ಕೊರಟಗೆರೆ-ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ ಅದೇಶದ ಮೇರೆಗೆ ತಾಲೂಕಿನ ತೋವಿನಕೆರೆ ಸರ್ಕಾರಿ ಶಾಲೆಯ ಮಕ್ಕಳು ವಿಧಾನಸೌಧ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಶಾಲೆಯ 106 ಮಂದಿ ವಿದ್ಯಾರ್ಥಿಗಳು 12 ಮಂದಿ ಶಿಕ್ಷಕರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ವಿಧಾನ ಸೌದ ಮತ್ತು ವಿಶ್ವೇಶ್ವರಯ್ಯ ಮ್ಯೂಸಿಯಂ ಅನ್ನು ವೀಕ್ಷಿಸಿದರು.
ವಿಧಾನಸೌಧ ವೀಕ್ಷಣೆಯ ವೇಳೆ ತಮ್ಮೋಂದಿಗೆ ಇದ್ದು ವಿಧಾನ ಸೌಧದಲ್ಲಿ ಸಂಪುಟ ಸಭೆ ನಡೆಯುವ ಕಾರ್ಯಕಲಾಪ ಸೇರಿದಂತೆ ಮುಖ್ಯಮಂತ್ರಿಗಳ ಕೊಠಡಿ, ಶಾಸಕರ ಕೊಠಡಿಗಳನ್ನು ವೀಕ್ಷಿಸಲು ಸಹಕರಿಸಿ ವಿವರಣೆ ನೀಡಿದ ಗೃಹ ಸಚಿವರ ವಿಶೇಷ ಕರ್ತವ್ಯಾದಿಕಾರಿ ಲತಾ ರವರು ಮಕ್ಕಳೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪುಸ್ತಕ ನೀಡುವುದರೊಂದಿಗೆ ಊಟದ ವ್ಯವಸ್ಥೆ ಮಾಡಿದರು.
ವಿಧಾನ ಸೌಧ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೆ ಶಾಲಾ ಮಕ್ಕಳು,ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಶಾಲಾ ಮಕ್ಕಳ ವಿಧಾನಸೌಧಾ ವೀಕ್ಷಣಾ ಸಮಯದಲ್ಲಿ ಕಾಂಗ್ರೆಸ್ ಮುಖಂಡ ನಿಕೇತ್ ರಾಜ್ ಮೌರ್ಯ, ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ, ಶಿಕ್ಷಕರುಗಳಾದ ರಂಗನಾಥ್, ಧನಂಜಯ, ರತ್ನಾದೇವಿ, ಶೈಲಾ, ರಮ್ಯ, ನಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ವಾಜೀದ್, ವಸಂತ, ಶ್ವೇತ, ನಳಿನಾ ಹಾಜರಿದ್ದರು.
—————-——ನರಸಿಂಹಯ್ಯ ಕೋಳಾಲ