ಕೊರಟಗೆರೆ-ಟಿಎಪಿಸಿಎಂಎಸ್-ನೂತನ-ಅಧ್ಯಕ್ಷರಾಗಿ-ಜಿ-ಎಂ-ಶಿವಾನಂದ್-ಅವಿರೋಧ-ಆಯ್ಕೆ

ಕೊರಟಗೆರೆ : – ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಇಂದು ಚುನಾವಣೆ ಜರುಗಿ ಅಧ್ಯಕ್ಷರಾಗಿ ಜಿಎಂ ಶಿವಾನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೊರಟಗೆರೆ ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಸದಸ್ಯರುಗಳ ಒಡಂಬಡಿಕೆಯಂತೆ ಮಾತುಕತೆ ಅನ್ವಯ ಈ ಹಿಂದಿನ ಅಧ್ಯಕ್ಷ ಈಶಣ್ಣನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಜರುಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅವಿರೋಧವಾಗಿ ಜಿಎಂ ಶಿವಾನಂದ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ನೂತನ ಅಧ್ಯಕ್ಷರಾಗಿ ಶಿವಾನಂದ ಆಯ್ಕೆಯ ಸುದ್ದಿ ತಿಳಿದ ನಂತರ ಕಾಂಗ್ರೆಸ್ ಪಕ್ಷದ ಮುಖಂಡರು ಸಹಕಾರ ಸಂಘದ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಸಹಕಾರ ಸಂಘದ ಸಿಡಿಒ ರಾಘವೇಂದ್ರ ಎ ಆರ್ ಸಿ ಓ ಸಣ್ಣಪ್ಪಯ್ಯ, ಕಾರ್ಯದರ್ಶಿ ಕೃಷ್ಣಮೂರ್ತಿ (ಕಿಟ್ಟಣ್ಣ ) ಚುನಾವಣಾ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿಎಂ ಶಿವಾನಂದ್ ಮಾತನಾಡಿ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ನವರಿಗೆ ಹಾಗೂ ಎಲ್ಲಾ ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಎಲ್ಲರ ಮಾರ್ಗದರ್ಶನದಂತೆ ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತಾ ಸಹಕಾರ ಸಂಘವನ್ನ ಎಲ್ಲ ಸದಸ್ಯರು ಒಟ್ಟುಗೂಡಿ ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಹಾಗೂ ತಾಲ್ಲೂಕಿನ ರೈತರ ಜೊತೆ ನಮ್ಮ ಸಹಕಾರ ಸಂಘ ನಿರಂತರವಾಗಿ ಇರುತ್ತದೆ ಯಾವುದೇ ತೊಂದರೆ ಆಗದಂತೆ ಉತ್ತಮವಾಗಿ ಕರ್ತವ್ಯ ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್ ಮಾತನಾಡಿ ಸಹಕಾರ ಸಂಘದ ಎಲ್ಲಾ ನಿರ್ದೇಶಕರ ಸಹಕಾರದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಯಶಸ್ವಿಯಾಗಿ ನಡೆದು ಜಿಎಂ ಶಿವಾನಂದ್ ರವರು ಎಲ್ಲಾ ನಿರ್ದೇಶಕರ ಬೆಂಬಲ ಮತ್ತು ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿ ನೂತನ ಅಧ್ಯಕ್ಷರಾಗಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ರವರ ಮಾರ್ಗದರ್ಶನದಂತೆ ಇನ್ನು ಮುಂದೆ ಸಹಕಾರ ಸಂಘವು ಕೆಲಸ ಮಾಡಲಿದೆ ತಾಲೂಕಿನ ಎಲ್ಲಾ ರೈತರಿಗೆ ಸಹಕಾರ ಸಂಘದಿಂದ ಸಿಗುವಂತಹ ಎಲ್ಲಾ ಸವಲತ್ತುಗಳು ರೈತರಿಗೆ ಸಿಗುವಂತಾಗಲಿ ಎಂದು ತಿಳಿಸಿದರು.

ತಾಲ್ಲೂಕ್ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಟಿ ಏ ಪಿ ಸಿ ಎಂ ಎಸ್ ಕೊರಟಗೆರೆ ತಾಲೂಕಿನಲ್ಲಿ ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಡಾ. ಜಿ ಪರಮೇಶ್ವರ್ ಮಾರ್ಗದರ್ಶನದಂತೆ ಎಲ್ಲಾ ಸದಸ್ಯರು ಒಗ್ಗೂಡಿ ಯಾವುದೇ ವಿರೋಧ ವ್ಯಕ್ತವಾಗದೆ ಅವಿರೋಧವಾಗಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೈತ ಪರ ಕಾಳಜಿ ಇಟ್ಕೊಂಡು ಕಾರ್ಯ ನಿರ್ವಹಿಸಲಿ ಎಂದು ಆಶಿಸುತ್ತೇನೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್ ಅರಕೆರೆ ಶಂಕರ್, ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ ಬಲರಾಮಯ್ಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಪ.ಪಂ ಮಾಜಿ ಉಪಾಧ್ಯಕ್ಷ ಕೆ ವಿ ಮಂಜುನಾಥ್ ಮುಖಂಡರಾದ ಮಹಾಲಿಂಗಪ್ಪ, ಹುಲೀಕುಂಟೆ ಪ್ರಸಾದ್,ವಿ ಎಸ್ ಎಸ್ ಎನ್ ಅಧ್ಯಕ್ಷರಾದ ವಿನಯ್ ಕುಮಾರ್, ಕಾರ್ ಮಹೇಶ್,ಪವನ್, ನಾಗಭೂಷಣ್ ಹಾಗೂ ಉಪಾಧ್ಯಕ್ಷರಾದ ಕೆ ಆರ್ ರಾಘವೇಂದ್ರ ನಿರ್ದೇಶಕರಾದ ಈಶಪ್ರಸಾದ್,ಕುಂಬಿ ನರಸಿಂಹಯ್ಯ,ಉಮಾದೇವಿ, ರಂಗದಾಸೇಗೌಡ ಶಶಿಕಲಾ,ಸುನೀತಾ ಸೇರಿದಂತೆ ಇತರರು ಹಾಜರಿದ್ದರು.

– ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?