ಕೊಟ್ಟಿಗೆಹಾರ-ಅಬಕಾರಿ-ಅಧಿಕಾರಿಗಳಿಂದ-ಮೂಡಿಗೆರೆಯಲ್ಲಿ-ಜಂಟಿ- ಕಾರ್ಯಾಚರಣೆ– ಕಳ್ಳಭಟ್ಟಿ-ವಶ

ಕೊಟ್ಟಿಗೆಹಾರ : ಅಬಕಾರಿ ಇಲಾಖೆ ಅಧಿಕಾರಿಗಳು ಮೂಡಿಗೆರೆ ತಾಲ್ಲೂಕಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿಯನ್ನ ವಶಪಡಿಸಿಕೊಂಡಿದ್ದಾರೆ.

ಶ್ರೀಮತಿ ರೂಪ ಎಂ, ಅಬಕಾರಿ ಉಪ ಆಯುಕ್ತರು, ಚಿಕ್ಕಮಗಳೂರು ಜಿಲ್ಲೆ, ಹಾಗೂ ಶ್ರೀ ಸಂತೋಷ್ ಕುಮಾರ್ ಕೆ.ಜಿ., ಅಬಕಾರಿ ಅಧೀಕ್ಷಕರು, ಇವರ ನಿರ್ದೇಶನದಲ್ಲಿ ಶ್ರೀ ಎಂ.ಆರ್. ಶೇಖರ್, ಉಪ ಅಧೀಕ್ಷಕರು, ಮೂಡಿಗೆರೆ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.

ಮೂಡಿಗೆರೆ ತಾಲ್ಲೂಕಿನ ಕಣಚೂರು ಗ್ರಾಮದ ನಾಗೇಶ ಶೆಟ್ಟಿ ಬಿನ್ ಈರಶೆಟ್ಟಿ ಎಂಬಾತನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 30 ಲೀಟರ್ ಕಳ್ಳಭಟ್ಟಿ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೆ ಸಂದರ್ಭದಲ್ಲಿ, ಪುಟ್ಟಸ್ವಾಮಿ ಬಿನ್ ಲೇಟ್ ರಾಮ ಶೆಟ್ಟಿ ಅವರ ವಾಸದ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 05 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದೆ. ಸದರಿ ಇಬ್ಬರು ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ದಾಳಿ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ, ಪೃಥ್ವಿ ಬಿ.ಎಸ್., ಹಾಗೂ ಸಿಬ್ಬಂದಿಗಳಾದ ಶಿವಣ್ಣ, ರಮೇಶ್ ತುಳುಜಣ್ಣನವರ್, ಸುರೇಶ್ ಕಲ್ಯಾಡ್ರ, ರಮೇಶ್ ಹಾಗೂ ವಾಹನ ಚಾಲಕರಾದ ಅನೂಪ್ ಮತ್ತು ಪ್ರವೀಣ್ ಕುಮಾರ್ ಭಾಗಿಯಾಗಿದ್ದರು.

ಅಬಕಾರಿ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಹಾಗೂ ಅಕ್ರಮ ಮದ್ಯ ನಿಷೇಧಿಸಲು ಮುಂದಾಗಿದ್ದು, ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?