ಕೊರಟಗೆರೆ :- ಪೂರ್ವ ಮುಂಗಾರು ಸತತ ಎರಡು ಮೂರು ದಿನಗಳಿಂದ ಗುಡುಗು ಸಹಿತ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ಅವಾಂತರ ಸೃಷ್ಟಿಸಿ ಇಡೀ ರಾತ್ರಿ ಮಳೆ ನೀರು ಹೊರ ಹಾಕುವ ಮೂಲಕ 4 -5 ಕುಟುಂಬಗಳು ಐರಾಣರಾದ ಘಟನೆ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಗಡಿ ಭಾಗ ಅರಸಾಪುರ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆಗೆ ಚರಂಡಿ ಹಾಗೂ ರಸ್ತೆಯಲ್ಲಿ ಅರಿಯಬೇಕಾದ ಕೊಳಚೆ ನೀರು ಮನೆ ಒಳಗೆ ನುಗ್ಗಿ ಮನೆ ಗೃಹಪಯೋಗಿ ವಸ್ತುಗಳು ಸೇರಿದಂತೆ ದಿನಬಳಕೆ ವಸ್ತುಗಳು ನಾಶವಾಗಿ ಸಾರ್ವಜನಿಕರು ಮಳೆ ನೀರು ಹೊರ ಹಾಕುವುದರಲ್ಲಿ ಇಡೀ ರಾತ್ರಿ ಕಳೆದು ವ್ಯವಸ್ಥೆಯ ವಿರುದ್ಧ ಇಡೀ ಶಾಪ ಹಾಕಿದ ಘಟನೆ ಜರುಗಿದೆ.

ಅರಸಾಪುರ ಗ್ರಾಮದಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ರಸ್ತೆ ಹಾಗೂ ಚರಂಡಿ ನೀರುಗಳು ನಾಲ್ಕೈದು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದ್ದು, ಕಷ್ಟದಿಂದ ಕೂಲಿ ನಾಲಿ ಮಾಡಿ ಸಂಪಾದಿಸಿದ ಅಲ್ಪಸ್ವಲ್ಪ ದಿನಸಿ ಹಾಗೂ ದಿನ ಬಳಕೆ ವಸ್ತುಗಳು ಮಳೆ ನೀರಿನಿಂದ ಹಾಳಾಗುತ್ತಿದ್ದು, ಇಡೀ ರಾತ್ರಿ ನಿದ್ರೆ ಇಲ್ಲದೆ ನೀರನ್ನ ಹೊರ ಹಾಕುವುದರಲ್ಲಿಯೇ ಇಡೀ ರಾತ್ರಿ ಕಳೆಯುವ ಅನಿವಾರ್ಯತೆ ಒದಗಿದ್ದು ಗ್ರಾಮ ಪಂಚಾಯಿತಿ ವ್ಯವಸ್ಥಿತವಾಗಿ ಚರಂಡಿ ನಿರ್ಮಾಣ ಮಾಡದೆ ಹಾಗೂ ಚರಂಡಿ ಶುದ್ದಿ ಇಲ್ಲದಿರುವುದರಿಂದ ಈ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅರಸಾಪುರ ಹಾಗೂ ಹೊಸಪಾಳ್ಯ ಸಂಪರ್ಕ ಕಲ್ಪಿಸುವಂತಹ ಬಂಡಿದಾರಿ ಸಂಪರ್ಕದ ಆಸುಪಾಸಿನಲ್ಲಿ ರುವ ಮನೆಗಳಿಗೆ ಮಳೆ ಸುರಿವ ಸಂದರ್ಭದಲ್ಲಿ ರಸ್ತೆ ಹಾಗೂ ಜಮೀನಿನ ಮೇಲ್ಭಾಗದಿಂದ ಬರುವಂತಹ ನೀರು ವೇಗವಾಗಿ ಬಂದು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೇರವಾಗಿ ಸಾರ್ವಜನಿಕರ ಮನೆಗಳಿಗೆ ನಗುವುದು ಸಾಮಾನ್ಯವಾಗಿದ್ದು, ಶನಿವಾರ ಸುರಿದ ಮಳೆ ಎರಡು ಮೂರು ಕುಟುಂಬಗಳ ಮನೆಗೆ ಮಳೆ ನೀರು ನುಗ್ಗಿ ಇಡೀ ರಾತ್ರಿ ನಿದ್ದಿಸಲಾಗದೆ ಕುಟುಂಬ ನೀರು ವರಕುವುದರಲ್ಲಿಯೇ ಇಡೀ ರಾತ್ರಿ ಕಳೆದು ವ್ಯವಸ್ಥೆಯ ವಿರುದ್ಧ ಇಡೀ ಶಾಪ ಹಾಕಿದ್ದಾರೆ.

*ಹೈವೇ ಕಾಮಗಾರಿಯಿಂದಲೂ ಅವಾಂತರ*
ನ್ಯಾಷನಲ್ ಹೈವೇ 69 ಅವೈಜ್ಞಾನಿಕ ಕಾಮಗಾರಿಯಿಂದ ನ್ಯಾಷನಲ್ ಹೈವೇ ರಸ್ತೆ ಬದಿಯ ಚರಂಡಿ ಸಮರ್ಪಕವಾಗಿ ಗ್ರಾಮದ ನೀರು ಹೊರಹೋಗದೆ ಇರುವುದರಿಂದ ಬಹಳಷ್ಟು ಮಳೆ ನೀರು ಮನೆಗಳಿಗೆ ನುಗ್ಗುವಂತಾಗಿದ್ದು, ಮಳೆ ಬಂದರೆ ಈ ಗ್ರಾಮದ ಬಹಳಷ್ಟು ಮನೆಗಳಿಗೆ ಮಳೆ ನೀರು ನುಗ್ಗಲಿದ್ದು, ಶಾಶ್ವತ ಪರಿಹಾರ ದೊರಕದಿದ್ರೆ ಇಡೀ ವರ್ಷ ಮಳೆಗಾಲದಲ್ಲಿ ಮಳೆ ಬರುವ ಸಂದರ್ಭದಲ್ಲಿ ಇಲ್ಲಿನ ಬಹಳಷ್ಟು ಕುಟುಂಬಗಳು ಐರಾಣಗುವುದು ಸರ್ವೇಸಾಮಾನ್ಯವಾಗಿದೆ.

*ಅಂಗವಿಕಲರ ನರಳಾಟ*
ಅನಾಥ ಮನೆ, ದುಡಿಯುವ ಯಜ್ಮಾನ ಇತ್ತೀಚಿಗಷ್ಟೇ ಮರಣ ಹೊಂದಿ ಅಂಗವಿಕಲ ಮಹಿಳೆ ಮತ್ತೋರ್ವ ಅಂಗವಿಕಲ ಬಾವ ಕುಟುಂಬದ ಜವಾಬ್ದಾರಿ ಹೊತ್ತ ಮಹಿಳೆ ಅಂಗವಿಕಲೆಯಾಗಿದ್ದು, ಈಕೆಯ ಮನೆಗೆ ಪ್ರತಿ ಬಾರಿಯೂ ಮಳೆಯ ಬಂದಾಗೆಲ್ಲ ಮಳೆ ನೀರು ಮನೆಯೊಳಗೇ ನುಗ್ಗಿ , ಅದು ಚರಂಡಿಯ ನೀರು ಮನೆಗೆ ನುಗ್ಗುವುದರಿಂದ ಇಡೀ ಕುಟುಂಬ ಸಂಕಷ್ಟದಲ್ಲಿ ಮುಳುಗಿದ್ದು, ದಿನಬಳಕೆ ವಸ್ತುಗಳು ಸೇರಿದಂತೆ ದಿನಸಿ ಸಾಮಗ್ರಿಗಳು ಮಳೆ ನೀರಿಗೆ ನೆಂದು ಹಾಳಾಗಿ ಇಡೀ ಕುಟುಂಬ ಮಳೆ ನೀರು ಎತ್ತೊಯ್ಯುವುದೇ ಕಾಯಕವಾಗಿ ರಾತ್ರಿ ಇಡೀ ನಿದ್ದೆ ಇಲ್ಲದೆ ಪರಿತಪಿಸಿ ಆಳುವ ವ್ಯವಸ್ಥೆಯ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ, ಗ್ರಾಮ ಪಂಚಾಯತಿಯವರು ಸಮರ್ಪಕವಾಗಿ ಚರಂಡಿ ಶುದ್ದಿಗಳಿಸದೆ ಮಳೆ ನೀರು ಮನೆಗೆ ನುಗ್ಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ನಮ್ಮ ಮನೆಗೆ ನಾನೇ ಆಧಾರಸ್ತಂಬ ಅದರಲ್ಲೂ ಅಂಗವಿಕಲೆ ಇತ್ತೀಚಿಗಷ್ಟೇ ನನ್ನ ಗಂಡ ಮರಣ ಹೊಂದಿದ್ದಾರೆ, ನಮ್ಮ ಭಾವಸಹ ಅಂಗವಿಕಲ , ನಾನು ಸಹ ಅಂಗವಿಕಲೆ ನನಗೆ ಇಬ್ಬರು ಮಕ್ಕಳಿದ್ದಾರೆ ಪ್ರತಿ ಮಳೆಗಾಲದಲ್ಲೂ ಚರಂಡಿ ನೀರು ಮನೆಗೆ ನುಗ್ಗಿ ನಮ್ಮ ಕುಟುಂಬವನ್ನು ಮೂರಾಬಟ್ಟೆ ಮಾಡಲಿದೆ, ತಿನ್ನುವ ಅನ್ನಕ್ಕೂ ಪರಿತಪಿಸುವಂತಹ ನಮ್ಮ ಕುಟುಂಬಕ್ಕೆ ಮಳೆ ಬಂದಾಗೆಲ್ಲ ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿ ನಮ್ಮ ಕುಟುಂಬವನ್ನು ಮೂರ ಬಟ್ಟೆ ಮಾಡಲಿದೆ,
- ರಂಗಮ್ಮ(ಅಂಗವಿಕಲ ಮಹಿಳೆ)

ಅರಸಾಪುರದಿಂದ ಹೊಸಪಾಳ್ಯಕ್ಕೆ ಹೋಗುವ ಬಂಡಿ ದಾರಿ ರಸ್ತೆಯ ಪಕ್ಕದಲ್ಲಿರುವ ನಮ್ಮ ಮನೆಗೆ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಎರಡು ಬದಿಯಲ್ಲಿ ಚರಂಡಿ ನಿರ್ಮಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸುವುದರಿಂದ ಪ್ರತಿ ಬಾರಿ ಮಳೆಯಲ್ಲೂ ಮನೆಗೆ ಮಳೆ ನೀರು ನುಗ್ಗಿ ದಿನಸಿ ಸಾಮಗ್ರಿಗಳು ಸೇರಿದಂತೆ ದಿನಬಳಕೆ ವಸ್ತುಗಳು ಹಾಳಾಗಿ ಬಡ ಕುಟುಂಬದ ಮೇಲೆ ಗಾಯದ ಮೇಲೆ ಬರೆ ಹೇಳಿದಂತಾಗಿ ಇಡೀ ನಮ್ಮ ಕುಟುಂಬ ಸಂಕಷ್ಟದಲ್ಲಿ ಮುಳುಗಲಿದೆ, ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ.
- ಲಕ್ಷ್ಮೀಶ .. ಸ್ಥಳೀಯ ಯುವಕ
ವರದಿ-ಶ್ರೀನಿವಾಸ್ ಕೊರಟಗೆರೆ