಕೆ  8 ಕೋಟಿ ರೂ ಅನುದಾನ ದುರ್ಬಳಕೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

           ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ 2022 – 23 ಹಾಗೂ 23 -24ನೇ ಸಾಲಿನ ಲೆಕ್ಕ ಶೀರ್ಷಿಕೆ 30 :54 ರಾಜ್ಯ ಹೆದ್ದಾರಿ ಮುಖ್ಯ ರಸ್ತೆಗಳ ನಿರ್ವಹಣೆ, 20:59 ಲೆಕ್ಕ ಶೀರ್ಷಿಕೆ ಇಲಾಖೆ ಕಟ್ಟಡಗಳ ದುರಸ್ತಿ 22:16 ಲೋಕೋಪಯೋಗಿ ವಸತಿ ಮತ್ತು ನ್ಯಾಯಾಂಗ ವಸತಿ ದುರಸ್ತಿ ನಿರ್ವಹಣೆ ಲೋಕೋಪಯೋಗಿ ಇಲಾಖೆ ವಿಭಾಗ ಮಧುಗಿರಿ ಯಿಂದ ಬಿಡುಗಡೆಯಾದ 787.10 ಲಕ್ಷ (7 ಏಳು ಕೋಟಿ 87 ಲಕ್ಷದ 10 ಸಾವಿರ) ಹಣ ತುಂಡು ಗುತ್ತಿಗೆ ನೆಪದಲ್ಲಿ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

        ದೇಶದಲ್ಲಿ  ಲೋಕೋಪಯೋಗಿ ಇಲಾಖೆ  ಪ್ರತಿ ರಾಜ್ಯದಲ್ಲೂ ಆಯಾ ರಾಜ್ಯದ ಸರ್ಕಾರಿ ಸಂಸ್ಥೆಯಾಗಿದ್ದು, ದೇಶದ ಪ್ರತಿ ರಾಜ್ಯದಲ್ಲಿಯೂ ಲೋಕೋಪಯೋಗಿ ಇಲಾಖೆಗಳು ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ರಾಷ್ಟ್ರೀಯ ಹೆದ್ದಾರಿಗಳು ರಾಜ್ಯ ಹೆದ್ದಾರಿಗಳು ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳು ಸೇರಿದಂತೆ ರಸ್ತೆ ಕಾಮಗಾರಿಗಳ ನಿರ್ವಹಣೆಯ ಜವಾಬ್ದಾರಿ ಹೂತ್ತು ಕಾರ್ಯನಿರ್ವಹಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ಅನುದಾನಗಳ ಮೂಲಕ ದೇಶ ಸೇರಿದಂತೆ ರಾಜ್ಯ ಅಭಿವೃದ್ಧಿಗೆ ಕೈಜೋಡಿಸುವಂಥ ದೊಡ್ಡ ಸಂಸ್ಥೆಯೊಂದಿಗೆ ಕೋಟ್ಯಾಂತರ ಹಣ ಬಳಕೆಯಾಗುತ್ತಿದ್ದು ಇದರಲ್ಲಿ ನಿರ್ವಹಿಸುವ ಅಧಿಕಾರಿಗಳ ಹಣ ದಾಹಕ್ಕೆ ಗುತ್ತಿಗೆದಾರರ ಆಮಿಷಕ್ಕೆ  ಬಹುತೇಕ ರಾಜ್ಯಗಳಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಯಾಮರಿಸಿ ದುರ್ಬಳಕೆ ಆಗುತ್ತಿದ್ದು ಅದೇ ಮಾದರಿಯಲ್ಲಿ ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿಯೂ 8 ಕೋಟಿ ಅನುದಾನ ದುರ್ಬಳಿಕೆಯಾಗಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿದೆ.

              ಲೋಕೋಪಯೋಗಿ ಇಲಾಖೆಯಲ್ಲಿ  ನಿಯಮಾನುಸಾರ ಕೇವಲ 10 ಸಾವಿರ ಅನುದಾನ ಸಹ ಆನ್ಲೈನ್ ಟೆಂಡರ್ ಇಲ್ಲದೆ ತುಂಡುಗುತ್ತಿಗೆ ನೀಡುವಂತಿಲ್ಲ ಎಂದು ಸರ್ಕಾರಿ ಆದೇಶ ಹೊರಡಿಸಿದ್ದರೂ ಸಹ ತುಮಕೂರು ಜಿಲ್ಲೆ ಮಧುಗಿರಿ ಲೋಕೋಪಯೋಗಿ ಇಲಾಖೆಯ ಈ ಹಿಂದಿನ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಹಾಗೂ ಕೊರಟಗೆರೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ಈ ಇಬ್ಬರು ಅಧಿಕಾರಿಗಳು 787.10 ಲಕ್ಷ ಅಂದರೆ ಬರೋಬರಿ 7ಕೋಟಿ 87 ಲಕ್ಷ 10ಸಾವಿರ ಮೊತ್ತ ಕ್ಕೆ ತುಂಡುಗುತ್ತಿಗೆ ಆಧಾರದ ಮೇಲೆ ಕಾಮಗಾರಿ ಪಟ್ಟಿಯನ್ನು ಅನುಮೋದನೆ ನೀಡಿದ್ದು, ಈ ಕಾಮಗಾರಿಗಳಲ್ಲಿ ಹಗಲುದರೊಡೆಯಾಗಿದೆ ಒಂದೊಂದು ಕಾಮಗಾರಿ ಎರಡೆರಡು ಬಾರಿ ಬಿಲ್ ಆಗಿದೆ ಆನ್ಲೈನ್ ನಲ್ಲೂ ವರ್ಕ್ ಆಗಿದೆ ಅದೇ ಕಾಮಗಾರಿಯನ್ನ ತುಂಡುಗುತ್ತಿಗೆಯಲ್ಲಿ ಬಳಸಿಕೊಂಡು ಸರ್ಕಾರಕ್ಕೆ ದೊಡ್ಡ ಮಟ್ಟದ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.

            ಲೋಕೋಪಯೋಗಿ ಇಲಾಖೆಯಲ್ಲಿ ಮಧುಗಿರಿ ವಿಭಾಗ ಕೊರಟಗೆರೆ ತಾಲೂಕಿನಲ್ಲಿ ನಡೆದಿರೂಬಹುದಾದಂತಹ ಕಾಮಗಾರಿಗಳ ಅಕ್ರಮ ಹಾಗೂ ಎಲ್ ಓ ಸಿ ಹಗರಣ ಅಂದರೆ ಸರ್ಕಾರ ಹಣ ಬಿಡುಗಡೆಗೊಳಿಸುವ ವಿವಿಧ ಹಂತದ ಕಾಮಗಾರಿಗಳಿಗೆ ನಿಯಮಾನುಸಾರ ಕಾಮಗಾರಿ ಮುಗಿದ ನಂತರ ಹಣ ಬಿಡುಗಡೆಗೊಳಿಸುವ ಅಧಿಕಾರಿಗಳು ನಿಯಮಬಾಹಿರವಾಗಿ (ಸೀನಿಯಾರಿಟಿ ಪಾಲಿಸದೆ)  ಮುಂಚಿತವಾಗಿ ಕಾಮಗಾರಿ ಮುಗಿಸಿದವರಿಗೆ ಹಣ ಬಿಡುಗಡೆ ಮಾಡದೇ ಯಾರು ಹೆಚ್ಚು ಹಣ ಕಮಿಷನ್ ನೀಡುತ್ತಾರೆ ಅವರಿಗೆ ನಿಯಮ ಭಾಗಿರವಾಗಿ ಮನಸೋ ಹಿಚ್ಛೆ ಎನ್ ಓ ಸಿ ನಿಯಮ ಬಾಲಿಸದೆ ಹಣ ಬಿಡುಗಡೆಗೊಳಿಸಿದ್ದಾರೆ ಅದರಲ್ಲೂ 80 ಲಕ್ಷ ಕಾಮಗಾರಿಯನ್ನ ಹೊಳವನಹಳ್ಳಿ ಭಾಗದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುವ ಅನಿಲ್ ಎಂಬುವರ ಬಾಮೈದ ಧ್ರುವ ಕುಮಾರ್ ಅವರಿಗೆ ಕಾಮಗಾರಿ ನಿರ್ವಹಣೆ ನೀಡಿ ಕಳಪೆ ಕಾಮಗಾರಿಗೆ ಇವರೇ ಸಾತ್ ನೀಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹರೀಶ್ ಬಿ ಸಿ ಆರೂಪಿಸಿರುವದಲ್ಲದೆ ತನಿಖೆಗೆ ಸಂಬಂಧಪಟ್ಟಂತಹ ಇಲಾಖೆಗಳಿಗೆ ದೂರು ಸಲ್ಲಿಸಿ ಇವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. 

             ಕೊರಟಗೆರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ  ಇಂಜಿನಿಯರ್ ಕೆ ಎಸ್ ಸ್ವಾಮಿ 9/10/2023 ರಂದು ವರದಿ ಮಾಡಿಕೊಂಡಿದ್ದು ಇಲ್ಲಿಯವರೆಗೂ ವಾರಕ್ಕೆ ಎರಡು ಮೂರು ಬಾರಿ ಮಾತ್ರ ಹಾಜರಾಗಿ ಒಂದು ತಿಂಗಳಲ್ಲಿ 12 ರಿಂದ 13 ದಿನ ಮಾತ್ರ ಹಾಜರಾಗಿ ಹಾಜರಾತಿ ಪುಸ್ತಕದಲ್ಲಿ ತಿಂಗಳ ಕೊನೆಗೆ ಸಹಿ ಬಿಟ್ಟಿಕೊಂಡು ಒಂದು ತಿಂಗಳ ಕೊನೆಯ ದಿನದಲ್ಲಿ ಎಲ್ಲಾ ದಿನದ ಸಹಿಯನ್ನು ಮಾಡುತ್ತಾರೆ ಎಂದು ಸಾಕ್ಷಿ ಸಹಿತ ಈ ಹಿಂದಿನ ದಿನಚರಿ ಪುಸ್ತಕ ಹಾಗೂ ಪ್ರಸಕ್ತ ದಿನಚರಿ ಪುಸ್ತಕ ಎರಡನ್ನು ಸಾಕ್ಷಿ ಸಮೇತ ನೀಡಲಾಗಿ ಇವರ ವಿರುದ್ಧ ಸಾರ್ವಜನಿಕ ದೂರುಗಳ ಅರ್ಜಿಗಳಿದ್ದು ಇದರ ಬಗ್ಗೆ ಸದರಿ ಸ್ವಾಮಿಯವರ ಲಾಗ್ ಪುಸ್ತಕ, ದಿನಚರಿ, ಕಚೇರಿ ಚಲನವಲನ ಪುಸ್ತಕ, ಹಾಜರಾತಿ ಪುಸ್ತಕ ಕಚೇರಿಯ ಸಿಸಿ ಕ್ಯಾಮೆರಾ ಪ್ರತಿ ದಿನದ ಚಿತ್ರಣವನ್ನು ಪರಿಶೀಲಿಸಿ ಸದರಿಯವರ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಮೇಲ್ಮನವಿ ಸಲ್ಲಿಸಿ ಇವರ ವಿರುದ್ಧ ಎಸಿಬಿ ಲೋಕಾಯುಕ್ತಕ್ಕೂ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

            ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ 2022 -23 ಮತ್ತು 2023-24ನೇ ಸಾಲಿನ ಲೆಕ್ಕಶೀರ್ಷಿಕೆ 3054 ರಾಜ್ಯ ಹೆದ್ದಾರಿ ಮುಖ್ಯ ರಸ್ತೆಗಳ ನಿರ್ವಹಣೆ ಮತ್ತು ಸೇತುವೆಗಳ ನಿರ್ವಹಣೆ 20 :59 ಲೆಕ್ಕ ಶೀರ್ಷಿಕೆಯ ಇಲಾಖೆ ಕಟ್ಟಡಗಳ ದುರಸ್ತಿ ಮತ್ತು 22 : 16 ಲೋಕೋಪಯೋಗಿ ವಸತಿ ಮತ್ತು ನ್ಯಾಯಾಂಗ ವಸತಿ ದುರಸ್ತಿ ನಿರ್ವಹಣೆ ಬಿಡುಗಡೆಯಾಗಿರುವ ಅನುದಾನದ ಕಾರ್ಯಕ್ರಮ ಪಟ್ಟಿಯಲ್ಲಿ ಶ್ರೀಯುತ ಸುರೇಶ್ ಕಾರ್ಯ ಪಾಲಕ ಇಂಜಿನಿಯರ್ ಮಧುಗಿರಿ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದು ಇವರ ವಿರುದ್ಧ ಸಾಮಾಜಿಕ ಹೋರಾಟಗಾರ ,ಆರ್‌ಟಿಐ ಕಾರ್ಯಕರ್ತ, ಕರ್ನಾಟಕ ದಲಿತ ಸರ್ವೋದಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಹರೀಶ ಬಿಸಿ ಹಾಗೂ ಸಾಮಾಜಿಕ ಹೋರಾಟಗಾರ ಸಿನಿಮಾರಂಗದ ನಿರ್ಮಾಪಕ ನಿರ್ದೇಶಕ ಜಟ್ಟಿ ಅಗ್ರಹಾರ ನಾಗರಾಜು  ಎಂಬವರು ಗೌರವಾನ್ವಿತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಲೋಕೋಪಯೋಗಿ ಇಲಾಖೆ ಇವರಿಗೆ, ಕರ್ನಾಟಕ ಸರ್ಕಾರದ ಮಾನ್ಯ ಮಹಾ ಲೆಕ್ಕ ಪಾಲಕರು ವಿಧಾನಸೌಧ ಇವರಿಗೆ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ , ಜಿಲ್ಲಾಧಿಕಾರಿಗಳು ತುಮಕೂರು, ಲೋಕೋಪಯೋಗಿ ಇಲಾಖೆ ತುಮಕೂರು ಸೇರಿದಂತೆ ಇನ್ನಿತರ ತನಿಕಾ ಅಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. 

*ಜಂಗಲ್ ಕ್ಲೀನಿಂಗ್ ಹಾಗೂ ರಸ್ತೆ ಪ್ಯಾಚ್ ಹಗಲು ದರೋಡೆ* 

ಕೊರಟಗೆರೆ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ವಹಿಸಿರುವ ಜಂಗಲ್ ಕ್ಲೀನಿಂಗ್ ಹಾಗೂ ರೋಡ್ ಪ್ಯಾಚ್ ಈವರೆಗೂ ಯಾವುದೇ ಕಾಮಗಾರಿಗಳು ಗುಣಮಟ್ಟದಲ್ಲಿ ನಿರ್ವಹಣೆ ಮಾಡಿರುವುದಿಲ್ಲ, ಕಾಟಾಚಾರಕ್ಕೆ ಜಂಗಲ್ ಕ್ಲೀನಿಂಗ್ ಅದು ಒಂದೇ ವಾರಕ್ಕೆ ಇಲ್ಲವೇ 15 ದಿನಗಳೊಳಗೆ ಮತ್ತೆ ಜಂಗಲ್ ಮಾಮೂಲಿಯಾಗಿ ಬೆಳೆಯುವ ರೀತಿಯಲ್ಲಿ ರಸ್ತೆಯ ಎರಡು ಬದಿಯ ಜಂಗಲ್ ಕ್ಲೀನಿಂಗ್ ನಡೆಯುತ್ತದೆ, ರೋಡ್ ಪ್ಯಾಚಿಂಗ್ ಕಥೆ ಹೇಳುವಂತೆಯೇ ಇಲ್ಲ ಬಹಳ ಕಳಪೆ ಮಟ್ಟದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನ ಹಾಗೆ ಬಿಟ್ಟು ಮಣ್ಣು ಸೇರಿದಂತೆ ಇನ್ನಿತರ ಕಲ್ಲು ಜಲ್ಲಿಗಳಿಂದ ಮುಚ್ಚಿ ರಸ್ತೆಯನ್ನ ಡಾಂಬರೀಕರಣ ಗೊಳಿಸಿದ್ದೇರೆ ಎಂದು.

ಕೋಟ್ಯಾಂತರ ರೂಪಾಯಿ ಹಣವನ್ನ ಸರ್ಕಾರಕ್ಕೆ ಸತತವಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಜೊತೆಗೆ ಕೆಲವು ಗುತ್ತಿಗೆದಾರರ ಹೆಸರು ಹೇಳಿಕೊಂಡು ಸ್ವತಃ ಕೆಲವು ಇಂಜಿನಿಯರ್ ಗಳೇ ಕಾಮಗಾರಿ ನಿರ್ವಹಿಸಿ ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಹಣದ ದಾಹಕ್ಕೆ ಕೊರಟಗೆರೆ ರಸ್ತೆಗಳೇ ಸೊರಗಿ ಹೋಗಿದ್ದು, ಪ್ರತಿವರ್ಷ ಒಂದೊಂದು ರಸ್ತೆಗೆ ಜಂಗಲ್ ಕ್ಲೀನಿಂಗ್ ಹಾಗೂ ಪ್ಯಾಚ್ ವರ್ಕ್ ಅಂತ ಹೇಳಿ ಅಧಿಕಾರಿಗಳು ಲೂಟಿ ಒಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ ಜೊತೆಗೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ  ಯಾವ ಇಂಜಿನಿಯರ್ ಗಳು ಸಹ ಸ್ಥಳದಲ್ಲಿ ಇರುವುದಿಲ್ಲ ಜೊತೆಗೆ ಇವರು ಎಂಬಿ ಬರೆಯುವ ಸಂದರ್ಭದಲ್ಲಿ ಸ್ಪಾಟ್ ವಿಸಿಟ್ ಮಾಡದೆಯೇ ಮನಸೋ ಹಿಚ್ಛೆ ಎಂಬಿ ಬರದು ಸರ್ಕಾರಕ್ಕೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

 *ತುಂಡುಗುತ್ತಿಗೆಯಲ್ಲೂ ಇದೆ ಆನ್ಲೈನ್ ನಲ್ಲೂ ಇದೆ ವರ್ಕ್* 

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರ್ಕಾರಕ್ಕೆ ದೊಡ್ಡ ಮಟ್ಟದ ದಲ್ಲಿ ಯಾಮರಸಿ ಹಗಲು ದರೋಡೆ ನಡೆಸಿದ್ದು, ಈ ಹಿಂದೆ ಆನ್ ಲೈನ್ ಟೆಂಡರ್ ಮೂಲಕ ನಡೆದಿರುವ ಬಹಳಷ್ಟು ಕಾಮಗಾರಿಗಳು ಜನರಿಗೆ ಹಾಗೂ ಇಲಾಖೆಗೆ ಯಾ ಮರಿಸುವ ಮಾದರಿಯಲ್ಲಿ ತುಂಡು ಗುತ್ತಿಗೆ ಆಧಾರದಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗಿ ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನವನ್ನ ಹಗಲು ದುರುಡೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದರ ಬಗ್ಗೆ ಲೆಕ್ಕ ಶೀರ್ಷಿಕೆ 30: 54ರಲ್ಲಿ ಕ್ರಮ ಸಂಖ್ಯೆ 4ರಲ್ಲಿ ಕೊರಟಗೆರೆ ತಾಲೂಕ್ ಬಾಗೇಪಲ್ಲಿ – ಹಲಗೂರು ರಾಜ್ಯ ಹೆದ್ದಾರಿ 94 ರಸ್ತೆ ದುರಸ್ತಿ, ಕ್ರಮ ಸಂಖ್ಯೆ 6  ಕೊರಟಗೆರೆ ತಾಲೂಕು ವಡ್ಡಗೆರೆ, ಕೋಡಗದಾಲ, ಐ ಡಿ ಹಳ್ಳಿ ಮುಖಾಂತರ ಆಂಧ್ರ ಗಡಿ ಸೇರುವ ರಾಜ್ಯ ಹೆದ್ದಾರಿ, ಕ್ರಮ ಸಂಖ್ಯೆ 25 ರಲ್ಲಿ ಕೊರಟಗೆರೆ ತಾಲೂಕು ಮಾವತ್ತೂರು ಮತ್ತು ತೊಂಡೆಬಾವಿ ರಸ್ತೆ ದುರಸ್ತಿ ಕಾಮಗಾರಿ, ಕ್ರಮ ಸಂಖ್ಯೆ 24 ಹಾಗೂ 27 ಹುಲಿಕುಂಟೆ -ಬಿಡಿಪುರ ರಸ್ತೆ  ಅಭಿವೃದ್ಧಿ ಕಾರ್ಯ  ಲೆಕ್ಕ ಶೀರ್ಷಿಕೆ 30 :54 ಕ್ರಮ ಸಂಖ್ಯೆ 4. ರಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 48 ,(ನೆಲಹಾಳ್) ಸೇತುವೆಗೆ ರಕ್ಷಣಾ ಕಾಮಗಾರಿ ಎರಡು ಬಾರಿ ಬಿಲ್ಲು ಆದರೂ ರಕ್ಷಣಾ ಗೋಡೆ ಇಲ್ಲ ಬೋಗಸ್ ಬಿಲ್ ಕ್ರಮ ಸಂಖ್ಯೆ 5 ಕೊರಟಗೆರೆ ತಾಲೂಕು ನಿಂದ  ವಡ್ಡಗೆರೆ, ಕೋಡಗದಾಲ ,ಐಡಿಹಳ್ಳಿ ಮುಖಾಂತರ ಆಂಧ್ರ ಗಡಿ ಸೇರುವ ಕಾಮಗಾರಿಯಲ್ಲೂ ದೊಡ್ಡ ಲೋಪ. ಲೆಕ್ಕ ಶೀರ್ಷಿಕೆ 20: 59 ಇಲಾಖಾ ಕಟ್ಟಡಗಳು ಸೇರಿದಂತೆ ಇನ್ನಿತರ ಕಾಮಗಾರಿ.

ಕ್ರಮ ಸಂಖ್ಯೆ 6 ಲೋಕೋಪಯೋಗಿ ಕಚೇರಿಯಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಇನ್ನಿತರ ಕೇವಲ ಧ್ವಜಸ್ತಂಬ ನಿರ್ಮಿಸಿ ಹಣ ದುರ್ಬಳಕೆ, ಕೊರಟಗೆರೆ ನಿರೀಕ್ಷಿಣಾ ಮಂದಿರ ದುರಸ್ತಿ ಯಾವ ದುರಸ್ತಿಯೂ ಇಲ್ಲ ಕೇವಲ ಎರಡು ಗ್ರಾನೆಟ್ ಕಲ್ ಹಾಕಿರುವುದು, ಅದೇ ನಿರೀಕ್ಷಣ ಮಂದಿರದಲ್ಲಿ ಮೇಲ್ಚಾವಣಿ ದುರಸ್ತಿ ಅದು ಸಹ ಸ್ವಲ್ಪ ಪ್ರಮಾಣದಲ್ಲಿ ಮಾಡಿ ಹಗಲು ದರೋಡೆ ಮಾಡಲಾಗಿದೆ ಎಂಬ ಆರೋಪ ,ಇದೇ ಮಾದರಿಯ ಹತ್ತಾರು ಕಾಮಗಾರಿಗಳು 4,90,000 ಮೊತ್ತದಲ್ಲಿ ಹಣ ಬಿಡುಗಡೆಗೊಳಿಸಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಆರೋಪಿಸುತ್ತಾರೆ.

 *ತುಂಡುಗುತ್ತಿಗೆ ಕೆಲಸವೇ ಆಗಿಲ್ಲ ಬಿಲ್ ಪಾಸ್* ಲೆಕ್ಕ ಶೀರ್ಷಿಕೆ 30 : 54ರಲ್ಲಿ 

ಕ್ರಮ ಸಂಖ್ಯೆ 37 ಕೊರಟಗೆರೆ ತಾಲೂಕ್ ಇರಕಸಂದ್ರ ಕಾಲೋನಿಯಿಂದ ಸಂಕೇನಹಳ್ಳಿ ನೀಲಗೊಂಡನಹಳ್ಳಿ ಮುಖಾಂತರ ಮಾರಗುಂಡನ ಗುಣಿ ಸೇರುವ ರಸ್ತೆ ಕಾಮಗಾರಿ, ಕ್ರಮ ಸಂಖ್ಯೆ 42 ಕೊರಟಗೆರೆ ತಾಲೂಕು ಅಜ್ಜಿ ಹಳ್ಳಿ ಹೊಲತಾಳು ರಸ್ತೆಯಿಂದ ಗಾಂಧಿನಗರ ದಸಾಲಗುಂಟೆ ಮುಖಾಂತರ ಊರಕೆರೆ ತೋವಿನಕೆರೆಗೆ ಸೇರುವ ರಸ್ತೆ ಸರಪಳಿ ರಸ್ತೆಯಲ್ಲಿ ಕಾಮಗಾರಿ, ಲೆಕ್ಕ ಶೀರ್ಷಿಕೆ 30:54 ಕೊರಟಗೆರೆ ಯಿಂದ ವಡ್ಡಗೆರೆ ಕೋಡಗದಾಲ ಐಡಿ ಹಳ್ಳಿ ಮುಖಾಂತರ ಆಂಧ್ರ ಗಡಿ ಸೇತುವೆಗೆ ರಕ್ಷಣಾ ಕಾಮಗಾರಿ ಸೇರಿದಂತೆ ಇಂತಹ ಹಲವು ಕಾಮಗಾರಿಗಳು ಕಾಮಗಾರಿ ನಡೆಯದೆ ಬಿಲ್ ಪಾಸಾಗಿದೆ ಎಂದು ಆರೋಪಿಸಲಾಗುತ್ತಿದೆ. 

 *ಸ್ಕ್ರಾಪ್ ಗಾಡಿ ನಿರ್ವಹಣೆಗೆ 4 ಲಕ್ಷ* 

ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಟಾಟಾ ಸುಮೋ ಜೀಪ್ ಸಂಖ್ಯೆ ಕೆಎ 01 ಜಿ 3700 ಎಂಬ ಕಾರಿಗೆ ವಾರ್ಷಿಕ ನಿರ್ವಹಣೆ 4 ಲಕ್ಷ ಎಂದು ಬಿಲ್ ಪಾಸ್ ಆಗಿದೆ.. ಆದರೆ ವಿಚಿತ್ರ ಎಂದರೆ ಈ ಗಾಡಿಯನ್ನು ಈ ಬಿಲ್ ಪಾಸ್ ಆಗುವ ಒಂದು ವರ್ಷ ಮುಂಚಿತವಾಗಿಯೇ ಆ ಗಾಡಿಯನ್ನು ಸ್ಕ್ರಾಪ್ ಗೆ ಹಾಕಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಆದರೂ ಅದೇ ಗಾಡಿ ಗೆ 4 ಲಕ್ಷ ನಿರ್ವಹಣೆ ವೆಚ್ಚ ಎಂದು ಬಿಲ್ ಪಾವತಿಸಲಾಗಿದೆ, ಇದು ಆದ ಆರೇ ತಿಂಗಳಲ್ಲಿ ಜೀಪ್ ಸ್ಕ್ರ್ಯಾಪ್ ಮೂಲಕ ಸಾರ್ವಜನಿಕ ಬೀಟ್ ಮೂಲಕ ಹೊರಗಡೆ ಕೊಡಲಾಗಿದೆ, ಆದರೂ ನಿರ್ವಹಣಾ ವೆಚ್ಚ 400000 ಬಳಕೆಯಾಗಿರುವುದು ಇಲಾಖೆಯ ಭ್ರಷ್ಟಾಚಾರಕ್ಕೆ ಕೈಗನ್ನಡಿಯಂತಿದೆ ಎಂದು ಹರೀಶ್  ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಕಿಡಿ ಕಾಡಿದ್ದಾರೆ.

 *ಇಲಾಖೆಯ ಸಿಸಿ ಕ್ಯಾಮರಾ ಮಾಯ* 

ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಇಲಾಖೆಯಲ್ಲಿಯೂ ಇಲಾಖಾಧಿಕಾರಿಗಳು ಸೇರಿದಂತೆ ಅಲ್ಲಿ ನಡೆಯುವಂತಹ ಚಲನ ವಲನಗಳನ್ನ ಮೇಲ್ಪಟ್ಟ ಅಧಿಕಾರಿಗಳು ನಿಗಾವಹಿಸಲು ಸಿಸಿ ಕ್ಯಾಮೆರಾ ಕಡ್ಡಾಯಗೊಳಿಸಿದರಾದರೂ ಕೋಟ್ಯಾಂತರ ರೂಪಾಯಿ ಹಣ ಬಳಸುವ ಲೋಕೋಪಯೋಗಿ ಇಲಾಖೆಯಲ್ಲಿಯೇ ಸಿ ಸಿ ಕ್ಯಾಮೆರಾ ತೆಗೆದು ಹಾಕಿರುವುದು ಇಲ್ಲಿನ ಅಧಿಕಾರಿಗಳ ನಡತೆ ಹಾಗೂ ಭ್ರಷ್ಟಾಚಾರದ ಬಗ್ಗೆ ದೊಡ್ಡ ಅನುಮಾನ ಮೂಡಿದ್ದು, ಸಿ ಸಿ ಕ್ಯಾಮೆರಾ ಬಳಕೆ ಹಾಗೂ ದುರಸ್ತಿಗೆ ಲಕ್ಷಾಂತರ ರೂಪಾಯಿ ಹಣ ಬಳಸಲಾಗಿದೆ ಆದರೂ ಸಿಸಿ ಕ್ಯಾಮೆರಾ ತೆಗೆಸಿರುವುದರಿಂದ ಸಾರ್ವಜನಿಕರ ವಾದವಾಗಿದೆ, ಅಂದರೆ ಇಲ್ಲಿನ ವ್ಯಕ್ತಿಗಳ ಅಂದರೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ಇಲಾಖೆ ಇಂಜಿನಿಯರ್ ಗಳ ಪ್ರತಿದಿನ ಚಲನ ವಲನಗಳು, ದಿನಚರಿ, ಇಲಾಖಾ ಹಾಜರಾತಿ  ಸಾರ್ವಜನಿಕರಿಗೆ ಸೇರಿದಂತೆ ಇಲಾಖೆಗೆ ತಿಳಿಯಲಿದೆ ಎಂಬ ದುರುದ್ದೇಶದಿಂದ ಸಿಸಿ ಕ್ಯಾಮೆರಾವನ್ನ ತೆಗಿಸಲಾಗಿದೆ ಎನ್ನಲಾಗಿದೆ ಜೊತೆಗೆ ಇಲ್ಲಿ ನಡೆಯುವಂತಹ ಭ್ರಷ್ಟಾಚಾರ ಮರೆಮಾಚುವ ಏಕೈಕ ಉದ್ದೇಶ ಎಂದು ಆರೋಪಿಸಲಾಗಿದೆ.

 *ಉನ್ನತ ತನಿಕೆಗೆ ಆಗ್ರಹ* 

ಮಧುಗಿರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸುರೇಶ್ 2024ರ ಜುಲೈ 31 ರಂದು ನಿವೃತ್ತಿ ಹೊಂದುತ್ತಿರುವುದರಿಂದ ಇಲಾಖಾ ಭ್ರಷ್ಟಾಚಾರ ಆರೋಪ ಮುಕ್ತರಾಗುವ ವರೆಗೂ ಯಾವುದೇ ನವೃತ್ತಿ ವೇತನ ಹಾಗೂ ಸರಕಾರಿ ಸೌಲಭ್ಯ ಮುಂಜೂರಾತಿ ನೀಡಬಾರದು ಎಂದು ಕೋರುತ್ತಾ, ನಿವೃತ್ತ ನ್ಯಾಯಾಧೀಶರು ಮತ್ತು ರಾಜ್ಯ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿ, ಉನ್ನತ ಮಟ್ಟದ ಕಮಿಟಿ ರಚಿಸಿ ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಕಾರ್ಯ ಪಾಲಕ ಇಂಜಿನಿಯರ್ ಸುರೇಶ್ ಹಾಗೂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ವಿರುದ್ಧ ಗೌರವಾನ್ವಿತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಾ ಲೇಖ ಪಾಲಕರು ಕರ್ನಾಟಕ ಸರ್ಕಾರ, ಲೋಕಾಯುಕ್ತ ಇಲಾಖೆ, ಜಿಲ್ಲಾ ದಂಡಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆಯಾಗಿ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಆಗ್ರೈಹಿಸಿದ್ದಾರೆ.

 *ಬಿಬಿಎಂಪಿ ಭ್ರಷ್ಟಾಚಾರ ತನಿಖಾ ಅಂತದಲ್ಲೂ ಮುಂಬಡ್ತಿ* 

ಕೊರಟಗೆರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆ ,ಉಳ್ಳಾಲ.  ನಾಗರಬಾವಿ . ಬಿಬಿಎಂಪಿಯಲ್ಲಿ ಸಹಾಯಕ ಇಂಜಿನಿಯರ್ ಗ್ರೇಡ್ 2 ನಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನಡೆಸಿದಂತ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಐಷಾರಾಮಿ ಮನೆ ಸೇರಿದಂತೆ ಇನ್ನಿತರ ಆಸ್ತಿಗಳ ಮೇಲೆ ಲೋಕಾಯುಕ್ತರು ಹಾಗೂ ಎಸಿಬಿ ದಾಳಿ ನಡೆಸಿದ ವಿಚಾರ ಸರ್ಕಾರದ ಹಂತದಲ್ಲಿ ಹಾಗೂ ನ್ಯಾಯಾಲಯದಲ್ಲಿ ಯಾವುದೇ ಆರೋಪ ಮುಕ್ತ ದೋಷಪಟ್ಟಿ ನೀಡದೇ ತನಿಖಾ ಅಂದರೆ (1/4 ..1to4)ಹಂತದಲ್ಲಿ ಇರುವಾಗಲೇ ಮುಂಭಡ್ತಿ ನೀಡುವಂತಿಲ್ಲ ಆದರೂ ಕೊರಟಗೆರೆ ಲೋಕೋಪಯೋಗಿ ಇಲಾಖೆಗೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಆಗಿ ನೇಮಕಗೊಂಡಿರುವುದು ಕಾನೂನುಬಾಹಿರ…

ಜೊತೆಗೆ ಕರ್ನಾಟಕ ನಾಗರೀಕ ಸೇವಾ ನಿಯಮ ಅನುಸಾರ ಸಿಸಿಎ ವರ್ಕೀಕರಣ ನಿಯಮದಡಿ ತನಿಖಾ ಅಂತದಲ್ಲಿರುವ ಯಾವುದೇ ಅಧಿಕಾರಿಗಳಿಗೂ ಮುಂಬಡ್ತಿಯಾಗಲಿ ಅಥವಾ ಸರ್ಕಾರಿ ಸೌಲತ್ತುಗಳನ್ನಾಗಲಿ ನೀಡುವಂತಿಲ್ಲ ಎಂಬುವ ನಿಯಮವಿದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೊರಟಗೆರೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕೀಯ ಪ್ರೌಢತೆಯಿಂದ ಏನು ಬೇಕಾದರೂ ನಿಭಾಯಿಸುತ್ತೇನೆ ಎಂಬುವ ಅಹಂನಿಂದ ಈ ವ್ಯಕ್ತಿ ಭ್ರಷ್ಟಾಚಾರ ಕೋಪದಲ್ಲಿ ಮುಳುಗಿದ್ದಾರೆ ಎಂದು ಕೊರಟಗೆರೆ ಸಾಮಾಜಿಕ ಹೋರಾಟಗಾರರಾದ ಹರೀಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

– ಶ್ರೀನಿವಾಸ್‌ , ಕೊರಟಗೆರೆ.

Leave a Reply

Your email address will not be published. Required fields are marked *