
ಕೊರಟಗೆರೆ:ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ವಿ.ಸಿದ್ದಗಂಗಯ್ಯ ಕೊರಟಗೆರೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಮುಖಂಡರೊಂದಿಗೆ ಕೊರಟಗೆರೆಯ ರಿಂಗ್ ರಸ್ತೆಯ ಪಕ್ಕದಲ್ಲಿರುವ ಕಚೇರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ವಿ. ಸಿದ್ದಗಂಗಯ್ಯ ಮಾತನಾಡಿ,ನನ್ನ ಜೀವನದಲ್ಲಿ 2025 ನೇ ವರ್ಷಕ್ಕೆ ಅತ್ಯಂತ ಮಹತ್ವವಿದೆ.ಈ ವರ್ಷ ನನಗೆ ಅಧಿಕಾರವೊಂದು ದೊರೆತಿದ್ದು ಈ ಅಧಿಕಾರವನ್ನು ಜನರ ಉನ್ನತಿಗಾಗಿ ಬಳಸಿಕೊಳ್ಳುತ್ತೇನೆ.ನಾನು ನಿರ್ದೇಶಕನಾಗಿ ಆಯ್ಕೆಯಾಗುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸುತ್ತೇನೆ.ಇದು ನನ್ನೊಬ್ಬನ ಗೆಲುವಲ್ಲ ಪ್ರತಿಯೊಬ್ಬ ಹಾಲು ಉತ್ಪಾದಕನ ಗೆಲುವು ಎಂದು ನಾನು ಭಾವಿಸಿದ್ದು ಹೈನೋದ್ಯಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಜೆಡಿಎಸ್ ಅಧ್ಯಕ್ಷ ಕಾಮರಾಜು,ಬಿಜೆಪಿ ಅಧ್ಯಕ್ಷ ದರ್ಶನ್,ಎಲೆರಾಂಪುರ ಹನುಮಂತರಾಯಪ್ಪ,ಹೊಸಕೋಟೆ ಕಾಮಣ್ಣ,ರಂಗಣ್ಣ,ಲಕ್ಷ್ಮಣ್,ಪ್ರಕಾಶ್,ರವೀಶ್,ಕೃಷ್ಣಪ್ಪ,ನಂಜಾರಾದ್ಯ,ಸಿದ್ದರಾಜು, ರಮೇಶ್,ಕಾಕಿ ಮಲ್ಲಣ್ಣ,ಗ್ರಾಮ ಪಂಚಾಯ್ತಿ ಸದಸ್ಯರುಗಳು ಹಾಗೂ ಜೆಡಿಎಸ್- ಬಿಜೆಪಿ ಮುಖಂಡರು ಕೊರಟಗೆರೆ ಹಾಲು ಉತ್ಪಾದಕರ ಸಂಘ ಸಹಕಾರ ಸಂಘಗಳ ಸಿಬ್ಬಂದಿ ವರ್ಗ ಹಾಜರಿದ್ದರು.
——-ವರದಿ ನರಸಿಂಹಯ್ಯ ಕೋಳಾಲ