ಕೊರಟಗೆರೆ :- ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ.ಎಸ್.ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯ ಕೋರ್ ಕಮಿಟಿಯ ಕೊರಟಗೆರೆ ತಾಲೂಕಿನ ಶಾಖೆಗೆ ನೂತನವಾಗಿ ಗೌರವಾಧ್ಯಕ್ಷರನ್ನಾಗಿ ಕೆ.ಚಿಕ್ಕಣ್ಣ ರವರನ್ನು ಮತ್ತು ಅದ್ಯಕ್ಷರನ್ನಾಗಿ ಶಿಕ್ಷಕ ಲಕ್ಷ್ಮಿಪುತ್ರ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ತುಮಕೂರು ವಿಶ್ವ ವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯ ಕೋರ್ ಕಮಿಟಿ ಸಬೆಯಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ ಜಯಂತಿ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲೂಕು ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಚಿಕ್ಕಣ್ಣ ನವರನ್ನು ಮತ್ತು ಅಧ್ಯಕ್ಷರನ್ನಾಗಿ ಶಿಕ್ಷಕ ಲಕ್ಷ್ಮೀಪುತ್ರ ರವರನ್ನು ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ರವರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಯ ಕಾರ್ಯರ್ದಶಿ ವಿಜಯ್‍ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ, ಕಾರ್ಯದರ್ಶಿ ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
—————--ಶ್ರೀನಿವಾಸ್ ಕೊರಟಗೆರೆ