ಕೊರಟಗೆರೆ:– ಗೌರಿಕಲ್ಲು ಗ್ರಾಮಸ್ಥರು ಮತ್ತು ಕಾರ್ಮಿಕರ ವಿರೋಧದಿಂದ 15 ವರ್ಷದಿಂದ ಸ್ಥಗೀತವಾಗಿದ್ದ ಕಲ್ಲುಗಣಿಕೆಗೆ ಈಗ ತುಮಕೂರಿನ ಕಲ್ಲು ಮತ್ತು ಭೂವಿಜ್ಞಾನ ಇಲಾಖೆ ಜೀವನೀಡಿದೆ ಎಂದು ಆರೋಪಿಸಿ ಬೆಂಡೋಣಿ ಜಯರಾಂ ವಿರುದ್ದ ದಿಕ್ಕಾರ ಕೂಗಿ ಬಂಡೇ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಗೌರಿಕಲ್ಲು ಗ್ರಾಮದ ಸರ್ವೆ ನಂ.36 ರಲ್ಲಿ ಮತ್ತೇ ಸಂಘರ್ಷಕ್ಕೆ ಎಡೆಮಾಡಿಕೊಟ್ಟ ಕಲ್ಲು ಗಣಿಗಾರಿಕೆಯು ಸದ್ದು ಮಾಡುತ್ತಿದೆ.
ಗೌರಿಕಲ್ಲು ಗ್ರಾಮದ ಸರ್ವೆ ನಂ36.ರಲ್ಲಿ ಬೆಂಡೋಣಿಯ ಜಯರಾಮ್ ಎಂಬಾತನಿಗೆ ಕಳೆದ 15ವರ್ಷದ ಹಿಂದೆ ಗಣಿಗಾರಿಕೆಯಿಂದ ಇದೇ ಸರ್ವೆ ನಂ.36 ರಲ್ಲಿ 4ಎಕರೇ ಸರಕಾರಿ ಭೂಮಿ ಗಣಿ ಇಲಾಖೆಯಿಂದ 4ಎಕರೇ ಕಲ್ಲುಕ್ವಾರೇ ಮಂಜೂರು ಆಗಿದೆ. ಅಂದಿನಿಂದಲೇ ಕಾರ್ಮಿಕರ ಹೋರಾಟವು ಪ್ರಾರಂಭವಾಗಿದೆ.

ಕಾರ್ಮಿಕರು ಮತ್ತು ಜಯರಾಂ ನಡುವೆ ಸಂಘರ್ಷ:- ಗೌರಿಕಲ್ಲು ಸರ್ವೆ ನಂ.36ರ ಕಲ್ಲುಕ್ವಾರೆಯ ಬಂಡೆಯಲ್ಲಿ ಕಳೆದ ಬಂಡೇ ಕಾರ್ಮಿಕರು ಕಳೆದ 4೦ವರ್ಷದಿಂದ ಬಂಡೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೇ. ಬೆಂಡೋಣಿ ಜಯರಾಮ್ ಈ ಹಿಂದೆ ಇಲ್ಲೇ ಗಣಿಗಾರಿಕೆ ಪ್ರಾರಂಭ ಮಾಡಿದಾಗ ಕಾರ್ಮಿಕರು ಮತ್ತು ಸ್ಥಳೀಯರ ವಿರೋಧದಿಂದ ಇಲ್ಲಿಯತನಕ ಸ್ಥಗೀತವಾಗಿತ್ತು. ಈಗ ಮತ್ತೇ ಪ್ರಾರಂಭವಾಗಿ ಸಮಸ್ಯೆಯ ಜೊತೆ ಸಂಘರ್ಷವು ಸೃಷ್ಟಿಯಾಗಿದೆ.
ಭದ್ರತೆ ಇಲ್ಲದೇ ಬ್ಲಾಸ್ಟಿಂಗ್‌ಗೆ ತಯಾರಿ:- ಕಾರ್ಮಿಕರ ವಿರೋಧದ ನಡುವೆಯು ಸಹ ಬೆಂಡೋಣಿ ಜಯರಾಮ್ ಬೆಂಬಲಿಗರು ಪರವಾನಗಿಯೇ ಇಲ್ಲದ ಟ್ರಾಕ್ಟರ್‌ನಿಂದ ಕಲ್ಲುಕ್ವಾರೆಯಲ್ಲಿ ರಂಧ್ರಕೊರೆದು ಬ್ಲಾಸ್ಟಿಂಗ್ ನಡೆಸಲು ಪೂರ್ವತಯಾರಿ ನಡೆಸುತ್ತಿದ್ದಾರೇ. ಬ್ಲಾಸ್ಟಿಂಗ್ ಪರವಾನಗಿ ಇಲ್ಲ ಅದರ ಜೊತೆ ಟ್ರಾಕ್ಟರ್‌ನ ನಂಬರಿನ ಜೊತೆ ದಾಖಲೆಯೇ ಇಲ್ಲ. ಜಯರಾಂ ಬೆಂಬಲಿಗರನ್ನ ಕಾರ್ಮಿಕರು ಪ್ರಶ್ನಿಸಿದ್ರೇ ಕಲ್ಲುಬಂಡೆಯ ಜೊತೆ ನೀವು ಬ್ಲಾಸ್ಟ್ ಆಗ್ತೀರಾ ಎಂಬ ದೌರ್ಜನ್ಯದ ಮಾತುಗಳು ಕೇಳಿಬಂದಿವೆ.

100 ಜನ ಕಾರ್ಮಿಕರು ಬೀದಿಪಾಲು:- ಕಲ್ಲುಬಂಡೆಯನ್ನೇ ನಂಬಿರುವ ಗೌರಿಕಲ್ಲು, ಮಲ್ಲೇಕಾವು ಮತ್ತು ಗೊಂದಿಹಳ್ಳಿಯ ಬಂಡೇ ಕಾರ್ಮಿಕರು ಕಲ್ಲು ಗಣಿಗಾರಿಕೆಯಿಂದ ಬೀದಿಗೆ ಬರುತ್ತಾರೇ. ಬಡಕಾರ್ಮಿಕರ ದಿನನಿತ್ಯದ ಕೂಲಿನ ಅನ್ನವನ್ನು ಗಣಿಗಾರಿಕೆ ಮಾಡುತ್ತಿರುವ ಶ್ರೀಮಂತರು ಕಿತ್ತುಕೊಳ್ತಾರೇ ಇದು ಸರಿಯೇ. ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿವರ್ಗ ಬಡ ಕಾರ್ಮಿಕರ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಈಗ ಇದೆ.
- ಸೀನು