ಕೊರಟಗೆರೆ :- ಕಲಿಕೆಯಲ್ಲಿ ಶ್ರದ್ದೆ, ಏಕಾಗ್ರತೆ ಮೂಡಲು ಮತ್ತು ಭೋಧನೆಯಲ್ಲಿ ಕಾಲಕ್ಕೆ ತಕ್ಕಂತೆ ತಾಂತ್ರಿಕ ಬದಲಾವಣೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಶಾಲೆಗಳ ಬಲವರ್ಧನೆಗೆ ಅಗತ್ಯ ನೆರವನ್ನು ನಮ್ಮ ಎಲ್.ಇ.ಎಸ್.ಜಿ ಕಂಪನಿ ಮತ್ತು ಯೂತ್ ಫರ್ ಸೇವಾ ಸಂಸ್ಥೆ ವತಿಯಿಂದ ಸ್ಮಾರ್ಟ್ ಟಿವಿ 12 ಕಂಪ್ಯೋಟರ್‍ಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ವಿಜಯ್ ಶ್ರೀಕಂಠಮೂರ್ತಿ ತಿಳಿಸಿದರು.
ಅವರು ಪಟ್ಟಣದ ಕಾಳಿದಾಸ ಪ್ರೌಢಶಾಲೆಯಲ್ಲಿ ಎಲ್.ಇ.ಎಸ್.ಜಿ ಕಂಪನಿ ಮತ್ತು ಯೂತ್ ಫರ್ ಸೇವಾ ಸಂಸ್ಥೆ ವತಿಯಿಂದ ಸ್ಮಾರ್ಟ್ ಟಿವಿ, 12 ಕಂಪ್ಯೋಟರ್‍ಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಗ್ರಾಮೀಣ ಭಾಗದ ಶಾಲೆಗಳಲ್ಲೂ ಭೋಧನೆಯಲ್ಲಿ ನಾವಿನತೆ ಮೂಡಬೇಕಾಗಿದೆ, ಆಧುನಿಕ ಸೌಲಭ್ಯಗಳು ಗ್ರಾಮೀಣ ಮಕ್ಕಳಿಗೂ ದೊರೆಯಬೇಕು, ಗ್ರಾಮೀಣ ಭಾಗದ ಮತ್ತು ನಗರ ಶಾಲೆಗಳಲ್ಲಿನ ಸೌಲಭ್ಯಗಳ ಕುರಿತಂತೆ ಇರುವ ತಾರತಮ್ಯವನ್ನು ಹೋಗಲಾಡಿಸಲು ನಮ್ಮ ಸಂಸ್ಥೆ ಎಲ್ಲಾ ಅಗತ್ಯ ಸೌಲಭ್ಯ ಒದಗಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಪಟ್ಟಣದ ಬಾಲಾಜಿ ಟೆಕ್ಸಟೈಲ್ ಅಂಗಡಿ ಮಾಲಿಕ ಯುವ ಮುಖಂಡ ಬಾಲಾಜಿ ದರ್ಶನ್ ಮಾತನಾಡಿ ಕಲಿಕೆಗೆ ಶ್ರದ್ದೆ, ಛಲ ನಿರ್ದಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಖುಷಿಯಿಂದ ಸಾದನೆಯತ್ತ ಮುನ್ನುಗ್ಗಿ ಎಲ್.ಇ.ಎಸ್.ಜಿ ಕಂಪನಿ ಮತ್ತು ಯೂತ್ ಫರ್ ಸೇವಾ ಸಂಸ್ಥೆ ವತಿಯಿಂದ ಸ್ಮಾರ್ಟ್ ಟಿವಿ, 12 ಕಂಪ್ಯೋಟರ್‍ಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿ, ನಿಮಗೆ ಕಲಿಕೆಗೆ ಅಗತ್ಯವಾದ ಸೌಲಭ್ಯ ಒದಗಿಸಲು ನಿಮ್ಮೊಂದಿಗೆ ಇರುತ್ತೇವೆ ಎಂದರು.
ಕಾಳಿದಾಸ ಪ್ರೌಢಶಾಲೆಯ ಆಡಳಿತ ಮಂಡಲಿ ನಿರ್ದೇಶಕ ಜಿ.ಡಿ.ನಾಗಭೂಷಣ್ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಮಾರ್ಟ್ ಟಿವಿ, 12 ಕಂಪ್ಯೋಟರ್‍ಗಳು ಮತ್ತು ಕ್ರೀಡಾ ಸಾಮಗ್ರಿಗಳು ನೀಡಿರುವ ಎಲ್.ಇ.ಎಸ್.ಜಿ ಕಂಪನಿ ಮತ್ತು ಯೂತ್ ಫರ್ ಸೇವಾ ಸಂಸ್ಥೆ ಪಧಾದಿಕಾರಿಗಳು ನಮ್ಮ ಶಾಲೆಯ ಮಕ್ಕಳ ಬಗ್ಗೆ ಹೊಂದಿರುವ ಅಭಿಮಾನ ಪ್ರೀತಿಗೆ ಕೃತಜ್ಞತೆ ಸಲ್ಲಿಸಿ ಶಿಕ್ಷಕರು ಇದರ ಸದುಪಯೋಗ ಪಡೆದು ಮಕ್ಕಳಿಗೆ ಭೋದಿಸುವ ಮೂಲಕ ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿ ತೋರಿಸಬೇಕು ಎಂದು ಶಾಲಾ ಶಿಕ್ಷಕರಿಗೆ ಸೂಚಿಸಿದರು.
ಮುಖ್ಯ ಶಿಕ್ಷಕಿ ಸೀತಾದೇವಿ ಮಾತನಾಡಿ ಧಾನಿಗಳು ನೀಡಿರುವ ಸೌಲಭ್ಯಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಸಾಧನವಾಗಿದ್ದು ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಿಸಿ ಉತ್ತಮ ಫಲಿತಾಂಶ ನೀಡುವುದಾಗಿ ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಎಲ್.ಇ.ಎಸ್.ಜಿ ಕಂಪನಿ ಉಮೇಶ್ , ನಿರಂಜನ್, ನಾಗರಾಜು, ವಿಕಾಸ್, ಯೂತ್ ಫರ್ ಸೇವಾ ಸಂಸ್ಥೆಯ ಬಾಸ್ಕರ್, ಮಂಜುನಾಥ್, ಶ್ರೀನಿವಾಸ್, ಅರವಿಂದ್, ಶಾಲಾ ಶಿಕ್ಷಕರುಗಳಾದ ವಂದನಾ, ಬಸವರಾಜು , ಮಂಜುಳಾ ಬಿ.ಜಿ, ನವೀನ್‍ಕುಮಾರಿ, ಶ್ರೀನಿವಾಸ್, ನಂದಕೀಶೋರ್, ಪ್ರಭಾಕರ್, ನಾಗರಾಜು , ಗೀತಾಂಜಲಿ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಬಾಗವಹಿಸಿದ್ದರು.
-ಶ್ರೀನಿವಾಸ