ಕೊರಟಗೆರೆ–ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಿದ್ದಗಂಗಯ್ಯ.ವಿ ಆಯ್ಕೆ-ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಪ್ರತಿಫಲ-ವಿ.ಸೋಮಣ್ಣ

ಕೊರಟಗೆರೆ-ತುಮಕೂರು ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟಕ್ಕೆ ಕೊರಟಗೆರೆ ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾದ ಎನ್ ಡಿ ಎ ಅಭ್ಯರ್ಥಿ ಸಿದ್ದಗಂಗಯ್ಯ.ವಿ ಗೆಲುವಿನ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮ ಬಹಳಷ್ಟು ಇದೆ. ನಿರ್ದೇಶಕರಾಗಿ ಆಯ್ಕೆ ಬಯಸಿದ್ದ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ಕಾರಣ ಸಿದ್ದಗಂಗಯ್ಯ.ವಿ ಅಭ್ಯರ್ಥಿ ಗೆಲುವು ಸುಲಭವಾಯಿತು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅಭಿಪ್ರಾಯಪಟ್ಟರು.

ಅವರು ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಕ್ಯಾತಗಾನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಮತ್ತು ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಕಾಮರಾಜು ಕೆ. ಎ ಅವರ ಮನೆಗೆ ಚಹಾ ಕೂಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿ ತಾಲೂಕಿಗೆ ಬಂದಾಗ ಬಿಜೆಪಿ ಹಾಗು ಜೆಡಿಎಸ್ ನಾಯಕರು,ಕಾರ್ಯಕರ್ತರು ಹೆಚ್ಚಿನ ಪ್ರೀತಿಯನ್ನು ತೋರಿಸಿದ್ದು ನಾನು ಅಭಾರಿಯಾಗಿರುತ್ತೇನೆ ಎಂದರು.

ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ ಕೊರಟಗೆರೆ ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆ ಬಯಸಿದ್ದ ಒಮ್ಮತದ ಎನ್.ಡಿ.ಎ ಅಭ್ಯರ್ಥಿ ಸಿದ್ದಗಂಗಯ್ಯ ಅವರ ಗೆಲುವು ನಮಗೆ ಮತ್ತಷ್ಟು ಶಕ್ತಿ ನೀಡಿದೆ. ಮಾಜಿ ಶಾಸಕ ಜೆಡಿಎಸ್ ನ ಪಿ. ಆರ್ ಸುಧಾಕರ್ ಲಾಲ್, ಬಿಜೆಪಿಯ ಮುಖಂಡ ಬಿ. ಎಚ್ ಅನಿಲ್ ಕುಮಾರ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಬಿಜೆಪಿ ಹಾಗೂ ಜೆಡಿಎಸ್ ನ ಅಧ್ಯಕ್ಷರುಗಳು ಕಾರ್ಯಾಧ್ಯಕ್ಷರುಗಳು ಪದಾಧಿಕಾರಿಗಳು ಮುಖಂಡರು ಹಾಗು ಕಾರ್ಯಕರ್ತರ ಪರಿಶ್ರಮದಿಂದ ಸಿದ್ದಗಂಗಯ್ಯ ವಿ ಅವರ ಗೆಲುವು ಸಾಧ್ಯವಾಗಿದೆ ಎಂದರು.

ಬಿಜೆಪಿ ಮುಖಂಡ ಕಾಮರಾಜು ಕೆ ಎ ಮೊದಲಿನಿಂದಲೂ ನಿಷ್ಠಾವಂತ ಮುಖಂಡ , ನಾನು ಲೋಕಸಭಾ ಚುನಾವಣೆಗೆ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಭಾಗದಲ್ಲಿ ಮುಂದೆ ನಿಂತು ಕೆಲಸ ಮಾಡಿದ್ದಾರೆ.ಇವರು ಈ ಹಿಂದೆ ಮಾಜಿ ಸಚಿವ ಸಿ .ಚೆನ್ನಿಗಪ್ಪನವರ ಜೊತೆಯಲ್ಲಿದ್ದಾಗಲೂ ಅವರಿಗೂ ಅಷ್ಟೇ ನಿಷ್ಠೆಯಿಂದ ಇದ್ದವರು. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಂತ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಮ್ಮ ಕೈಲಾದ ಸಹಕಾರ ನೀಡಲಾಗುವುದು ಎಂದು ವಿ ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ತುಮಕೂರಿನ ಶಾಸಕರಾದ ಜ್ಯೋತಿ ಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಬಿಜೆಪಿ ಮುಖಂಡ ಬಿಎಚ್ ಅನಿಲ್ ಕುಮಾರ್ ಸೇರಿದಂತೆ ಊರಿನ ಗ್ರಾಮಸ್ಥರು ಹಲವು ಮುಖಂಡರುಗಳು ಹಾಜರಿದ್ದರು.

ವರದಿ- ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?