ಕೊಟ್ಟಿಗೆಹಾರ-ಯೂಟ್ಯೂಬರ್ ಒಬ್ಬ ,ತನ್ನ ಚಾನೆಲ್ಲಿಗೋಸ್ಕರ ಜಿಲ್ಲೆಯ ಕಟ್ಟ ಕಡೆಯ ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣ ಮಾಡಲು ಹೋದ ಸಮಯದಲ್ಲಿ ಆನೆಯ ದಾಳಿಗೆ ತುತ್ತಾಗಿ ಕೂದಲೆಳೆ ಅಂತರದಿಂದ ಪಾರಾಗಿರುವ ಘಟನೆಯೊಂದು ವರದಿಯಾಗಿದೆ.
ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಆನೆಯ ದಾಳಿಯಿಂದ ಪಾರಾಗಿ ‘ಸುದ್ದಿ ಮಾಡಲು ಹೋಗಿ ಈಗ ಸುದ್ದಿಯಾಗಿರುವ’ ಯುವಕ.
ಮಂಗಳವಾರ ಸಂಜೆ ಬಿದರತಳ ಗ್ರಾಮಕ್ಕೆ ಹೋಗಿ,ಅಲ್ಲಿಗೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ಒಂದು ಏಕಾಏಕಿ ದಾಳಿಗೆ ಮುಂದಾಗಿದೆ. ಯೂಟ್ಯೂಬರ್ ಅಭಿಷೇಕ್ ಕಂದಕಕ್ಕೆ ಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾನೆ.
ಆನೆಯನ್ನು ಕಂಡ ಅಭಿಷೇಕ್ ಕಂದಕಕ್ಕೆ ಜಿಗಿದಿದ್ದರಿಂದ ಕಾಲು ಹಾಗೂ ಮೂಗಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ. ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಯುನೈಟೆಡ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದು. ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣಕ್ಕೆ ಮಂಗಳವಾರ ತೆರಳಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಆರೀಫ್ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಆರೀಫ್ ,ನವೀನ್,ಸಂಜಯ್ ಗೌಡ ಕೊಟ್ಟಿಗೆಹಾರ,ಗಿರೀಶ್,ಸುಂದರೇಶ,ಭಕ್ತಿ ಶ, ಮೊದಲಾದವರು ಇದ್ದರು.
—————-ಆಶಾ ಸಂತೋಷ್ ಅತ್ತಿಗೆರೆ