ತುಮಕೂರು/ಕೊರಟಗೆರೆ-ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಕೊರಟಗೆರೆ ಬಿಜೆಪಿ ಘಟಕದ ಮಂಡಲ ಅಧ್ಯಕ್ಷ ಕೆ.ಎಲ್ ದಶ೯ನ್ ಆಯ್ಕೆಯಾಗಿದ್ದಾರೆ.
ಕೆ.ಎಲ್ ದರ್ಶನ್ ಆಯ್ಕೆ ನಂತರ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭಾಗೆ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಅಧ್ಯಕ್ಷರು ಉಪಾಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರಿಗೂ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನನ್ನ ಮೇಲೆ ಇಟ್ಟಿರುವಂತ ನಂಬಿಕೆಯನ್ನು ಹುಸಿ ಮಾಡದ ರೀತಿಯಲ್ಲಿ ನನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಒಂದು ದೊಡ್ಡ ಮಟ್ಟದ ಸಂಘಟನೆಯಾಗಿದ್ದು ಇದು ಸಮುದಾಯದ ಏಳಿಗೆಗೆ ಅವಿರತ ಶ್ರಮ ಹಾಕುತ್ತಿದ್ದು, ನಾನು ಸಹ ಕೈಜೋಡಿಸಿ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮವಹಿಸುವುದಾಗಿ ತಿಳಿಸಿದರು.
ಅಖಿಲ ಭಾರತ ವೀರಶೈವ ಸಂಘಟನೆ ಒಂದು ಪಕ್ಷಕ್ಕೆ ಸೀಮಿತವಾಗಿರದೆ,ಇಡೀ ಸಮುದಾಯವನ್ನು ಪಕ್ಷಾತೀತವಾಗಿ ಕೊಂಡೊಯ್ಯುವಂತ ಕೆಲಸವನ್ನು ಪ್ರಾರಂಭದ ಹಂತದಿಂದಲೂ ಮಾಡುತ್ತಿದ್ದು,ಸಮುದಾಯವನ್ನ ರಾಜಕೀಯವಾಗಿ, ಶೈಕ್ಷಣಿಕವಾಗಿ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವಂಥ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ.ಇದಕ್ಕೆ ನಾವು ಸಹ ಕೈಜೋಡಿಸಿ ಸಮುದಾಯದ ಅಭಿವೃದ್ಧಿಗೆ ನಮ್ಮ ಕೈಲಾದ ಸಹಾಯ ಮಾಡುವಂತಹ ಅವಕಾಶ ಜನಾಂಗ ನನಗೆ ಕಲ್ಪಿಸಿರುವುದು ಬಹಳ ಸಂತಸ ತಂದಿದೆ ಎಂದರು.
————–ಶ್ರೀನಿವಾಸ್ ಕೊರಟಗೆರೆ