ಕೊರಟಗೆರೆ-ಹಿರಿಯ ಪತ್ರಕರ್ತ ಜಿ ಎಲ್ ಸುರೇಶ್ ನಿಧನ-ಡಾ ಜಿ ಪರಮೇಶ್ವರ್ ಸಂತಾಪ-ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ

ಕೊರಟಗೆರೆ;ಸುಧೀರ್ಘ 35 ವರ್ಷಗಳ ಕಾಲ ಪತ್ರಕರ್ತರಾಗಿ,ಪತ್ರಿಕಾ ವಿತರಕರಾಗಿ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿದ್ದ ಜಿ ಎಲ್ ಸುರೇಶ್ ರವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದಾರೆ.

ಕನ್ನಡ ಪ್ರಭ ಪತ್ರಿಕೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು ಆಸ್ಪತ್ರೆಗೆ ದಾಖಲಾಗುವ ಮೂರು ದಿನಗಳ ಹಿಂದಿನವರೆಗೂ ವರದಿಗಾರಿಕೆಯ ಜೊತೆ ಜೊತೆಗೆ ಪತ್ರಿಕೆಯನ್ನು ಮನೆಗಳಿಗೂ ಮುಟ್ಟಿಸುವ ಜವಾಬ್ದಾರಿಯನ್ನು ನಿಭಾಯಿಸಿ ಪತ್ರಿಕೋದ್ಯಮದೆಡೆಗೆ ತಮಗಿದ್ದ ತುಡಿತವನ್ನು ತೋರ್ಪಡಿಸಿದ್ದಾರೆ.

ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಅದ್ಯಕ್ಷರಾದ ಪುರುಷೋತ್ತಮ.ಕೆ.ವಿ ರವರ ಮುಂದಾಳತ್ವದಲ್ಲಿ ಸಂತಾಪ ಸೂಚಕ ಸಭೆಯನ್ನು ಹಮ್ಮಿಕೊಂಡು ಮೃತರ ಆತ್ಮಕ್ಕೆ ಸಂತಾಪ ಸೂಚಿಸಲಾಯಿತು.

ಸಂತಾಪ ಸೂಚಿಸಿ ಮಾತನಾಡಿದ ಅದ್ಯಕ್ಷರಾದ ಪುರುಷೋತ್ತಮ.ಕೆ.ವಿ ರವರು, ತಾಲೂಕು ಪತ್ರಿಕೋದ್ಯಮದ ಬೆಳವಣಿಗೆಗೆ ಶ್ರೀಯುತರ ಕೊಡುಗೆಗಳು ಸಾಕಷ್ಟಿವೆ.ಸ್ವಚ್ಛ ಹಾಗು ಸೈದ್ಧಾಂತಿಕ ಪತ್ರಕರ್ತರಾಗಿ ಅವರು ಸಲ್ಲಿಸಿದ್ದ ಸೇವೆ ಅನನ್ಯವಾದದ್ದು.ಕಿರಿಯ ಪತ್ರಕರ್ತರು ಅವರನ್ನು ಆಧರ್ಶವಾಗಿಟ್ಟುಕೊಂಡು ನಡೆಯಬೇಕು.ತಮ್ಮ ಕೊನೆಯ ದಿನಗಳವರೆಗೂ ಅವರು ಪತ್ರಿಕೋದ್ಯಮಕ್ಕೆ ತಮ್ಮನ್ನು ಮುಡಿಪಾಗಿಟ್ಟಿದ್ದರು.ತಾಲೂಕಿಗಷ್ಟೇ ಅಲ್ಲದೆ ಇಡೀ ರಾಜ್ಯದ ಪತ್ರಕರ್ತರೆಲ್ಲರಿಗೂ ಮಾದರಿಯಾಗುವಂತೆ ಜಿ ಎಲ್ ಸುರೇಶ್ ರವರು ಬದುಕಿದ್ದರು ಎಂದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಉಪಾದ್ಯಕ್ಷ ನಾಗರಾಜು,ಜಿಲ್ಲಾ ನಿರ್ದೇಶಕ ಎನ್.ಮೂರ್ತಿ ಪದಾಧಿಕಾರಿಗಳಾದ ಪದ್ಮನಾಭ್, ಕೆ.ಬಿ.ಲೋಕೇಶ್. ಕೆ.ಎನ್.ಸತೀಶ್,ರಮೇಶ್,ಹರೀಶ್,ಲಕ್ಷೀಶ್,ವಿಜಯಶಂಕರ್, ಮಂಜುನಾಥ್,ದೇವರಾಜು,ಸಿದ್ದರಾಜು,ನರಸಿಂಹಮೂರ್ತಿ,ಲಕ್ಷೀಕಾಂತ, ಸತೀಶ್,ಮಂಜುಸ್ವಾಮಿ,ಬಾಬುನಾಯ್ಕ, ಚಂದನ್ ಸೇರಿದಂತೆ ಹಲವರು ಹಾಜರಿದ್ದರು.

ಗೃಹಸಚಿವ ಡಾ ಜಿ ಪರಮೇಶ್ವರ್ ಸಂತಾಪ ..

ಡಾ.ಜಿ.ಪರಮೇಶ್ವರರವರು ಪತ್ರಕರ್ತ ಜಿ.ಎಲ್.ಸುರೇಶ್ ರವರ ಮರಣಕ್ಕೆ ಸಂತಾಪ ವ್ಯಕ್ತಪಡಿಸಿದ್ದು ಅವರ ಕುಟುಂಬಕ್ಕೆ ದು:ಖ ತಡೆದುಕೊಳ್ಳವ ಶಕ್ತಿ ನೀಡಲೆಂದು ಕೊರಿದ್ದಾರೆ ಜೊತೆಗೆ ಕುಟುಂಬದವರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

—————–—ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?