ಕೊಟ್ಟಿಗೆಹಾರ :ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಸೋಮವಾರ ಕರೆ ನೀಡಲಾಗಿದ್ದ ಬಣಕಲ್ ಕೊಟ್ಟಿಗೆಹಾರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬಂದ್ ಗೆ ಬೆಂಬಲ ನೀಡಿದರು. ಮೆಡಿಕಲ್, ಹಾಲಿನ ಡೈರಿ, ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಸಂಚಾರ ಎಂದಿನಂತೆ ಇತ್ತು. ಬಣಕಲ್ ಸಂತೆ ಯ ವರ್ತಕರು ಮಧ್ಯಾಹ್ನದ ನಂತರ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರು. ಬಣಕಲ್ ಕೊಟ್ಟಿಗೆಹಾರದಲ್ಲಿ ಶಾಂತಿಯುತವಾಗಿ ಬಂದ್ ನೆರವೇರಿತು.