ಕೊರಟಗೆರೆ;ಕಸಬಾ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕೂಟದಲ್ಲಿ ಕೊರಟಗೆರೆ ಪಟ್ಟಣದ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿ ಅತಿ ಹೆಚ್ಚು ಕ್ರೀಡಾ ಸ್ಪರ್ದೆಗಳಲ್ಲಿ ವಿಜೇತರಾಗುವ ಮೂಲಕ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ .
ಬಾಲಕರ ವಿಭಾಗದ ಗುಂಪು ಆಟಗಳಾದ ಕಬ್ಬಡಿ ಪಂದ್ಯದಲ್ಲಿ ಪ್ರಥಮ ಸ್ಥಾನ,ಯೋಗ ಸ್ಪರ್ದೆಯಲ್ಲಿ ಮತ್ತು ಶಟಲ್ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ,ಅಥ್ಲೆಟಿಕ್ಸ್ ಸ್ಲರ್ದೆಗಳಲ್ಲಿ 100 ಮೀಟರ್ ಓಟದ ಸ್ಪರ್ದೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ,200 ಮೀಟರ್ ಪ್ರಥಮ ಹಾಗೂ ದ್ವೀತಿಯ ಸ್ಧಾನ,400 ಮೀಟರ್ ಪ್ರಥಮ, 800 ಮೀಟರ್ ಪ್ರಥಮ,ದ್ವೀತಿಯ ಹಾಗೂ ತೃತೀಯ ಸ್ಥಾನ,1500 ಮೀಟರ್ ಓಟದಲ್ಲಿ ದ್ವೀತಿಯ ಹಾಗೂ 3000 ಸಾವಿರ ಮೀಟರ್ ಓಟದಲ್ಲಿ ತೃತೀಯ ಸ್ಥಾನ, ರಿಲೇ ಪ್ರಥಮ ಸ್ಥಾನ,ಬರ್ಜಿಎಸೆತಪ್ರಥಮ ಹಾಗೂ ದ್ವೀತಿಯ ಸ್ಥಾನ, ಉದ್ದ ಜಿಗಿತ ತೃತೀಯ ಸ್ಥಾನ, ತ್ರಿವಿಧ ಜಿಗಿತ ಸ್ಪರ್ದೆಯಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದರೆ.ಬಾಲಕೀಯರ ವಿಭಾಗದ ಸ್ಪರ್ದೆಗಳಲ್ಲಿ ಬರ್ಜಿ ಎಸೆತದಲ್ಲಿ ದ್ವಿತೀಯ ಸ್ಥಾನ ಉದ್ದಜಿಗಿತ ಸ್ಪರ್ದೆಯಲ್ಲಿ ತೃತೀಯ ಸ್ಥಾನ ಪಡೆದು ಸಮಗ್ರ ಸಾಧನೆ ಮಾಡುವ ಮೂಲಕ ತಾಲೂಕು ಮಟ್ಟಕ್ಕೆ ಜಿಗಿದಿದ್ದಾರೆ.
ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಾಲೂಕು ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲಾ ಅಡಳಿತ ಮಂಡಳಿ, ತುಮಕೂರು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕೊರಟಗೆರೆ ಕಾಳಿದಾಸ ಪ್ರೌಢ ಶಾಲೆಯ ನಿರ್ದೇಶಕ ಜಿ.ಡಿ.ನಾಗಭೂಷಣ್,ಶಾಲೆಯ ಮುಖ್ಯಶಿಕ್ಷಕ ಬಿ.ವಿ.ಜಯಣ್ಣ,ದೈಹಿಕ ಶಿಕ್ಷಕ ಪ್ರಭಾಕರ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
—————–—–ಶ್ರೀನಿವಾಸ್ ಕೊರಟಿಗೆರೆ