ಕೊರಟಗೆರೆ-“ರೌಡಿ ಲಿಸ್ಟ್ ಆಸಾಮಿ ‘ಕುಂಭಾರ ಬೀದಿಯ ಪುರಷೋತ್ತಮ್’ ರಾತ್ರೋ ರಾತ್ರಿ ಬಂಧನ”

ಕೊರಟಗೆರೆ :- ರೌಡಿ ಲಿಸ್ಟ್ ಆಸಾಮಿ ಯೋರ್ವ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವನಾಗಿ, ಹಲವು ವರ್ಷಗಳಿಂದ ತಲೆಮರಿಸಿಕೊಂಡಿದ್ದಂತ ವ್ಯಕ್ತಿ  ಡಕಾಯಿತಿಗೆ ಹೊಂಚು ಹಾಕುತ್ತಿದ್ದ ನಿಖರ ಮಾಹಿತಿ ಹರಿತ ಕೊರಟಗೆರೆ ಪಿಎಸ್ಐ ತೀರ್ಥೇಶ್  ರೌಡಿ ಲಿಸ್ಟ್ ಆಸಾಮಿಯನ್ನ  ರಾತ್ರೋರಾತ್ರಿ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಕೊರಟಗೆರೆ ಪಟ್ಟಣದ ಕುಂಬಾರ ಬೀದಿಯ ಪುರುಷೋತ್ತಮ್ (24 ವರ್ಷ) ಎಂಬುವ ವ್ಯಕ್ತಿಯೇ ಆರೋಪಿಯಾಗಿದ್ದು, ಈತ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ (307) ಕಾಯ್ದೆ ಕೇಸು ದಾಖಲಾಗಿ ಹುಡುಕಾಟದಲ್ಲಿದ್ದರೂ ಎನ್ನಲಾಗಿದ್ದು,  ಕೆಲವು ಕಾನೂನು ಬಹಿರ ಚಟುವಟಿಗಳಲ್ಲಿ ತೊಡಗಿಕೊಂಡಿದ್ದರಿಂದ ರೌಡಿ ಲಿಸ್ಟ್ ನಲ್ಲಿ ಇದ್ದವನಾಗಿದ್ದು, ಇತ್ತೀಚಿಗೆ ಕೆಲವು ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಹರಿತು, ಸುಮಾರು ವರ್ಷಗಳಿಂದ ಈತನ ಪತ್ತೆ ಗಾಗಿ ಹಲವು ಪೊಲೀಸ್ ಠಾಣೆಗಳಲ್ಲಿ ಈತನಿಗಾಗಿ ಬಲೆ ಬೀಸಿದ್ದರು ಎನ್ನಲಾಗಿದ್ದು, ದರೋಡೆಗೆ ಸಂಚುರುಪುಸುತ್ತಿದ್ದ ಎಂಬ ಮಾಹಿತಿ ಹರಿತ ಕೊರಟಗೆರೆ ಪೊಲೀಸ್ ನವರು ಸಿಪಿಐ ಅನಿಲ್ ಅವರ ಮಾರ್ಗದರ್ಶನದಂತೆ ಪಿಎಸ್ಐ ತೀರ್ಥೇಶ್ ಹಾಗೂ ಪೊಲೀಸ್ ತಂಡ ರಾತ್ರೋರಾತ್ರಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. 

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ರಾತ್ರೋರಾತ್ರಿ  ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎನ್ನಲಾಗಿದೆ.

– ಶ್ರೀನಿವಾಸ್‌ , ಕೊರಟಗೆರೆ

Leave a Reply

Your email address will not be published. Required fields are marked *