ಕೊರಟಗೆರೆ-ವೈಬ್ರೆಂಟ್ ಮೈಸೂರು ನ್ಯೂಸ್ ವರದಿಗೆ ತಕ್ಷಣ ಸ್ಪಂದನೆ –ಚರಂಡಿ ಶುದ್ದಿಕರಿಸುವ ಕಾರ್ಯಕ್ಕೆ ಮುಂದಾದ ಗ್ರಾಮ ಪಂಚಾಯಿತಿ

ಕೊರಟಗೆರೆ :- ಪೂರ್ವ ಮುಂಗಾರು ಸತತ ಮಳೆಯಿಂದ ಬಡಪಾಯಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಸುದ್ದಿ  ವೈಬ್ರೆಂಟ್ ಮೈಸೂರ್ ನ್ಯೂಸ್ ನಲ್ಲಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚರಂಡಿ ಶುದ್ದಿಗಳಿಸುವ ಮೂಲಕ ವೈಬ್ರೆಂಟ್ ಮೈಸೂರ್ ನ್ಯೂಸ್ ಸುದ್ದಿಗೆ ಫಲ ಶ್ರುತಿ ದೊರಕಿದೆ. 

ಕೊರಟಗೆರೆ ತಾಲೂಕಿನ ಗಡಿ ಭಾಗ ಅರಸಾಪುರ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು 95.5 ಮಿಲಿ ಮೀಟರ್ ಮಳೆಯಾಗಿದ್ದು, ಸತತ ಮಳೆಯಿಂದ 3-4 ಮನೆಗಳಿಗೆ ಮಳೆ ನೀರು ಸೇರಿದಂತೆ ಚರಂಡಿ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಸುದ್ದಿ   ವೈಬ್ರೆಂಟ್ ಮೈಸೂರ್ ನ್ಯೂಸ್ ನಲ್ಲಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ಸ್ಥಳಕ್ಕೆ ಧಾವಿಸಿ ಚರಂಡಿ ಶುದ್ದಿಕರಿಸುವ ಕಾರ್ಯಕ್ಕೆ ಮುಂದಾಗಿದೆ. 

ಅರಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಕಲಾ ರಾಜಣ್ಣ ಪಿಡಿಒ ಪೃಥ್ವಿಬಾ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸ್ವತಃ ಮುಂದೆ ನಿಂತು ಕಟ್ಟಿಕೊಂಡಿದ್ದ ಚರಂಡಿಯನ್ನು ಶುದ್ಧಿ ಗೊಳಿಸುವ ಕಾರ್ಯ ಸೇರಿದಂತೆ ಮನೆಗಳಿಗೆ ನೀರು ನುಗ್ಗಿದ ಪ್ರತಿ ಮನೆಯ ಮುಂಭಾಗ ಚರಂಡಿಗೆ ಮಳೆ ನೀರು ಸರಾಗವಾಗಿ ಹಾದು ಹೋಗುವ ರೀತಿಯಲ್ಲಿ  ಶುದ್ದಿಗೊಳಿಸಿ ಮಳೆಯಿಂದ ಆದಂತಹ ಅವಗಡಗಳ ಬಗ್ಗೆ ಪರಿಶೀಲನೆ ನಡೆಸಿ ಆದಂತಹ ಅನಾಹುತ ಹಾಗೂ ನಷ್ಟದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. 

ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಾಪುರ ಗ್ರಾಮದಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಮಳೆ ನೀರು ಮನೆ ಒಳಗೆ ನುಗ್ಗುವುದು ಸಾಮಾನ್ಯವಾಗಿದ್ದು, ಅದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಆಗ್ರೈಹಿಸಿದ್ದು, ಗ್ರಾಮ ಪಂಚಾಯಿತಿ ತಾತ್ಕಾಲಿಕ ಕ್ರಮ ಕೈಗೊಂಡು ಕೈ ತೊಳೆದು ಕೊಂಡರೆ ಪ್ರಯೋಜನವಾಗುವುದಿಲ್ಲ, ಶಾಶ್ವತ ಪರಿಹಾರ ಕ್ರಮ ವಹಿಸಬೇಕು ಎಂದು  ಒತ್ತಾಯಿಸಿದ್ದಾರೆ.

ನ್ಯಾಷನಲ್ ಹೈವೇ 69 ಕಾಮಗಾರಿ ಇನ್ನೇನು ಪೂರ್ಣಗೊಳ್ಳುವ ಅಂತದಲ್ಲಿದ್ದು, ರಸ್ತೆಯ ಬದಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿ ಊರಿನ ನೀರು ಚರಂಡಿ ಮೂಲಕ ಹಾದು ಹೋಗುವುದನ್ನೇ ತಡೆದು ನಿಲ್ಲಿಸಿ ನೀರು ನಿಂತಲ್ಲೇ ನಿಂತು ಅನೈರ್ಮಲ್ಯ ತಾಂಡವಾಡುತ್ತಿರುವ ಜೊತೆಗೆ ಸತತ ಮಳೆಯಾದ ಸಂದರ್ಭದಲ್ಲಿ ಹಲವೆಡೆ  ಚರಂಡಿ ನೀರು ಹಾಗೂ ಮಳೆ ನೀರು ರಸ್ತೆ ಬದಿಯ ಮುಖ್ಯ ಚರಂಡಿಗೆ ಸರಾಗವಾಗಿ ಹರಿಯದೆ ಮಳೆ ನೀರು ಚರಂಡಿ  ತುಂಬಿ ತಗ್ಗು ಪ್ರದೇಶದ  ಮನೆಗೆ ನುಗ್ಗುವುದು ಸೇರಿದಂತೆ ಅನೇಕ ಅನಾಹುತಗಳನ್ನ ಸೃಷ್ಟಿಸುತ್ತಿರುವುದು ಸಾಮಾನ್ಯವಾಗಿದೆ.

ಒಟ್ಟಾರೆ ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಬಂದ ಸಂದರ್ಭದಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿ ಬಡ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು, ಕೆಲವು ಬಡ ಕುಟುಂಬದವರು ಮಳೆ ನೀರು ನುಗ್ಗಿದಾಗಲೆಲ್ಲಾ ಸಾವಿರಾರು ರೂಪಾಯಿ ನಷ್ಟ ಅನುಭವಿಸಿ ಅದೂ ಅಂಗವಿಕಲ ಕುಟುಂಬದವರ ಪರಿಸ್ಥಿತಿ ಏಳು ತೀರದಾಗಿದ್ದು, ಮುಂದಿನ ದಿನಗಳಲ್ಲಾದರೂ ಇಂತರ ಅವಾಂತರ ಸೃಷ್ಟಿಸದಂತೆ ಗ್ರಾಮ ಪಂಚಾಯಿತಿ ಮುಂಜಾಗ್ರತೆ ವಹಿಸಿ ಶಾಶ್ವತ ಪರಿಹಾರ ಕಲ್ಪಿಸಲಿದೆಯೇ ಕಾದು ನೋಡಬೇಕಿದೆ.

– ಶ್ರೀನಿವಾಸ್‌, ಕೊರಟಗೆರೆ.

Leave a Reply

Your email address will not be published. Required fields are marked *