ಕೊಟ್ಟಿಗೆಹಾರ-ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಬಿಜೆಪಿಗೆ ದೊರೆತ ಅಭೂತಪೂರ್ವ ಗೆಲುವು-ಶಾಸಕಿ ನಯನ ಮೋಟಮ್ಮರಿಗೆ ತೀವ್ರ ಮುಖಬಂಗ

ಕೊಟ್ಟಿಗೆಹಾರ:ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಸದ್ಯ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೂ ಸಹ ಸ್ಥಳೀಯ ಸಂಸ್ಥೆಗಳ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಜಯವನ್ನು ದಾಖಲಿಸುತ್ತ ಬಂದಿದ್ದು ಇದು ಶಾಸಕಿ ನಯನ ಮೋಟಮ್ಮರಿಗೆ ನುಂಗಲಾರದ ಬಿಸಿ-ತುಪ್ಪವಾಗಿ ಪರಿಣಮಿಸಿದೆ.ಜೊತೆಗೆ ಬಿಜೆಪಿ ಆಂತರಿಕ ಕಚ್ಚಾಟದ ಕಾರಣಕ್ಕೆ ನಯನ ಮೋಟಮ್ಮ ಅದೃಷ್ಟವಶಾತ್ ಶಾಸಕಿಯಾಗಿ ಆಯ್ಕೆಯಾದರು ಎಂಬ ಮಾತುಗಳಿಗೆ ಇದರಿಂದ ಪುಷ್ಟಿ ದೊರೆತಂತಾಗಿದೆ.

ಈ ಚುನಾವಣೆಯ ಜಯಭೇರಿಯ ನಂತರ ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ,ಎಲ್ಲಾ ರಂಗಗಳಲ್ಲೂ ಬಿಜೆಪಿ ಪಕ್ಷವನ್ನು ಸೋಲಿಸಲು ಬಿಜೆಪಿ ಪಕ್ಷದಿಂದ ಮಾತ್ರವೇ ಸಾಧ್ಯ ಹೊರತು ಬೇರೆ ಪಕ್ಷಗಳಿಂದ ಅಸಾಧ್ಯ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಹಾಗು ಕಾರ್ಯಕರ್ತರಿಗೆ ಬಲವಾದ ಸಂದೇಶವೊಂದನ್ನು ರವಾನಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳನ್ನ ಕಾರ್ಯಕರ್ತರು ಬಣಕಲ್ ಪಟ್ಟಣ ಹಾಗೂ ಕೊಟ್ಟಿಗೆಹಾರದಲ್ಲಿ ಮೆರವಣಿಗೆ ನಡೆಸಿದರು.

ಮೆರವಣಿಗೆ ನಂತರ ಕಾರ್ಯಕರ್ತರನ್ನು ಹಾಗೂ ರೈತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರಾದ ಬಿ.ಎಮ್ . ಭರತ್, ಸಹಕಾರ ಸಂಘದ ಅಭಿವೃದ್ಧಿ ನೋಡಿ ರೈತರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಈ ಗೆಲುವು ಕಾರ್ಯಕರ್ತರ ಹಾಗೂ ರೈತರ ಗೆಲುವಾಗಿದೆ ಎಂದರು.

ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಹಾಜರಿದ್ದರು.

ಅಭ್ಯರ್ಥಿಗಳು ಪಡೆದ ಮತಗಳು ಹೀಗಿವೆ..

ಭರತ್ ಬಿ. ಎಂ.ಬಾಳೂರು1043,ಕಲ್ಲೇಶ್ ಬಾಳೂರು 957,ವಿಕ್ರಂ ಗೌಡ 949,ಅಭಿಲಾಶ್ 914,ಗಜೇಂದ್ರ ಗೌಡ 890,ನಾರಾಯಣ ಗೌಡ 806, ರವೀಂದ್ರ. 805, ಲಕ್ಷ್ಮಿ801,ರಂಗನಾಥ್ 798, ಮಮತಾ 770, ಶರತ್ 736,(ಸಾಲಗಾರ ಅಲ್ಲದ ಕ್ಷೇತ್ರ ಯತೀಶ್ ಗೌಡ:100)

————————ಆಶಾ ಸಂತೋಷ್ ಅತ್ತಿಗೆರೆ

Leave a Reply

Your email address will not be published. Required fields are marked *

× How can I help you?