ಕೊಟ್ಟಿಗೆಹಾರ:ಕದ್ದ ಮಾಲನ್ನು ಖರೀದಿಸಬೇಡಿ-ಬಣಕಲ್ ಪೊಲೀಸರಿಂದ ವಿನೂತನ ಕಾರ್ಯಕ್ರಮ

ಕೊಟ್ಟಿಗೆಹಾರ:’ಕದ್ದ ಮಾಲನ್ನು ಖರೀದಿಸಬೇಡಿ’ ಹೀಗೊಂದು ಆದೇಶದಂತಹ ಎಚ್ಚರಿಕೆಯ ಸಂದೇಶದೊಂದಿಗೆ ಪೊಲೀಸರು ಬಣಕಲ್ ಗ್ರಾಮದಲ್ಲಿ ಜಾಗ್ರತಿ ಅಭಿಯಾನ ನಡೆಸಿದರು.

ಇತ್ತೀಚೆಗೆ ಕಾಫಿನಾಡಿನಲ್ಲಿ ವ್ಯಾಪಕ ಕಾಫೀ,ಮೆಣಸು ಹಾಗು ಅಡಿಕೆಯ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಕಣದಲ್ಲಿ ಹರಡಿರುವ ಹಾಗು ತೋಟದಲ್ಲಿನ ಕಾಫಿಯನ್ನು ರೆಕ್ಕೆಯ ಸಮೇತ ಕಳ್ಳತನ ಮಾಡುತ್ತಿರುವ ಪಾಖಂಡಿಗಳು ಪಟ್ಟಣದ ಹಲವು ಅಂಗಡಿಗಳಲ್ಲಿ ಮಾರಾಟಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ತೋಟದ ಮಾಲೀಕರ ಜೊತೆಗೆ ಪ್ರತಿ ಅಂಗಡಿಗಳಿಗೂ ತೆರಳಿದ ಪೊಲೀಸರು ಯಾವುದೇ ಕಾರಣಕ್ಕೂ ಕದ್ದು ತರುವ ಮಾಲನ್ನು ಕೊಳ್ಳದಂತೆ ತಿಳುವಳಿಕೆ ಮೂಡಿಸಿದ್ದು,ಇದನ್ನು ಮೀರಿ ನಡೆದಲ್ಲಿ ತೀವ್ರ ಪರಿಣಾಮವನ್ನು ಎದುರಿಸಬೇಕಾದ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.

—————-—–ಆಶಾ ಸಂತೋಷ್ ಅತ್ತಿಗೆರೆ

Leave a Reply

Your email address will not be published. Required fields are marked *

× How can I help you?