ಕೊರಟಗೆರೆ :- ಪಟ್ಟಣದ ಸಮಾಜ ಸೇವಾ ಸಮಿತಿಯಾದ ಪ್ರೇಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿಗಳ ಮತ್ತು ತುಮಕೂರು ಸಂಜೀವಿನಿ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತಧಾನ ಶಿಬಿರದಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
ಪಟ್ಟಣದ ಎಸ್‌ಎಸ್‌ಆರ್ ವೃತ್ತದ ಬಸ್ಸ್ ನಿಲ್ದಾಣದಲ್ಲಿ ಪ್ರೇಂಡ್ಸ್ ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿಗಳ ಸಮಿತಿ ಮನವಿ ಮೇರೆಗೆ ಪಟ್ಟಣದ ಸಾರ್ವಜನಿಕರು ಮತ್ತು ಯುವಕರು ಸ್ವಯಂ ಪ್ರೇರಣೆ ಯಿಂದ ಸುಮಾರು 4೦ ಕ್ಕೂ ಹೆಚ್ಚು ಮಂದಿ ತುಮಕೂರಿನ ಸಂಜೀವಿನಿ ರಕ್ತನಿಧಿ ಕೇಂದ್ರ ರಕ್ತಧಾನ ಶಿಬಿರದಲ್ಲಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಪ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಸದಸ್ಯರುಗಳಾದ ಪ್ರದೀಪ್‌ಕುಮರ್, ಕಿರಣ್‌ಕುಮಾರ್, ಶ್ರೀನಿವಾಸ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಣ್ಣ ಸೇರಿದಂತೆ ಇನ್ನಿತರ ಸದಸ್ಯರು ಹಾಜರಿದ್ದರು.
- ಶ್ರೀನಿವಾಸ್, ಕೊರಟಗೆರೆ .