ಕೊರಟಗೆರೆ– ತಾಲ್ಲೂಕು ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಪಾಲನಹಳ್ಳಿ ಗ್ರಾಮದ ಚರಂಡಿಗಳಲ್ಲಿ ಸ್ವಚ್ಛತೆಯೇ ಇಲ್ಲ ಹಾಗೂ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಪುಂಡ ಪೋಕರಿಗಳ ಹಾವಳಿ ಆಸ್ಪತ್ರೆಯ ಆವಣದಲ್ಲಿಯೇ ಮಧ್ಯಪಾನದ ಬಾಟಲುಗಳನ್ನು ಎಸೆದಿದ್ದಾರೆ ಹಾಗೂ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗವೇ ಸ್ವಚ್ಛತೆಯೇ ಇಲ್ಲದೆ ಸಾರ್ವಜನಿಕರು ರೋಗ ರುಜಿನಗಳ ಆತಂಕದಲ್ಲಿದ್ದಾರೆ.
ಈ ಸಂಬಂಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಪಾಳ್ಯದಲ್ಲಿ ಗ್ರಾಮಸ್ಥರು ಮಾತನಾಡಿ, ಮನೆಯ ಮುಂದೆ ಇರುವ ಚರಂಡಿಗಳೆಲ್ಲವೂ ತುಂಬಿ ರೋಡಿಗೆ ಹರಿಯುತ್ತಿದೆ ಇದರಿಂದ ಬರುವ ದುರ್ವಾಸನೆ ತಾಳಲಾರದು ಇದರಿಂದ ರೋಗರು ದಿನಗಳು ಹೆಚ್ಚುತ್ತಿವೆ ಎಷ್ಟೋ ಬಾರಿ ಅಧಿಕಾರಿಗಳಿಗೂ ತಿಳಿಸಿದರೂ ಸಹ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇನ್ನೂ ಕೆಲ ಗ್ರಾಮಗಳು ಮೂಲಭೂತ ಸೌಕರ್ಯಗಳು ಹಾಗೂ ಸ್ವಚ್ಛತೆ ಇಲ್ಲದೆ ಸೊರಗುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಸ್ವಚ್ಛತೆಯನ್ನು ಕಾಪಾಡಿ ಅಭಿವೃದ್ಧಿಪಡಿಸುತ್ತಾರಾ ಕಾದು ನೋಡಬೇಕಾಗಿದೆ.
- ನರಸಿಂಹಯ್ಯ ಕೋಳಾಲ