ಕೊಟ್ಟಿಗೆಹಾರ-ದೇವನಗೂಲ್ ಗ್ರಾಮದ ಅನಿಲ್ ನಯನ ಆಚಾರ್ಯ ದಂಪತಿಯ ಒಂದು ವರ್ಷದ ಮಗಳು ತಪಸ್ಯಾಗೆ ಹುಟ್ಟಿನಿಂದಲೇ ಒಂದು ಕಣ್ಣು ಕುರುಡಾಗಿದೆ.ಆರಂಭದಲ್ಲಿ ಸಮಸ್ಯೆ ಪೋಷಕರಿಗೆ ತಿಳಿದಿರಲಿಲ್ಲ.ನಂತರದ ದಿನಗಳಲ್ಲಿ ಮಗುವಿನ ಕಣ್ಣಿನ ಮದ್ಯಭಾಗ ಬಿಳಿಯಾಗುತ್ತಾ ಬಂದಿದೆ.ಇದರಿಂದ ಕಂಗಾಲಾದ ಪೋಷಕರು ವೈದ್ಯರನ್ನು ಸಂಪರ್ಕಿಸಿದಾಗ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಅದಕ್ಕೆ 10ಲಕ್ಷ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಸುದ್ದಿ ತಿಳಿದು ಬಡ ಕುಟುಂಬಕ್ಕೆ ಆಕಾಶವೇ ಧರೆಗುಳಿದಂತೆ ಆಗಿದೆ.
ಒಂದು ಕಡೆ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಲೇಬೇಕು.ಇಲ್ಲವಾದಲ್ಲಿ ಕಣ್ಣು ಕಳೆದುಕೊಳ್ಳುವ ಭೀತಿ ಇನ್ನೊಂದು ಕಡೆ ಅಷ್ಟು ದೊಡ್ಡ ಮೊತ್ತ ಹೊಂದಿಸುವ ಅಸಾಯಕತೆ.ಇದರಿಂದ ಕುಟುಂಬ ದಾನಿಗಳ ಮೊರೆ ಹೋಗಿದ್ದಾರೆ.ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸಹೃದಯಿ ಸಾರ್ವಜನಿಕರ ನೆರವಿಗೆ ದಂಪತಿ ಮನವಿ ಮಾಡಿದ್ದಾರೆ.
ಸಹಾಯ ಹಸ್ತ ನೀಡುವವರು ಮೊಬೈಲ್ ಸಂಖ್ಯೆಗಳು :7760080450/8762362472
ಅಥವಾ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 110052456009ಐ ಎಫ್ ಎಸ್ ಸಿ ಕೋಡ್ :ಸಿ ಎನ್ ಆರ್ ಬಿ0010911
——————-ಸೂರಿ ಬಣಕಲ್