ಕೊಟ್ಟಿಗೆಹಾರ-ಭಾರೀ ಮಳೆ-ಗಾಳಿಯ ಪರಿಣಾಮ ಶಾಲೆಯ ಮೇಲ್ಛಾವಣಿ ಕುಸಿತ – ತಪ್ಪಿದ ಭಾರೀ ಅನಾಹುತ

ಚಿಕ್ಕಮಗಳೂರು – ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಸುರಿದ ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ವಿದ್ಯಾ ಭಾರತಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿ, ಸಿಮೆಂಟ್ ಶೀಟ್‌ಗಳು ಕುಸಿದು ಬಿದ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಶಾಲಾ ಕಟ್ಟಡಕ್ಕೆ ಗಂಭೀರ ಹಾನಿಯಾಗಿದೆ. ಸ್ಥಳದಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಶಾಲೆಯ ಆವರಣದಲ್ಲಿ ಬಿದ್ದಿರುವ ಶೀಟ್‌ಗಳು ಮತ್ತು ಹಾನಿಯಾದ ಭಾಗಗಳನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದು, ಮಳೆಗಾಲ ತೀವ್ರವಾಗಿ ಶುರುವಾಗಿದೆ ಎಂಬುದಕ್ಕೆ ಇದು ಎಚ್ಚರಿಕೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮಲೆನಾಡಿನಲ್ಲಿ ಹಗಲಲ್ಲಿ ಬಿಸಿಲು ಹಾಗೂ ರಾತ್ರಿ ಧಾರಾಕಾರ ಮಳೆ ಎಂಬ ವಿಪರೀತ ಹವಾಮಾನ ಸ್ಥಿತಿ ಮುಂದುವರಿದಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಹತ್ವದ ಸೂಚನೆ:

ಮುಂಬರುವ ದಿನಗಳಲ್ಲಿ ಮಳೆ ಇನ್ನೂ ಹೆಚ್ಚು ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ಶಾಲೆಗಳ ನಿರ್ವಹಣಾ ಸಮಿತಿ ಮತ್ತು ಆಡಳಿತ ಯಂತ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

× How can I help you?