ಕೊರಟಗೆರೆ-ತೀತಾ ಜಲಾಶಯ ಭರ್ತಿಗೆ ಕ್ಷಣಗಣನೆ-ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಲಾಶಯ ಪಾತ್ರದ ಜನರಿಗೆ ತಾಲೂಕು ಆಡಳಿತ ಮನವಿ

ಕೊರಟಗೆರೆ-ತೀತಾ ಜಲಾಶಯದ ಪಾತ್ರದ ಜನರು ತಾತ್ಕಾಲಿಕವಾಗಿ ತಮ್ಮ ಜಾನುವಾರುಗಳು ಹಾಗು ಬೆಲೆಬಾಳುವ ವಸ್ತುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್ ಕೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ತೀತಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಹಾಗು ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಒಳಹರಿವು ಜಾಸ್ತಿಯಿದ್ದು ಯಾವುದೇ ಸಂದರ್ಭದಲ್ಲೂ ಭರ್ತಿಯಾಗುವ ಸಾಧ್ಯತೆಗಳಿವೆ.

ಈ ಕಾರಣಕ್ಕೆ ಜಲಾಶಯ ವ್ಯಾಪ್ತಿಯ ಎಲ್ಲ ಜಯಮಂಗಲಿ ನದಿ-ಹಳ್ಳಗಳು ತುಂಬಿ ಹರಿಯುವ ಅವಕಾಶಗಳು ಜಾಸ್ತಿಯಿದ್ದು ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಅಪಾಯದಿಂದ ರಕ್ಷಿಸಿಕೊಳ್ಳುವಂತೆ ಸೂಚಿಸಿದ್ದಾರೆ.

——————ಶ್ರೀನಿವಾಸ್ ಕೊರಟಗೆರೆ

.

Leave a Reply

Your email address will not be published. Required fields are marked *

× How can I help you?