ಕೊರಟಗೆರೆ-ಸೋರುತ್ತಿರುವ ಗ್ರಂಥಾಲಯ-ಬಹುತೇಕ ಪುಸ್ತಕಗಳು ನಾಶ-ಅಂತಂಕಕ್ಕೀಡಾದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು

ಕೊರಟಗೆರೆ:-ಪಟ್ಟಣದ ಕೇಂದ್ರ ಗ್ರಂಥಾಲಯ ಸತತ ಮಳೆಯಿಂದ ಸೋರುತ್ತಿದ್ದು,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಬಹಳಷ್ಟು ಪುಸ್ತಕಗಳು ನಾಶವಾಗುವ ಆತಂಕದ ಜೊತೆಗೆ ಕಟ್ಟಡವು ಕುಸಿಯುವ ಭೀತಿ ಸೃಷ್ಟಿಯಾಗಿದೆ.

ಬಹಳಷ್ಟು ಹಳೆಯ ಕಾಲದ ಕಟ್ಟಡದಲ್ಲಿ ಈ ಗ್ರಂಥಾಲಯವಿದ್ದು ಹಲವು ವರ್ಷಗಳಿಂದಲೂ ಮಳೆಗಾಲದಲ್ಲಿ ಸೋರಿಕೆ ಕಾಣುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ಜಾಸ್ತಿ ಶಿಥಿಲಗೊಂಡಿದ್ದು ಮಳೆ ನೀರಿನ ಸೋರಿಕೆಯ ಪ್ರಮಾಣವು ಜಾಸ್ತಿಯಾಗಿದೆ.

ಈ ಕಾರಣದಿಂದ ಬಹುತೇಕ ಪುಸ್ತಕಗಳು ನೀರಿಂದ ನೆಂದು ಓದಿಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ.ಅದರಲ್ಲೂ ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯದ ಪುಸ್ತಕಗಳನ್ನೇ ನೆಚ್ಚಿಕೊಂಡಿದ್ದ ಬಡ ಪರೀಕ್ಷಾರ್ಥಿಗಳು ಚಿಂತೆಗೀಡಾಗುವಂತೆ ಮಾಡಿದೆ.

ಕಟ್ಟಡವು ಸಹ ಅತ್ಯಂತ ಕಿರಿದಾಗಿದ್ದು ಎಲ್ಲರಿಗು ಕುಳಿತು ಓದಲು ಸಾಧ್ಯವಾಗುತ್ತಿರಲಿಲ್ಲ.ಈ ಕಟ್ಟಡಕ್ಕೆ ಬದಲಾಗಿ ಹೊಸ ಕಟ್ಟಡವನ್ನು ನಿರ್ಮಿಸಬೇಕೆಂಬ ಕೂಗು ಬಹಳ ಕಾಲದಿಂದಲೂ ಇದ್ದಿತು.ಪುಸ್ತಕ ಪ್ರಿಯರು/ವಿದ್ಯಾರ್ಥಿಗಳು ಹೊಸ ಕಟ್ಟಡವನ್ನು ನಿರ್ಮಿಸಿಕೊಡುವಂತೆ ಶಾಸಕರು ಹಾಗು ಸಂಬಂಧಪಟ್ಟವರನ್ನು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು ಅವರಿಂದ ಸಿಕ್ಕ ಸ್ಪಂದನೆ ಮಾತ್ರ ಶೂನ್ಯವೆಂದೇ ಹೇಳಬಹುದು.

ಆದಷ್ಟು ಶೀಘ್ರ ಗ್ರಂಥಾಲಯಕ್ಕೊಂದು ಹೊಸ ಕಟ್ಟಡವನ್ನು ನಿರ್ಮಿಸಿಕೊಟ್ಟು ಬಡ ವಿದ್ಯಾರ್ಥಿಗಳ ಹಾಗು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವವರ ನೆರವಿಗೆ ಸಮಬಂಧಪಟ್ಟವರು ಧಾವಿಸಬೇಕಾಗಿದೆ.

————--ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?