ಕೊರಟಗೆರೆ;- ತಾಲೂಕಿನ ಹೊಳವನಹಳ್ಳಿಯ ಕುಮಾರಿ ಆಕಾಂಕ್ಷಾ ಸಂದೀಪ್ ಅವರು ದ್ವಿತೀಯ ಪಿಯುಸಿ ಸಿಬಿಎಸ್‍ಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 579ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾರೆ.
ಹೊಳವನಹಳ್ಳಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ದಿವಂಗತ ರಮಾನಂದ್ ಮೊಮ್ಮಗಳಾದ ಆಕಾಂಕ್ಷಾ ಕನಕಪುರ ರಸ್ತೆಯ ಸೋಮನಹಳ್ಳಿಯ ಎಡಿಪೈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಅವರು ಈ ಬಾರಿ ನಡೆದ ದ್ವಿತೀಯ ಪಿಯುಸಿ ಸಿಬಿಎಸ್‍ಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 579ರಷ್ಟು ಅಂಕ ಪಡೆದು ಶೇ.96.2 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನ ತಂದಿದ್ದಾರೆ.

ಇವರ ಹುಟ್ಟುರಾದ ಹೊಳವನಹಳ್ಳಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿನ್ನಲೆ ಮನೆಯಲ್ಲಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.
– ಶ್ರೀನಿವಾಸ್, ಕೊರಟಗೆರೆ.