ಕೊರಟಗೆರೆ-ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿಯಿಂದ ಸಚಿವರ ಭೇಟಿ-ವಿಶೇಷ ಅನುದಾನಕ್ಕೆ ಮನವಿ

ಕೊರಟಗೆರೆ-ತಾಲೂಕಿನ ಹೊಳವನಹಳ್ಳಿ ಹೋಬಳಿಯ ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ‘ಅಭಿವೃದ್ದಿ-ಜಿರ್ಣೋದ್ದಾರ’ ನೂತನ ಸಮಿತಿ ರಚನೆಯಾಗಿದ್ದು ಪದಾಧಿಕಾರಿಗಳು ಗೃಹ ಸಚಿವ ಡಾ.ಜಿ.ಪರಮೇಶ್ವರರವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಿ ದೇವಾಲಯದ ಅಭಿವೃಧ್ದಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

ಈ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ದ್ವಾಪರಯುಗದಲ್ಲಿ ಪಾಂಡವರಿಂದ ನಿರ್ಮಿಣಗೊಂಡ ದೇವಾಲಯವಾಗಿದ್ದು ಇತ್ತೀಚೆಗೆ ಈ ದೇವಾಲಯದ ಅಭಿವೃದ್ದಿಗಾಗಿ ನೂತನ ಸಮಿತಿ ರಚನೆಯಾಗಿದ್ದು ಮೂರು ವರ್ಷದ ಅವದಿಯವರೆಗೆ ಈ ಸಮಿತಿ ಕಾರ್ಯನಿರ್ವಹಿಸುತ್ತದೆ.

ನೂತನ ಸಮಿತಿಗೆ ಕೊರಟಗೆರೆ ತಹಶೀಲ್ದಾರ್ ರವರು ಖಜಾಂಚಿಗಳಾಗಿದ್ದು, ಹೊಳವನಹಳ್ಳಿ ವೃತ್ತದ ಕಂದಾಯ ತನಿಖಾಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ,ಅಧ್ಯಕ್ಷರಾಗಿ ತುಮಕೂರಿನ ರಾಮಮೂರ್ತಿ,ಗೌರವಾಧ್ಯಕ್ಷರಾಗಿ ಹೆಚ್.ಮಹದೇವ್, ಉಪಾಧ್ಯಕ್ಷರಾಗಿ ದ್ರಾಕ್ಷಾಯಿಣಿ ರಾಜಣ್ಣ, ಸದಸ್ಯರುಗಳಾಗಿ ಹೊಳವನಹಳ್ಳಿಯ ಜಯರಾಮು, ಕೋಳಾಲ ಹೋಬಳಿ ಹೊಸಕೋಟೆ ಗ್ರಾಮದ ಹೆಚ್.ಕೆ.ಮಹಾಲಿಂಗಪ್ಪ,ಹೊಳವನಹಳ್ಳಿ ಹೋಬಳಿ ಕೊಡ್ಲಹಳ್ಳಿಯ ಚಂದ್ರಶೇಖರ್,ದುಗ್ಗೇನಹಳ್ಳಿಯ ರಂಗನಾಥ್, ಹೆಚ್.ವಿ.ಪಾಳ್ಯದ ಉಮಾಶಂಕರ ಆರಾಧ್ಯ, ಕ್ಯಾಮೇನಹಳ್ಳಿಯ ಶ್ರೀರಾಮು, ಹೊನ್ನಾರನಹಳ್ಳಿಯ ರಾಘವೇಂದ್ರ ರವರುಗಳು ನೇಮಕ ಗೊಂಡಿದ್ದಾರೆ.

———–-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?