ಕೊರಟಗೆರೆ:– ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಡಾ. ಜಿ ಪರಮೇಶ್ವರ್ ವಿಶೇಷ ಅಧಿಕಾರಿ ನಾಗಣ್ಣ ಪೋಷಕರಿಗೆ ಕಿವಿಮಾತು ಹೇಳಿದರು.
ಅವರು ಕೊರಟಗೆರೆ ತಾಲೂಕಿನ ಸಿಎನ್ ದುರ್ಗಾ ಹೋಬಳಿ ಕಬ್ಬಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡುತ್ತಾ ಪೋಷಕರು ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವಂತಾಗಬೇಕು ಎಂದರು.
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೋಷಕರು ತಮ್ಮ ದುಡಿಮೆಯ ಬಹುತೇಕ ಪಾಲನ್ನ ಮೀಸಲಿಡುತ್ತಿದ್ದು, ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಬಹಳಷ್ಟು ಶ್ರಮಪಡುತ್ತಿದ್ದಾರೆ, ಸ್ವತಂತ್ರ ನಂತರ ನಮ್ಮಲ್ಲಿ ಶೇಕಡ 12% ಮಾತ್ರ ಸಾಕ್ಷರತೆ ಇತ್ತು , ಸ್ವತಂತ್ರ ಬಂದು 78 ವರ್ಷದ ನಂತರ ಈಗ 85 ರಿಂದ 90 % ಸಾಕ್ಷರತೆ ಇದೆ, 25 ವರ್ಷಗಳ ಹಿಂದೆ ನಾವು ವಿಮರ್ಶೆ ಮಾಡಿ ನೋಡಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸಿನ ಕೊರತೆ ಇತ್ತು, ಅನ್ನಕ್ಕೆ, ಬಟ್ಟೆಗೆ ಮನೆ ಕೊರತೆ ಇತ್ತು, ಹೃದಯ ಶ್ರೀಮತಿಗೆ ಹೆಚ್ಚಿತ್ತು,
ಯಾರೋ ಒಬ್ಬರು ಹಿರಿಯರು ಊರಿನಲ್ಲಿ ಒಂದಿಷ್ಟು ಬುದ್ದಿವಾದ ಹೇಳಿದ್ರೆ ಎಲ್ಲರೂ ಕೇಳುವಂತ ಮನಸ್ಥಿತಿಯಲ್ಲಿದ್ರು, ಯಥೇಚ್ಛವಾಗಿ ನೆಮ್ಮದಿ ಇತ್ತು, ಈಗ ಎಲ್ಲಾ ಇದ್ರೂ ನೆಮ್ಮದಿ ಇಲ್ಲ, ಸಂಸಾರದಲ್ಲಿ ಹೊಂದಾಣಿಕೆ ಇಲ್ಲ ತುಂಬು ಕುಟುಂಬಗಳು ಕಣ್ಮರೆಯಾಗುತ್ತಿವೆ, ಶಿಕ್ಷಣದ ಗುಣಮಟ್ಟ ಹೆಚ್ಚಾದಂತೆಲ್ಲ ಸಾಮರಸ್ಯ ಕೊರತೆ ಎದ್ದು ಕಾಣುತ್ತದೆ, ವಿದ್ಯಾವಂತರೆ ಸಮಾಜಕ್ಕೆ ಕಂಟಕ ಪ್ರಾಯರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದರು .

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದ ಜನತೆಗೆ ನ್ಯಾಯ ದೊರಕಿಸಿದೆ, ಬಡವರಿಗೆ ಆಸಕ್ತರಿಗೆ ಸಮಾಜದಲ್ಲಿ ಬದುಕುವಂಥ ಶಕ್ತಿ ಗ್ಯಾರಂಟಿ ಯೋಜನೆಯಿಂದ ದೊರಕಿದೆ, ಆರ್ಥಿಕವಾಗಿ ಸಬಲರಾಗಲಿ ಎಲ್ಲರೂ ಸಮ-ಸಮಾಜವಾಗಿರಲಿ , ಉಳ್ಳವರು ಅನ್ನ ಊಟ ಮಾಡುತ್ತಿದ್ದಾರೆ, ಬಡವರಿಗೂ ಅನ್ನ ಸಿಗುವಂತಾಗಲಿ , ಸಮಾಜದಲ್ಲಿ ಏರುಪೇರಿನ ನೋವಿನಿಂದ ದೂರವಾಗಲಿ ಸಮಾಜ ಸಮಾನತೆಯಿಂದ ಕೂಡಿರಲಿ ಎಂಬ ದೃಷ್ಟಿಯಿಂದ ಗ್ಯಾರಂಟಿ ಯೋಜನೆಯನ್ನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷರಾದ ಡಾ .ಜಿ ಪರಮೇಶ್ವರ್ ಭವಿಷ್ಯದ ಹಿದೃಷ್ಟಿಯಿಂದ ಈ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ, ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವ ಡಾ.ಜಿ ಪರಮೇಶ್ವರ್ ವರನ್ನು ಮತ್ತಷ್ಟು ಆಶೀರ್ವಾದ ಮಾಡಿ ಅವರಿಗೆ ಇನ್ನಷ್ಟು ಉನ್ನತ ಹುದ್ದೆ ಸಿಗಲಿ ಎಂದು ಸಂಕಲ್ಪ ಮಾಡಿ, ನಿಮ್ಮೆಲ್ಲರ ಅಭಿವೃದ್ಧಿಗೆ ಗ್ರಾಮಗಳ ಅಭಿವೃದ್ಧಿಗೆ ಡಾ. ಪರಮೇಶ್ವರ್ ಸದಾ ಸಿದ್ಧರಿದ್ದಾರೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಶಾಲಾ ಅಭಿವೃದ್ಧಿ ಸಂಘದ ಅಧ್ಯಕ್ಷ ಭೂತಯ್ಯ ಮಾತನಾಡಿ, ಶಾಲಾ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘ ಬಹಳ ಶ್ರಮವಹಿಸುತ್ತಿದ್ದು, ಶಾಲಾ ಅಭಿವೃದ್ಧಿ ಸೇರಿದಂತೆ ಶೈಕ್ಷಣಿಕ ಗುಣಮಟ್ಟದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಉರ್ದುಂಬಿಸುವಂತಹ ನಿಟ್ಟಿನಲ್ಲಿ ಬಹಳಷ್ಟು ಶ್ರಮವಹಿಸುತ್ತಿದ್ದು, ಹಳೆ ವಿದ್ಯಾರ್ಥಿ ಸಂಘ ಶಾಲಾ ಅಭಿವೃದ್ಧಿಗೆ ಬಹಳಷ್ಟು ಕನಸು ಹೊತ್ತಿದ್ದು, ಮತ್ತಷ್ಟು ಶಾಲಾ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜೊತೆ ಜೊತೆಯಲ್ಲಿ ಪೋಷಕರು ಸಹ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ತೋವಿನಕೆರೆ ಸಿಆರ್‌ಪಿ ಹರ್ಷ ಮಾತನಾಡಿ ಇಂದಿನ ಸಮಾಜದಲ್ಲಿ ಶಾರೀರಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಹವ್ಯಾಸಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿ ಮಾನಸಿಕ ದೃಢತೆಯನ್ನು ಬೆಳೆಸಬೇಕು, ಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜವನ್ನು ಎದುರಿಸಲು ಬೇಕಾದ ಜಾಣ್ಮೆ, ಸಾಮರ್ಥ್ಯವನ್ನು ನೀಡಬೇಕು. ಜೀವನದ ಕಲೆಯನ್ನು ಅನುಭವಿಸಲು ಸಾಧ್ಯವಾಗುವಂತ ಮೌಲ್ಯಗಳನ್ನು ನೀಡುವುದು ಅವಶ್ಯಕ ಎಂದರು.
ಜನಮನ ಸೂರೇಗೊಂಡ ಶಾಲಾ ವಾರ್ಷಿಕೋತ್ಸವ
ಕೊರಟಗೆರೆ ತಾಲೂಕಿನ ಗಡಿ ಭಾಗ ಕಬ್ಬಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2024- 25 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ಆಯೋಜಿಸಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂದು ಜನ ಮನ ಸೂರೇಗೊಂಡಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್,ಸರ್ಕಾರಿ ನೌಕರ ಸಂಘದ ನಿರ್ದೇಶಕ ಚಂದ್ರಯ್ಯ, ಮುಖ್ಯ ಶಿಕ್ಷಕ ಚಂದ್ರಯ್ಯ, ಶಿಕ್ಷಕರಾದ ಬಸವರಾಜು ,ಲಲಿತಮ್ಮ, ವೇದಶ್ರೀ, ಎಸ್ ಬಿ ಎಂ ಸಿ ಸದಸ್ಯರಾದ ದಾಸೇಗೌಡ, ನಾಗರಾಜು, ಲಕ್ಷ್ಮಮ್ಮ , ಮುನಿಯಮ್ಮ, ವಿಜಯ ಲಕ್ಷ್ಮಮ್ಮ, ರಾಧಮ್ಮ ಉಮಾದೇವಿ, ಸುಮಾ ವೇದಾಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ